ಮನೆಯಲ್ಲಿ ಧೋನಿ ಹಾಗೂ ಝಿವಾ ಬೋಜ್‌ಪುರಿ-ತಮಿಳಲ್ಲೇ ಮಾತು!

Published : Nov 26, 2018, 02:25 PM IST
ಮನೆಯಲ್ಲಿ ಧೋನಿ ಹಾಗೂ ಝಿವಾ ಬೋಜ್‌ಪುರಿ-ತಮಿಳಲ್ಲೇ ಮಾತು!

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ. ಹಿಂದಿ ಅಥವಾ ಬಿಹಾರಿ ಅಂದುಕೊಂಡರೆ ತಪ್ಪು. ಧೋನಿ ಹಾಗೂ ಪುತ್ರಿ ಝಿವಾ ಈ ಎರಡು ಭಾಷೆ ಬಿಟ್ಟು ಇನ್ನೆರಡು ಭಾಷೆಯಲ್ಲಿ ಮಾತುಕತೆ ನಡೆಸಿದ್ದಾರೆ. ಇಲ್ಲಿದೆ ನೋಡಿ.

ರಾಂಚಿ(ನ.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ವಿಶ್ರಾಂತಿಗೆ ಜಾರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿರುವ ಧೋನಿ, ಸಿಕ್ಕಿರುವ ಸಮಯವನ್ನ ಪುತ್ರಿ ಝಿವಾ ಧೋನಿ ಜೊತೆ ಕಾಲಕಳೆಯುತ್ತಿದ್ದಾರೆ.

ಧೋನಿ ಹಾಗೂ ಝಿವಾ ನಡುವಿನ ಸಂಭಾಷಣೆ ಇದೀಗ ಎಲ್ಲರ ಗಮನಸೆಳೆದಿದೆ. ಕಾರಣ ಧೋನಿ ಹಾಗು ಝಿವಾ ಭೋಜ್‌ಪುರಿ ಹಾಗೂ ತಮಿಳು ಭಾಷೆಯಲ್ಲಿ ಮಾತುಕತೆ ನಡೆಸೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಭೋಜ್‌ಪುರಿ ಹಾಗೂ ತಮಿಳು ಭಾಷೆಯಲ್ಲಿ ಪುತ್ರಿ ಝಿವಾ ಹೇಗಿದ್ದೀರಿ ಎಂದು ಕೇಳಿದ್ದಾಳೆ. ಇದಕ್ಕೆ ಧೋನಿ ಕೂಡ ಎರಡೂ ಭಾಷೆಯಲ್ಲಿ ಉತ್ತರಿಸಿದ್ದಾರೆ.  ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುವ ಎಂ.ಎಸ್.ಧೋನಿ ಈಗಾಗಲೇ ತಮಿಳು ಭಾಷೆಯಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ಇದೀಗ ಭೋಜ್‌ಪುರಿ ಕೂಡ ಕಲಿತಿದ್ದಾರೆ.

ಇದನ್ನೂ ಓದಿ: ಐಪಿಎಲ್‌ನಿಂದ ತಮಿಳು ಕಲೀತಿದ್ದಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

ಧೋನಿ ಮಾತ್ರವಲ್ಲ ಪುತ್ರಿ ಝಿವಾ ಕೂಡ ಇದೀಗ ಬೋಜ್‌ಪುರಿ ಹಾಗೂ ತಮಿಳು ಕಲಿತಿರುವುದು ವಿಶೇಷ. ಈ ಹಿಂದೆ ಝಿವಾ ಮಲೆಯಾಳಂ ಭಾಷೆಯಲ್ಲಿ ಹಾಡು ಕೂಡ ಹಾಡಿದ್ದರು.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ; ಈ ದಾಖಲೆ ಮುರಿಯಲು ಕೊಹ್ಲಿ, ಬಟ್ಲರ್‌ಗೂ ಸಾಧ್ಯವಿಲ್ಲ!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!