ಮುಂಬೈಗಿಂದು ಕಟ್ಟಕಡೆಯ ಚಾನ್ಸ್; ಧೋನಿ-ರೋಹಿತ್ ಕಾದಾಟದಲ್ಲಿ ಗೆಲ್ಲೋರ್ಯಾರು..?

Published : Apr 28, 2018, 02:26 PM IST
ಮುಂಬೈಗಿಂದು ಕಟ್ಟಕಡೆಯ ಚಾನ್ಸ್; ಧೋನಿ-ರೋಹಿತ್ ಕಾದಾಟದಲ್ಲಿ ಗೆಲ್ಲೋರ್ಯಾರು..?

ಸಾರಾಂಶ

ಸದ್ಯ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಮುಂಬೈ, ಪ್ಲೇ-ಆಫ್‌’ಗೇರಬೇಕಿದ್ದರೆ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಲ್ಲೇಬೇಕು. ಅಂಕಪಟ್ಟಿಯಲ್ಲಿರುವ ಅಗ್ರ 3 ತಂಡಗಳು ಈಗಾಗಲೇ 5 ಪಂದ್ಯಗಳನ್ನು ಗೆದ್ದಿರುವುದರಿಂದ, ಪ್ಲೇ-ಆಫ್‌’ನಲ್ಲಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುವ ಲಕ್ಷಣಗಳು ತೋರುತ್ತಿವೆ.

ಪುಣೆ(ಏ.28): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಇಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಿದೆ. 

ಸದ್ಯ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಮುಂಬೈ, ಪ್ಲೇ-ಆಫ್‌’ಗೇರಬೇಕಿದ್ದರೆ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಲ್ಲೇಬೇಕು. ಅಂಕಪಟ್ಟಿಯಲ್ಲಿರುವ ಅಗ್ರ 3 ತಂಡಗಳು ಈಗಾಗಲೇ 5 ಪಂದ್ಯಗಳನ್ನು ಗೆದ್ದಿರುವುದರಿಂದ, ಪ್ಲೇ-ಆಫ್‌’ನಲ್ಲಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುವ ಲಕ್ಷಣಗಳು ತೋರುತ್ತಿವೆ. ಹೀಗಾಗಿ ಮುಂಬೈ ಮುಂದಿನ ಎಲ್ಲಾ 8 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದರೆ ಅಚ್ಚರಿಯಿಲ್ಲ. ಆದರೆ ಮುಂಬೈ ಮುಂದಿರುವ ಸವಾಲು ಸಣ್ಣದಲ್ಲ. 

ಚೆನ್ನೈ 5 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡ ಪ್ರಚಂಡ ಲಯದಲ್ಲಿದ್ದು, ದೊಡ್ಡ ಮೊತ್ತವನ್ನು ನಿರಾಯಾಸವಾಗಿ ಬೆನ್ನಟ್ಟುತ್ತಿದೆ. ಮುಂಬೈ ಬೌಲಿಂಗ್ ಮೊನಚು ಕಳೆದುಕೊಂಡಿದ್ದು, ಸಿಎಸ್‌’ಕೆ ಬ್ಯಾಟ್ಸ್‌ಮನ್‌’ಗಳ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ಸೋಲುಂಡಿತ್ತು.

ಪಿಚ್ ರಿಪೋರ್ಟ್: ಪುಣೆ ಕ್ರೀಡಾಂಗಣ ಈ ಆವೃತ್ತಿಯಲ್ಲಿ ಒಂದು ಪಂದ್ಯಕ್ಕೆ ಆತಿಥ್ಯ ವಹಿಸಿದ್ದು, ಆ ಪಂದ್ಯದಲ್ಲಿ ಚೆನ್ನೈ ದೊಡ್ಡ ಮೊತ್ತ ಕಲೆ ಹಾಕಿತ್ತು. ವಾಟ್ಸನ್ ಶತಕದ ನೆರವಿನಿಂದ 204 ರನ್ ಗಳಿಸಿದ್ದ ಚೆನ್ನೈ, ರಾಜಸ್ಥಾನವನ್ನು 140ಕ್ಕೆ ಆಲೌಟ್ ಮಾಡಿತ್ತು. ವೇಗಿಗಳು ಹೆಚ್ಚಿನ ನೆರವು ಪಡೆದಿದ್ದರು. ಈ ಪಂದ್ಯದಲ್ಲೂ ಬ್ಯಾಟ್ಸ್’ಮನ್’ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಪಂದ್ಯ ಆರಂಭ: ಸಂಜೆ 8 ಗಂಟೆಗೆ 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?