
ಪುಣೆ(ಏ.28): ಐದು ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಲಯ ಕಂಡಿಕೊಂಡಿತು. ನಾಯಕ ರೋಹಿತ್ ಶರ್ಮಾ(56) ಹಾಗೂ ಆರಂಭಿಕ ಆಟಗಾರರಾದ ಇ.ಲೆವಿಸ್ (ಲೆವಿಸ್ 47) , ಸೂರ್ಯಕಾಂತ್ ಯಾದವ್ (ಎಸ್.ಯಾದವ್ 44) ಅವರ ಸಮೋಯೋಚಿತ ಅವರ ಸಮಯೋಚಿತ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೇಟ್ಗಳ ಗೆಲುವು ಸಾಧಿಸಿದರು.
ಧೋನಿ ಪಡೆ ನೀಡಿದ್ದ 169 ರನ್'ಗಳ ಗುರಿಯನ್ನು 19.4 ಓವರ್'ಗಳಲ್ಲಿ ತಲುಪಿದರು. ಈ ಜಯದೊಂದಿಗೆ ಮುಂಬೈ ತಂಡ ಐಪಿಎಲ್ ಸರಣಿಯಲ್ಲಿ 2ನೇ ವಿಜಯ ಸಾಧಿಸಿದೆ. ಚೆನ್ನೈಗೆ ಇದು 2ನೇ ಸೋಲು.
ಟಾಸ್ ಗೆದ್ದ ಮುಂಬೈ ತಂಡದ ರೋಹಿತ್ ಶರ್ಮಾ ಚೆನ್ನೈ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು. ಆರಂಭಿಕ ಆಟಗಾರ ವ್ಯಾಟ್ಸ್’ನ್ 4ನೇ ಓವರ್’ನಲ್ಲಿ ಕೆ. ಪಾಂಡ್ಯಾಗೆ ಔಟಾದರು. ನಂತರ 7 ಓವರ್’ಗಳ ಕಾಲ ಆರ್ಭಟಿಸಿದ ರಾಯುಡು(46, 35 ಎಸೆತ, 4 ಸಿಕ್ಸ್’ರ್, 2 ಬೌಂಡರಿ ), ರೈನಾ 2ನೇ ವಿಕೆಟ್’ಗೆ 11.2 ಓವರ್’ಗಳಲ್ಲಿ 97 ರನ್ ಪೇರಿಸಿದರು.
8 ಓವರ್’ಗಳಿದ್ದಂತೆ ಆಗಮಿಸಿದ ನಾಯಕ ಧೋನಿ(26) ರೈನಾ ಜೊತೆ ಸೇರಿ ಬಿರುಸಿನ ಆಟವಾಡಿದರು. ಅಜೇಯವಾಗಿ 75 ರನ್ ಸಿಡಿಸಿದ ರೈನಾ ಆಟದಲ್ಲಿ 4ಸಿಕ್ಸ್’ರ್ ಹಾಗೂ 6 ಬೌಂಡರಿಗಳಿದ್ದವು. ಅಂತಿಮವಾಗಿ ಚೆನ್ನೈ 20 ಓವರ್’ಗಳಲ್ಲಿ 169/5 ರನ್ ದಾಖಲಿಸಿತು.
ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್’ಗಳಲ್ಲಿ 169/5
(ರೈನಾ ಅಜೇಯ 75 , ರಾಯುಡು 46, ಧೋನಿ 26)
ಮುಂಬೈ ಇಂಡಿಯನ್ಸ್ 19.4 ಓವರ್’ಗಳಲ್ಲಿ 170/2
(ರೋಹಿತ್ ಅಜೇಯ 56, ಎಸ್.ಯಾದವ್ 44, ಲೆವಿಸ್ 47)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.