
ಕರಾಚಿ(ನ.22): ಪಾಕಿಸ್ತಾನ ಮಾಜಿ ಕ್ರಿಕೆಟ್ ದಂತಕತೆ ಶೋಯೆಬ್ ಅಖ್ತರ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ್ದು, ಸಚಿನ್ 100 ಶತಕಗಳ ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್'ನ ಶ್ರೇಷ್ಟ ಕ್ರಿಕೆಟಿಗ ಎಂದು ಮುಕ್ತಕಂಠದಿಂದ ಶ್ಲಾಘಿಸಿರುವ ಅಖ್ತರ್ 120 ಶತಕಗಳನ್ನು ಸಿಡಿಸಬಲ್ಲರು ಎಂದಿದ್ದಾರೆ. ರನ್ ಚೇಸ್ ಮಾಡುವಾಗ, ವಿರಾಟ್ ಅವರಷ್ಟು ಯಶಸ್ವಿಯಾಗಿ ಇನಿಂಗ್ಸ್ ಕಟ್ಟುವ ಸಾಮರ್ಥ್ಯವನ್ನು ಮತ್ತೆ ಯಾವ ಬ್ಯಾಟ್ಸ್'ಮನ್'ನಿಂದಲೂ ನೋಡಿಲ್ಲ. ಈಗಷ್ಟೇ 50 ಅಂತರಾಷ್ಟ್ರೀಯ ಶತಕ ಪೂರೈಸಿರುವ ಕೊಹ್ಲಿ, ಮುಂದೊಂದು ದಿನ ಸಚಿನ್ ದಾಖಲೆ ಮುರಿಯಬಲ್ಲರು ಎಂದಿದ್ದಾರೆ.
ಮಿಸ್ಬಾ ಉಲ್ ಹಕ್ 43 ವರ್ಷದವರೆಗೆ ಆಡುತ್ತಾರೆ ಎಂದಾದರೆ, ವಿರಾಟ್ ಕೊಹ್ಲಿ 44 ವರ್ಷ ಖಂಡಿತ ಆಡುತ್ತಾರೆ. ಒಂದು ವೇಳೆ ಅಷ್ಟು ದೀರ್ಘಕಾಲ ಕ್ರಿಕೆಟ್ ಆಡಿದರೆ ವಿರಾಟ್ ಕೊಹ್ಲಿ 120 ಶತಕ ಸಿಡಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಸಚಿನ್ ತೆಂಡೂಲ್ಕರ್ ಜೊತೆ ಕೊಹ್ಲಿ ಹೋಲಿಕೆ ಮಾಡುವುದು ಸರಿಯಲ್ಲ. ಸಚಿನ್ ಸಾರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್'ಮನ್. ವಿರಾಟ್ ಈ ಕಾಲಘಟ್ಟದ ಶ್ರೇಷ್ಟ ಬ್ಯಾಟ್ಸ್'ಮನ್ ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.