ರವಿಶಾಸ್ತ್ರಿಯನ್ನು ಹತೋಟಿಯಲ್ಲಿಡಲು ಡ್ರಾವಿಡ್, ಜಹೀರ್'ನನ್ನು ಆಯ್ಕೆ ಮಾಡಿದ್ರಾ ಗಂಗೂಲಿ?

By Suvarna Web DeskFirst Published Jul 12, 2017, 3:09 PM IST
Highlights

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತನ್ನ ನೇರಮಾತಿನಿಂದ ಕ್ರಿಕೆಟ್ ಲೋಕದಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಕೋಚ್ ಆಯ್ಕೆಯಲ್ಲೂ ಅವರ ದೂರದೃಷ್ಟಿ ಎಲ್ಲರ ಗಮನಕ್ಕೂ ಬಂದಿದೆ. ತಾವು ಆಯ್ಕೆ ಮಾಡಿದ್ದ ವಿರೇಂದ್ರ ಸೆಹ್ವಾಗ್, ಮಾಜಿ ನಿರ್ದೇಶಕ ರವಿಶಾಸ್ತ್ರಿಯ ಎದುರು ಕ್ಷೀಣಗೊಳ್ಳುತ್ತಿರುವುದನ್ನು ಕಂಡ ಗಂಗೂಲಿ ಆ ಕೂಡಲೇ ನಾಯಕ ವಿರಾಟ್ ಹಾಗೂ ನೂತನ ಕೋಚ್ ರವಿಶಾಸ್ತ್ರಿ ತಮಗಿಷ್ಟ ಬಂದಂತೆ ನಡೆದುಕೊಳ್ಳದಿರಲಿ ಎಂದು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ಮುಂಬೈ(ಜು.12): ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತನ್ನ ನೇರಮಾತಿನಿಂದ ಕ್ರಿಕೆಟ್ ಲೋಕದಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಕೋಚ್ ಆಯ್ಕೆಯಲ್ಲೂ ಅವರ ದೂರದೃಷ್ಟಿ ಎಲ್ಲರ ಗಮನಕ್ಕೂ ಬಂದಿದೆ. ತಾವು ಆಯ್ಕೆ ಮಾಡಿದ್ದ ವಿರೇಂದ್ರ ಸೆಹ್ವಾಗ್, ಮಾಜಿ ನಿರ್ದೇಶಕ ರವಿಶಾಸ್ತ್ರಿಯ ಎದುರು ಕ್ಷೀಣಗೊಳ್ಳುತ್ತಿರುವುದನ್ನು ಕಂಡ ಗಂಗೂಲಿ ಆ ಕೂಡಲೇ ನಾಯಕ ವಿರಾಟ್ ಹಾಗೂ ನೂತನ ಕೋಚ್ ರವಿಶಾಸ್ತ್ರಿ ತಮಗಿಷ್ಟ ಬಂದಂತೆ ನಡೆದುಕೊಳ್ಳದಿರಲಿ ಎಂದು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ರವಿಶಾಸ್ತ್ರಿಯನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡುವುದರೊಂದಿಗೆ, ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ರಾಹುಲ್ ದ್ರಾವಿಡ್ ಹೆಸರನ್ನು ಬಹಿರಂಗಗೊಳಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜಹೀರ್ ಖಾನ್ ಸಾಮರ್ಥ್ಯದ ಮೇಲೆ ಯಾರಿಗೂ ಅನುಮಾನವಿಲ್ಲದಿದ್ದರೂ, ಬೌಲಿಂಗ್ ಕೋಚ್ ಆಗಿ ಅವರನ್ನು ನೇಮಕ ಮಾಡುತ್ತಾರೆಂದು ಯಾರೊಬ್ಬರೂ ಊಹೆ ಮಾಡಿರಲಿಲ್ಲ. ಇದು ದ್ರಾವಿಡ್ ವಿಚಾರದಲ್ಲೂ ಅನ್ವಯಿಸಿದೆ. ದ್ರಾವಿಡ್ ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿದ್ದಾರೆ. ಅಲ್ಲದೇ ತಮ್ಮ ಈ ಸ್ಥಾನದಿಂದ ಅವರು ಅತ್ಯಂತ ಸಂತುಷ್ಟರಾಗಿದ್ದಾರೆ. ಆದರೂ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಿದ್ದಾರೆ.

ಈಗ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ರಾಹುಲ್ ದ್ರಾವಿಡ್'ರನ್ನು ನೇಮಿಸಿರುವಾಗ ರವಿಶಾಸ್ತ್ರಿಗೆ ತಮಗಿಷ್ಟ ಬಂದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಇದೇ ಪ್ರಶ್ನೆಯನ್ನು ಅರ್ಥೈಸಿಕೊಂಡಿರುವ ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್'ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ. ತಮ್ಮ ಈ ಟ್ವೀಟ್'ನಲ್ಲಿ 'ವಿದೇಶೀ ಪ್ರವಾಸದಲ್ಲಿ ಟೀಂ ಇಂಡಿಯಾಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗುತ್ತದೆ.ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಿ ಹಾಗೂ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದರೆ ರವಿಶಾಸ್ತ್ರಿ ಮತ್ತೊಮ್ಮೆ ಕೇವಲ ತಂಡದ ನಿರ್ದೇಶಕರಾಗಿಯೇ ಉಳಿಯುತ್ತಾರಾ?' ಎಂದು ಪ್ರಶ್ನಿಸಿದ್ದಾರೆ.

ಇನ್ನು ವಿರೇಂದ್ರ ಸೆಹ್ವಾಗ್ ಕೋಚ್ ಆಗದಿರುವುದರಿಂದ ಗಂಗೂಲಿ ಖುಷಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ರಾಹುಲ್ ದ್ರಾವಿಡ್ ಹಾಗೂ ಜಹೀರ್ ಖಾನ್'ರನ್ನು ನೇಮಕ ಮಾಡಲಾಗಿದೆ. ಇದರಿಂದ ತಂಡದ ಮೇಲೆ ರವಿಶಾಸ್ತ್ರಿ ಹೇರುವ ಒತ್ತಡ ನಿಲ್ಲಿಸಬಹುದು ಎಂಬುವುದು ಅವರ ಅನಿಸಿಕೆ ಎಂದು ಹೇಳಲಾಗಿದೆ.   

click me!