2ನೇ ಟೆಸ್ಟ್’ಗೆ ಇಂಗ್ಲೆಂಡ್ ತಂಡ ಪ್ರಕಟ: ಮೊದಲ ಪಂದ್ಯದ ಹೀರೋ ಔಟ್..!

First Published Aug 5, 2018, 5:50 PM IST
Highlights

ಕುಡಿದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿದ್ದ ಸ್ಟೋಕ್ಸ್ ಬ್ರಿಸ್ಟಾಲ್ ಕೋರ್ಟ್’ನಲ್ಲಿ ವಿಚಾರಣೆ ಎದುರಿಸಬೇಕಾಗಿರುವ ಹಿನ್ನಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಸ್ಟೋಕ್ಸ್ ಬದಲಿಗೆ ಮತ್ತೋರ್ವ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದ್ದಾರೆ. 

ಲಂಡನ್[ಆ.05]: ಭಾರತ ವಿರುದ್ಧದ ಎರಡನೇ ಟೆಸ್ಟ್’ಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮೊದಲ ಪಂದ್ಯದ ಹೀರೋ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲಾನ್ ತಂಡದಿಂದ ಹೊರಬಿದ್ದಿದ್ದು ಅವರ ಬದಲಿಗೆ ಓಲ್ಲಿ ಪೋಪ್ ಹಾಗೂ ಕ್ರಿಸ್ ವೋಕ್ಸ್ ತಂಡ ಕೂಡಿಕೊಂಡಿದ್ದಾರೆ.

ಕುಡಿದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿದ್ದ ಸ್ಟೋಕ್ಸ್ ಬ್ರಿಸ್ಟಾಲ್ ಕೋರ್ಟ್’ನಲ್ಲಿ ವಿಚಾರಣೆ ಎದುರಿಸಬೇಕಾಗಿರುವ ಹಿನ್ನಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಸ್ಟೋಕ್ಸ್ ಬದಲಿಗೆ ಮತ್ತೋರ್ವ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದ್ದಾರೆ.

ಇನ್ನು ಪರ್ತ್ ಟೆಸ್ಟ್’ನಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಡೇವಿಡ್ ಮಲಾನ್ ಆಡಿದ 12 ಇನ್ನಿಂಗ್ಸ್’ಗಳಲ್ಲಿ ಕೇವಲ ಎರಡು ಬಾರಿಯಷ್ಟೇ 30ರ ಗಡಿ ಮುಟ್ಟಿದ್ದಾರೆ. 15 ಟೆಸ್ಟ್’ಗಳಲ್ಲಿ ಕೇವಲ 27.84ರ ಸರಾಸರಿಯಲ್ಲಿ ರನ್ ಕಲೆಹಾಕಿ ರನ್ ಬರ ಎದುರಿಸುತ್ತಿರುವ ಮಲಾನ್ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಇವರ ಬದಲಿಗೆ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಕೇವಲ 15 ಪಂದ್ಯಗಳನ್ನಾಡಿರುವ 20 ವರ್ಷದ ಓಲ್ಲಿ ಪೋಪ್ ಅವರಿಗೆ ತಂಡದಲ್ಲಿ ಸ್ಥಾನ ಒದಗಿಸಲಾಗಿದೆ. ಕೌಂಟಿ ಚಾಂಪಿಯನ್’ಶಿಪ್’ನಲ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುವ ಪೋಪ್ ಈ ಆವೃತ್ತಿಯಲ್ಲಿ 85.50 ಸರಾಸರಿಯಲ್ಲಿ ಮೂರು ಶತಕಗಳು ಸೇರಿದಂತೆ 684 ರನ್ ಸಿಡಿಸಿ ಆಯ್ಕೆಸಮಿತಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

2ನೇ ಟೆಸ್ಟ್’ಗೆ ಇಂಗ್ಲೆಂಡ್ ತಂಡ ಹೀಗಿದೆ:
ಅಲಿಸ್ಟರ್ ಕುಕ್, ಜೋಸ್ ಬಟ್ಲರ್, ಕೇಟನ್ ಜೆನ್ನಿಂಗ್ಸ್, ಜೋ ರೋಟ್[ನಾಯಕ], ಓಲ್ಲಿ ಪೋಪ್, ಜಾನಿ ಬೈರಿಸ್ಟೋ, ಮೋಯಿನ್ ಅಲಿ, ಕಿಸ್ ವೋಕ್ಸ್, ಆದಿಲ್ ರಶೀದ್, ಸ್ಯಾಮ್ ಕುರ್ರಾನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್’ಸನ್, ಜ್ಯಾಮಿ ಪೋರ್ಟರ್.   

click me!