ಧೋನಿ, ಅಶ್ವಿನ್'ಗೆ ಶಾಕ್ ನೀಡಿದ ಬಿಸಿಸಿಐ: ಪ್ರಮುಖ ಪಟ್ಟಿಯಿಂದ ಔಟ್

By Suvarna Web DeskFirst Published Mar 7, 2018, 9:14 PM IST
Highlights

ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಬೌಲರ್'ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಎ ಪ್ಲಸ್ ಪಟ್ಟಿಯಿಂದ ಉಳಿಸಿಕೊಳ್ಳಲಾಗಿದೆ. ಈ ಐವರು ಆಟಗಾರರಿಗೆ ವಾರ್ಷಿಕ 7 ಕೋಟಿ ರೂ. ವೇತನ ನೀಡಲಾಗುತ್ತದೆ.

ನವದೆಹಲಿ(ಮಾ.07): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಹಿರಿಯ ಲೆಗ್ ಸ್ಪಿನ್ನರ್ ಆರ್.ಅಶ್ವಿನ್ ಬಿಸಿಸಿಐನ ಎ ಪ್ಲಸ್ ಪಟ್ಟಿಯಿಂದ ಕೈಬಿಡಲಾಗಿದೆ.

ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಬೌಲರ್'ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಎ ಪ್ಲಸ್ ಪಟ್ಟಿಯಿಂದ ಉಳಿಸಿಕೊಳ್ಳಲಾಗಿದೆ. ಈ ಐವರು ಆಟಗಾರರಿಗೆ ವಾರ್ಷಿಕ 7 ಕೋಟಿ ರೂ. ವೇತನ ನೀಡಲಾಗುತ್ತದೆ.

ಧೋನಿ, ಅಶ್ವಿನ್, ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಶಾ ಅವರು ಎ ಪಟ್ಟಿಯಲ್ಲಿದ್ದು 5 ಕೋಟಿ ನೀಡಲಾಗುತ್ತದೆ.

ಬಿ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ಉಮೇಶ್ ಯಾದವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಾಹಲ್, ಹರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಇದ್ದು ಇವರಿಗೆ ವಾರ್ಷಿಕ 3 ಕೋಟಿ ಹಾಗೂ ಸಿ ಪಟ್ಟಿಯಲ್ಲಿ ಕೇದರ್ ಜಾದವ್, ಮನೀಶ್ ಪಾಂಡೆ, ಅಕ್ಸ'ರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥೀವ್ ಪಟೇಲ್ ಹಾಗೂ ಜಯಂತ್ ಯಾದವ್ ಇದ್ದಾರೆ. ಇವರಿಗೆ ವಾರ್ಷಿಕ 1 ಕೋಟಿ ರೂ. ನೀಡಲಾಗುತ್ತದೆ.

ಈ ಗುತ್ತಿಗೆ ಅವಧಿಯು ಅಕ್ಟೋಬರ್ 2017 ರಿಂದ ಸೆಪ್ಟೆಂಬರ್ 2018ರವರೆಗೆ ಇರಲಿದೆ. ಮಹಿಳಾ ಕ್ರಿಕೆಟಿಗರ ಟಾಪ್ ಪಟ್ಟಿಯ ವಿಭಾಗದಲ್ಲಿ ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ಹರ್ಮ'ನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ಇದ್ದಾರೆ. ಇವರಿಗೆ ವಾರ್ಷಿಕ 50 ಲಕ್ಷ ರೂ. ನೀಡಲಾಗುತ್ತದೆ. ಬಿ ಪಟ್ಟಿಯಲ್ಲಿರುವ ಕನ್ನಡತಿಯರಾದ ವೇದ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್'ವಾಡ್ ಅವರಿಗೆ ವಾರ್ಷಿಕ 30 ಲಕ್ಷ ರೂ. ಪಾವತಿಸಲಾಗುತ್ತದೆ.

click me!