ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಕೊಹ್ಲಿಗೆ ವಿನ್ನಿಂಗ್ ಬಾಲ್'ನ ಗಿಫ್ಟ್ ಕೊಟ್ಟ ಧೋನಿ

By Suvarna Web DeskFirst Published Jan 23, 2017, 3:22 PM IST
Highlights

"ನಾಯಕನಾಗಿ ಇದು ನನ್ನ ಮೊದಲ ಸರಣಿ ಗೆಲುವಾದ್ದರಿಂದ ಧೋನಿ ಕೊಟ್ಟ ಆ ಚೆಂಡು ನಿಜಕ್ಕೂ ಅಮೂಲ್ಯವಾದುದು" ಎಂದು ಕೊಹ್ಲಿ ಹೇಳಿದ್ದಾರೆ.

ನವದೆಹಲಿ(ಜ. 23): ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ಗೆದ್ದ ನಂತರ ಮಹೇಂದ್ರ ಸಿಂಗ್ ಧೋನಿಯವರು ವಿರಾಟ್ ಕೊಹ್ಲಿಗೆ ಮ್ಯಾಚ್ ವಿನ್ನಿಂಗ್ ಬಾಲ್'ನ ಉಡುಗೊರೆ ನೀಡಿದ್ದಾರೆ. ಎರಡನೇ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಧೋನಿಯವರು ಪಂದ್ಯದಲ್ಲಿ ಬಳಸಿದ ಚೆಂಡನ್ನು ಎತ್ತಿ ಇಟ್ಟುಕೊಂಡಿದ್ದರು. ಸರಣಿಯ ಕೊನೆಯ ಪಂದ್ಯದ ಬಳಿಕ ಕೊಹ್ಲಿಗೆ ಆ ಚೆಂಡನ್ನು ಗಿಫ್ಟ್ ಆಗಿ ಧೋನಿ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಪ್ರತೀ ಪಂದ್ಯ ಗೆದ್ದಾಗೆಲ್ಲಾ ಸ್ಟಂಪ್'ಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಆದರೆ, ದುಬಾರಿ ಎಲ್'ಇಡಿ ಸ್ಟಂಪ್ ಬಂದ ಬಳಿಕ ಧೋನಿಯ ಆ ಸ್ಟಂಪ್ ಕಲೆಕ್ಷನ್'ಗೆ ಬ್ರೇಕ್ ಬಿದ್ದಿದೆ. ಸ್ಟಂಪ್ ಬದಲು ಚೆಂಡನ್ನು ಸಂಗ್ರಹಿಸಲು ತೊಡಗಿದ್ದರು ಧೋನಿ. ಈಗ ಕ್ಯಾಪ್ಟನ್ಸಿಯಿಂದ ರಿಟೈರ್ ಆದ ಮೇಲೆ ಇದೀಗ ಆ ಚಟವನ್ನು ವಿರಾಟ್ ಕೊಹ್ಲಿಗೆ ಅಂಟಿಸಲು ಧೋನಿ ಯತ್ನಿಸಿದ್ದಾರೆ. ಧೋನಿ ಕೊಟ್ಟ ಆ ಮ್ಯಾಚ್ ವಿನ್ನಿಂಗ್ ಬಾಲ್'ನ ಗಿಫ್ಟ್'ಗೆ ಕೊಹ್ಲಿ ಫಿದಾ ಆಗಿದ್ದಾರೆ.

"ನಾಯಕನಾಗಿ ಇದು ನನ್ನ ಮೊದಲ ಸರಣಿ ಗೆಲುವಾದ್ದರಿಂದ ಧೋನಿ ಕೊಟ್ಟ ಆ ಚೆಂಡು ನಿಜಕ್ಕೂ ಅಮೂಲ್ಯವಾದುದು. ಧೋನಿ ತಮ್ಮ ಹಸ್ತಾಕ್ಷರಗಳನ್ನು ಹಾಕಿ ಚೆಂಡನ್ನು ನೀಡಿದ ಆ ಕ್ಷಣ ನಿಜಕ್ಕೂ ಅವಿಸ್ಮರಣೀಯ" ಎಂದು ಕೊಹ್ಲಿ ಹೇಳಿದರೆಂದು ಬಿಸಿಸಿಐನ ವೆಬ್'ಸೈಟ್'ನಲ್ಲಿ ವರದಿ ಬರೆಯಲಾಗಿದೆ.

click me!