ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ!

By Web Desk  |  First Published Mar 2, 2019, 9:02 AM IST

2019ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ ಮಾಡಿದೆ. ನೂತನ ಜರ್ಸಿಯಲ್ಲಿ ಹಲವು ವಿಶೇಷತೆಗಳಿವೆ. ಭಾರತದ ವಿಶ್ವಕಪ್ ಗೆಲುವಿನ ಸಂಕ್ಷಿಪ್ತ ವಿವರವನ್ನೂ ಈ ಜರ್ಸಿಯಲ್ಲಿ ನೀಡಲಾಗಿದೆ. ಇಲ್ಲಿದೆ ಇದರ ಸ್ಪೆಷಾಲಿಟಿ.


ಹೈದರಾಬಾದ್‌(ಮಾ.02): ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೊಸ ಜೆರ್ಸಿಯಲ್ಲಿ ಮಿಂಚಲಿದೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಮಾಜಿ ನಾಯಕ ಎಂ.ಎಸ್‌.ಧೋನಿ, ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ನೂತನ ಜೆರ್ಸಿ ತೊಟ್ಟು ಕಂಗೊಳಿಸಿದರು.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ!

Tap to resize

Latest Videos

ಜೆರ್ಸಿಯ ಕುತ್ತಿಗೆಯ ಭಾಗದಲ್ಲಿ ಭಾರತ ತಂಡದ ಗೆದ್ದಿರುವ 3 ವಿಶ್ವಕಪ್‌ (1983, 2011ರ ಏಕದಿನ, 2007ರ ಟಿ20)ಗಳ ವಿವರ ಹಾಕಾಲಾಗಿದೆ. ವಿಶ್ವಕಪ್‌ ಗೆದ್ದ ದಿನಾಂಕ, ಗೆದ್ದ ಸ್ಥಳದ ರೇಖಾಂಶಗಳನ್ನು ಮುದ್ರಿಸಿರುವುದು ವಿಶೇಷ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಜೆರ್ಸಿ ಅನಾವರಣಗೊಳಿಸಲಾಯಿತು. 

click me!