
ರಾಂಚಿ(ಮಾ.06): ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ 2 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, ಇದೀಗ 3ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದೆ. ತೃತೀಯ ಪಂದ್ಯಕ್ಕಾಗಿ ಟೀಂ ಇಂಡಿಯಾ ರಾಂಚಿ ತಲುಪಿದೆ. ಧೋನಿ ತವರೂರು ರಾಂಚಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರನ್ನ ತನ್ನ ಹಮ್ಮರ್ ಕಾರಿನಲ್ಲಿ ಧೋನಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ರೋಚಕ ಗೆಲುವಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಿಷ್ಟು..!
ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಏರ್‌ಪೋರ್ಟ್‌ನಿಂದ ಹೊಟೆಲ್‌ಗೆ ಟೀಂ ಬಸ್ ಮೂಲಕ ತೆರಳುತ್ತದೆ. ಆದರೆ ರಾಂಚಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಚ್ಚರಿ ಕಾದಿತ್ತು. ಧೋನಿ ಹಮ್ಮರ್ ಕಾರು ಕ್ರಿಕೆಟಿಗರಿಗಾಗಿ ಕಾದು ನಿಂತಿತ್ತು. ಕೇದಾರ್ ಜಾಧವ್, ರಿಷಬ್ ಪಂತ್ ಸೇರಿದಂತೆ ಕ್ರಿಕೆಟಿಗರನ್ನು ಕಾರಿನಲ್ಲಿ ಕೂರಿಸಿ, ಸ್ವತಃ ಧೋನಿ ಡ್ರೈವ್ ಮಾಡಿಕೊಂಡು ಹೊಟೆಲ್‌ಗೆ ತೆರಳಿದ್ದಾರೆ.
ಇದನ್ನೂ ಓದಿ: ಈತ ಅರ್ಧಶತಕ ಸಿಡಿಸಿದರೆ ತಂಡದ ಸೋಲು ಫಿಕ್ಸ್..!
ಧೋನಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರನ್ನ ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಭರ್ಜರಿ ಫಾರ್ಮ್‌ನಲ್ಲಿರುವ ಧೋನಿ ನಾಗ್ಪುರ ಪಂದ್ಯದಲ್ಲಿ ಅಭಿಮಾನಿ ಜೊತೆ ಮೈದಾನದಲ್ಲಿ ಓಡಾಡಿ ಸುದ್ದಿಯಾಗಿದ್ದರು. ಧೋನಿ ಪಾದ ಮುಟ್ಟಿ ನಮಸ್ಕರಿಸಲು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಬಂದ ಅಭಿಮಾನಿಗೆ ಧೋನಿ ಚಮಕ್ ನೀಡಿದ್ದರು. ಇದೀಗ ಕ್ರಿಕೆಟಿಗರನ್ನ ಕಾರಿನಲ್ಲಿ ಕರೆದೊಯ್ದು ಮತ್ತೆ ಎಲ್ಲರ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಸೆಕ್ಯೂರಿಟಿ ಕಣ್ತಪ್ಪಿಸಿ ಒಳ ನುಗ್ಗಿದ ಅಭಿಮಾನಿ ಜೊತೆ ಧೋನಿ ಫನ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.