Metoo ಆರೋಪದಿಂದ ಬಿಸಿಸಿಐ ಸಿಇಒ ಪಾರು!

By Web DeskFirst Published Nov 22, 2018, 9:46 AM IST
Highlights

ಮೀಟೂ ಬಿಸಿಗಾಳಿ ಬಿಸಿಸಿಐಗೂ ತಟ್ಟಿತ್ತು.  ಸಿಇಒ ಮೇಲೆ ಕೇಳಿಬಂದಿದ್ದ ಮೀಟೂ ಆರೋಪ ಇದೀಗ ಅಂತ್ಯಕಂಡಿದೆ. ಆರೋಪದಿಂದ ಬಿಸಿಸಿಔ ಸಿಇಒ ಪಾರಾಗಿದ್ದಾರೆ. ಅಷ್ಟಕ್ಕೂ ಸಿಇಒ ಆರೋಪದಿಂದ ಬಚಾವ್ ಆಗಿದ್ದು ಹೇಗೆ? ಇಲ್ಲಿದೆ ವಿವರ.

ನವದೆಹಲಿ(ನ.22): ಬಿಸಿಸಿಐನ ಹಂಗಾಮಿ ಸಿಇಒ ರಾಹುಲ್ ಜೋಹ್ರಿ, ಮೀಟೂ ಆರೋಪದಿಂದ ಪಾರಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ 3 ಸದಸ್ಯರ ಸಮಿತಿ, ಜೋಹ್ರಿ ವಿರುದ್ಧದ ಲೈಂಗಿಕ ಕಿರುಕುಳದ ಆರೋಪವನ್ನು ತಿರಸ್ಕರಿಸಿದ್ದು, ಜೋಹ್ರಿಗೆ ಕ್ಲೀನ್ ಚಿಟ್ ನೀಡಿದೆ. 

ಇದೇ ವೇಳೆ ಸಮಿತಿ, ಜೋಹ್ರಿವಿರುದ್ಧದ ದೂರು ಸುಳ್ಳು ಮತ್ತು ಆಧಾರ ರಹಿತ ಆರೋಪ ಮತ್ತು ಉದ್ದೇಶ ಪೂರ್ವಕವಾಗಿಯೇ ಜೋಹ್ರಿ ಘನತೆಗೆ ಧಕ್ಕೆಯನ್ನುಂಟು ಮಾಡುವುದಕ್ಕಾಗಿಯೇ ರೂಪಿಸಲಾಗಿದೆ’ ಎಂದು ಸಮಿತಿ ಹೇಳಿದೆ. ಆದರೆ ತನಿಖಾ ಸಮಿತಿ ಸದಸ್ಯೆ ವೀಣಾ ಗೌಡ, ‘ಜೋಹ್ರಿ ಅವರನ್ನು ಲಿಂಗ ಸೂಕ್ಷ್ಮತೆ ಸಮಾಲೋಚನೆಗೆ ಒಳಪಡಿಸಬೇಕು’ ಎಂದು ಸೂಚಿಸಿದ್ದಾರೆ.

ಇದನ್ನೇ ಆಧಾರವಾಗಿರಿಸಿರುವ ಬಿಸಿಸಿಐ ಆಡಳಿತ ಸಮಿತಿ ಸದಸ್ಯೆ ಡಯಾನಾ ಎಡುಲ್ಜಿ, ಸಿಇಒ ಹುದ್ದೆಗೆ ಜೋಹ್ರಿ ಯೋಗ್ಯರಲ್ಲ. ನೈತಿಕ ಹೊಣೆ ಹೊತ್ತು ಜೋಹ್ರಿ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. 

ಜೀವನದ ಕಠಿಣ ಸಮಯ: ಜೋಹ್ರಿ: ಸುಮಾರು ಒಂದುವರೆ ತಿಂಗಳು ನನಗೂ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಕಠಿಣ ದಿನಗಳು ಎಂದಿದ್ದಾರೆ.

click me!