
ಮುಂಬೈ(ಡಿ.16): ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ಘಟನೆಯಾಗಿ ಪರಿಣಮಿಸಿರುವ ಮಂಕಿ ಗೇಟ್ ಪ್ರಕರಣ ಮತ್ತೆ ಚರ್ಚೆಗೆ ಒಳಗಾಗಿದೆ. 2008ರಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಂಡ್ರೋ ಸೈಮಂಡ್ಸ್ ನಡುವಿನ ಪ್ರಕರಣ 10 ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಐಪಿಎಲ್ 2019: ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹೀಗಿದೆ!
ಇತ್ತೀಚೆಗಿನ ಸಂದರ್ಶನದಲ್ಲಿ ಆ್ಯಂಡ್ರೂ ಸೈಮಂಡ್ಸ್ ಅಚ್ಚರಿ ಹೇಳಿಕೆ ನೀಡಿದ್ದರು. ಮಂಕಿ ಗೇಟ್ ಪ್ರಕರಣದ ಬಳಿಕ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಒಂದೇ ತಂಡದಲ್ಲಿ ಹರ್ಭಜನ್ ಹಾಗೂ ಸೈಮಂಡ್ಸ್ ಆಡಿದ್ದರು. ಈ ವೇಳೆ ಹರ್ಭಜನ್ ಮಂಕಿ ಗೇಟ್ ಪ್ರಕರಣಕ್ಕೆ ಕ್ಷಮೆ ಕೇಳಿದ್ದರು. ನನ್ನ ಭುಜದಲ್ಲಿ ತಲೆ ಇಟ್ಟು ಅತ್ತಿದ್ದರು ಎಂದು ಸೈಮಂಡ್ಸ್ ಹೇಳಿದ್ದರು.
ಇದನ್ನೂ ಓದಿ: BWF ವಿಶ್ವ ಟೂರ್ ಬ್ಯಾಡ್ಮಿಂಟನ್: ಇತಿಹಾಸ ಬರೆದ ಪಿವಿ ಸಿಂಧು!
ಸೈಮಂಡ್ಸ್ ಈ ಹೇಳಿಕೆಗೆ ಹರ್ಭಜನ್ ತಿರುಗೇಟು ನೀಡಿದ್ದಾರೆ. ಸೈಮಂಡ್ಸ್ ಅತ್ಯುತ್ತಮ ಕ್ರಿಕೆಟಿಗೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಸೈಮಂಡ್ಸ್ ಇದೀಗ ಉತ್ತಮ ಕಾದಂಬರಿ ಬರಹಗಾರನಾಗಿ ಬದಲಾಗಿದ್ದಾರೆ. 2008ರಲ್ಲಿ ಮಾರಾಟ ಮಾಡಿದ್ದ ಕತೆಯನ್ನ ಇದೀಗ 2018ರಲ್ಲೂ ಮಾರಾಟ ಮಾಡುತ್ತಿದ್ದಾರೆ ಎಂದು ಹರ್ಭಜನ್ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.
2008 ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಆರೋಪಕ್ಕೆ ತುತ್ತಾದರು. ಸೈಮಂಡ್ಸ್‌ರನ್ನ ಮಂಕಿ ಎಂದು ಕರೆದಿದ್ದಾರೆ ಎಂದು 3 ಪಂದ್ಯದಿಂದ ಅಮಾನತು ಮಾಡಲಾಗಿತ್ತು. ಆದರೆ ವಿಚಾರಣೆಯಲ್ಲಿ ಹರ್ಭಜನ್ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೆ ಈ ಪ್ರಕರಣ ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.