
ಬ್ರಸ್ಟಲ್(ಜು.12): ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ಹೆಚ್ಚು ರನ್ ಗಳಿಸಿದ ಶ್ರೇಯ ಮಿಥಾಲಿ ಅವರಿಗೆ ಸಲ್ಲುತ್ತದೆ. ಇಂಗ್ಲೆಂಡ್'ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವಕಪ್'ನ ಲೀಗ್ ಪಂದ್ಯದಲ್ಲಿ ಇವರು 32 ರನ್ ಗಳಿಸಿದ್ದಾಗ ಇಂಗ್ಲೆಂಡ್ ಆಟಗಾರ್ತಿ ಷಾರ್ಲೆಟ್ ಎಡ್ವರ್ಡ್ಸ್ ದಾಖಲಿಸಿದ್ದ 5992 ರನ್'ಗಳನ್ನು ಇವರು ಸರಿಗಟ್ಟಿದ್ದಾರೆ.
ಇನ್ನೊಂದು ಹೊಸ ದಾಖಲೆ ಬರೆದಿರುವ ಇವರು ಮಹಿಳಾ ಏಕದಿನ ಕ್ರಿಕೆಟ್'ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಚಾರ್ಲೊಟ್ ಎಡ್ವರ್ಡ್ಸ್ 191 ಏಕದಿನ ಪಂದ್ಯಗಳಲ್ಲಿ 5992 ರನ್ ಹೊಡೆದಿದ್ದರು. ಆದರೆ ಮಿಥಾಲಿ 183 ಪಂದ್ಯಗಳಲ್ಲೇ 6 ಸಾವಿರ ರನ್ ಹೊಡೆದ ಸಾಧನೆ ಮಾಡಿ ವಿಶ್ವದಾಖಲೆ ಬರೆದಿದ್ದಾರೆ.
ಇವರ 6 ಸಹಸ್ರ ರನ್'ಗಳಲ್ಲಿ 6 ಶತಕಗಳು ಹಾಗೂ 48 ಅರ್ಧ ಶತಕಗಳಿವೆ. ವಿಶ್ವಕಪ್'ಗೂ ಮುನ್ನ ನಡೆದ ಟೂರ್ನ'ಮೆಂಟ್'ನಲ್ಲಿ ಸತತ 7 ಅರ್ಧಶತಕಗಳನ್ನು ದಾಖಲಿಸಿದ ಖ್ಯಾತಿ ಇವರದ್ದಾಗಿದೆ. ರಾಜಸ್ಥಾನದವರಾದ ಇವರು 1999ರಲ್ಲಿ ಕ್ರಿಕೆಟ್ ಪಾದರ್ಪಣೆ ಮಾಡಿದ್ದು, ಪ್ರಸ್ತುತ ಮಹಿಳಾ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.