ಟೆಸ್ಟ್ ಶ್ರೇಯಾಂಕ; ಟಾಪ್-5 ಪಟ್ಟಿಗೆ ಲಗ್ಗೆಯಿಟ್ಟ ಕೊಹ್ಲಿ; ಕುಸಿದ ಜಡೇಜಾ

By Suvarna Web DeskFirst Published Nov 21, 2017, 10:14 PM IST
Highlights

ಇನ್ನು ಬೌಲರ್‌'ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಲಂಕಾ ವಿರುದ್ಧ ಮೊದಲ ಟೆಸ್ಟ್‌'ನಲ್ಲಿ ಅವರು ಬೌಲ್ ಮಾಡಿದ್ದು ಕೇವಲ 2 ಓವರ್ ಮಾತ್ರ. ಮೊದಲ ಟೆಸ್ಟ್ ಭಾರತದ ತ್ರಿವಳಿ ವೇಗಿಗಳು 17 ವಿಕೆಟ್ ಕಬಳಿಸಿದ್ದರು. ಸ್ಪಿನ್ನರ್'ಗಳಾದ ಅಶ್ವಿನ್ ಹಾಗೂ ಜಡೇಜಾ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ದುಬೈ(ನ.21): ಶ್ರೀಲಂಕಾ ವಿರುದ್ಧ ಎರಡನೇ ಇನಿಂಗ್ಸ್'ನಲ್ಲಿ ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಮುಂಬಡ್ತಿ ಪಡೆದು 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಮೊದಲ ಟೆಸ್ಟ್'ನಲ್ಲಿ ಒಂದೂ ವಿಕೆಟ್ ಕೀಳದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌'ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 104 ರನ್ ಸಿಡಿಸಿದ್ದ ಕೊಹ್ಲಿ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌'ರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ.

ಇನ್ನು ಟಾಪ್ 10 ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ಚೇತೇಶ್ವರ್ ಪೂಜಾರ 4ನೇ ಸ್ಥಾನದಲ್ಲಿದ್ದರೆ, ಕೆ.ಎಲ್.ರಾಹುಲ್ 8ನೇ ಸ್ಥಾನದಲ್ಲಿದ್ದಾರೆ.

ಇನ್ನು ಬೌಲರ್‌'ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಲಂಕಾ ವಿರುದ್ಧ ಮೊದಲ ಟೆಸ್ಟ್‌'ನಲ್ಲಿ ಅವರು ಬೌಲ್ ಮಾಡಿದ್ದು ಕೇವಲ 2 ಓವರ್ ಮಾತ್ರ. ಮೊದಲ ಟೆಸ್ಟ್ ಭಾರತದ ತ್ರಿವಳಿ ವೇಗಿಗಳು 17 ವಿಕೆಟ್ ಕಬಳಿಸಿದ್ದರು. ಸ್ಪಿನ್ನರ್'ಗಳಾದ ಅಶ್ವಿನ್ ಹಾಗೂ ಜಡೇಜಾ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಅದ್ಭುತ ಪ್ರದರ್ಶನದ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಭುವನೇಶ್ವರ್ ಕುಮಾರ್ 8 ಸ್ಥಾನಗಳ ಏರಿಕೆ ಕಂಡಿದ್ದು 29ನೇ ಸ್ಥಾನದಲ್ಲಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ. ಇನ್ನು 6 ವಿಕೆಟ್ ಕಬಳಿಸಿದ ಮೊಹಮದ್ ಶಮಿ 18ನೇ ಸ್ಥಾನಕ್ಕೇರಿದ್ದಾರೆ.

ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ 125 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಕ್ರಮವಾಗಿ ನಂತರದ 2 ಸ್ಥಾನಗಳಲ್ಲಿವೆ.

click me!