ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿರುವ ಐಪಿಎಲ್ ಹರಾಜು ತೀವ್ರ ಕುತೂಹಲ ಕೆರಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾರನ್ನ ಖರೀದಿಸಲಿದೆ? ಅನ್ನೋ ಅಭಿಮಾನಿಗಳು ಲೆಕ್ಕಾಚಾರ ಶುರುವಾಗಿದೆ. ಹರಾಜಿಗೂ ಮೊದಲು ಸಿಎಸ್‌ಕೆ ತಂಡ ಹೇಗಿದೆ ಅನ್ನೋ ಡೀಟೇಲ್ಸ್ ಇಲ್ಲಿದೆ.
ಚೆನ್ನೈ(ಡಿ.16): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯೋ ವಿಶ್ವಾಸದಲ್ಲಿದೆ. ಇದಕ್ಕಾಗಿ 18 ಆಟಗಾರರನ್ನ ತನ್ನಲ್ಲೇ ಉಳಿಸಿಕೊಂಡು ಕೇವಲ ಮೂವರನ್ನ ಮಾತ್ರ ಕೈಬಿಟ್ಟಿತ್ತು. ಇದೀಗ ಹರಾಜಿನಲ್ಲಿ ಪ್ರತಿಭಾನ್ವಿತರಿಗೆ ಅವಕಾಶ ನೀಡಿ ತಂಡವನ್ನ ಮತ್ತಷ್ಟು ಬಲಪಡಿಸಲು ಮುಂದಾಗಿದೆ.
ಇದನ್ನೂ ಓದಿ: ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!
ಎಂ.ಎಸ್.ಧೋನಿ ನಾಯಕತ್ವದ ಸಿಎಸ್‌ಕೆ ತಂಡದಲ್ಲಿ ಸುರೇಶ್ ರೈನಾ, ರವೀಂದ್ರ ಜಡೇಜಾ. ಅಂಬಾಟಿ ರಾಯುಡು,ಶೇನ್ ವ್ಯಾಟ್ಸನ್ ಸೇರಿದಂತೆ ಸ್ಟಾರ್ ಆಟಗಾರರು ತುಂಬಿಕೊಂಡಿದ್ದಾರೆ. ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ರೀತಿ ಇದೆ.
ಇದನ್ನೂ ಓದಿ: ಐಪಿಎಲ್ 2019: ಸದ್ಯ ಹೀಗಿದೆ ನೋಡಿ ಮುಂಬೈ ಇಂಡಿಯನ್ಸ್ ತಂಡ!