ದುರ್ಗಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಮ್ಎಸ್ ಧೋನಿ

First Published Jun 4, 2018, 9:12 PM IST
Highlights

ಹನ್ನೊಂದನೇ ಆವೃತ್ತಿ ಐಪಿಎಲ್ ಟ್ರೋಫಿ ಗೆದ್ದ ಎಮ್ ಎಸ್ ಧೋನಿ, ಹುಟ್ಟೂರು ರಾಂಚಿಯ ಧಿಯೋರಿಯ ದುರ್ಗಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪ್ರತಿ ಸರಣಿಗೂ ಮುನ್ನ ಹಾಗೂ ಬಳಿಕ ಧೋನಿ ದಿಯೋರಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ರಾಂಚಿ(ಜೂನ್.4): ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಪ್ರತಿ ಸರಣಿಗೂ ಮುನ್ನ ಹಾಗೂ ಸರಣಿ ಬಳಿಕ ರಾಂಚಿಯ ಧಿಯೋರಿ ಬಳಿ ಇರುವ ದುರ್ಗಾ ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹನ್ನೊಂದನೇ ಆವೃತ್ತಿ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಧೋನಿ ಇದೀಗ ದುರ್ಗಾ ಮಂದಿರಕ್ಕೆ ಭೇಟಿ ನೀಡಡಿ ಪೂಜೆ ಸಲ್ಲಿಸಿದ್ದಾರೆ.

2 ವರ್ಷದ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟೂರ್ನಿಗೆ ಮರಳಿತ್ತು. ಎಮ್ ಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಈ ಬಾರಿ ಅದ್ಬುತ ಪ್ರದರ್ಶನ ನೀಡಿ 3ನೇ ಬಾರಿಗೆ ಐಪಿಎಲ್ ಟ್ರೋಫಿ ವಶಪಡಿಸಿಕೊಂಡು ದಾಖಲೆ ಬರೆಯಿತು. ಎಂದಿನಂತೆ ಸರಣಿ ಬಳಿಕ ದಿಯೋರಿಯ ದುರ್ಗಾ ಮಂದಿರಕ್ಕೆ ಭೇಟಿ ನೀಡುವ ಧೋನಿ ತನ್ನ ಸಂಪ್ರದಾಯವನ್ನ ತಪ್ಪಿಸಲಿಲ್ಲ. 

ದಿಯೋರಿಯ ದುರ್ಗಾ ಮಾತೆ ಮಂದಿರಕ್ಕೆ ತೆರಳಿದ ಧೋನಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಈ ವೇಳೆ ಧೋನಿಯನ್ನ ನೋಡಲು ಅಭಿಮಾನಿಗಳು ಸುತ್ತುವರಿದರು. 2010 ಹಾಗೂ 2011ರ ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲೂ ಧೋನಿ ಧಿಯೋರಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇನ್ನು 2011ರ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕವೂ ಧೋನಿ ದುರ್ಗಾ ಮಾತೆಯ ಆರ್ಶಿರ್ವಾದ ಪಡೆದಿದ್ದರು. 

click me!