ಬಿಸಿಸಿಐನ್ನೂ ಬಿಡಲಿಲ್ಲ #Metoo-ಸಿಇಓ ಮೇಲೆ ಲೈಂಗಿಕ ಕಿರುಕಳ ಆರೋಪ!

Published : Oct 13, 2018, 01:05 PM ISTUpdated : Oct 13, 2018, 01:10 PM IST
ಬಿಸಿಸಿಐನ್ನೂ ಬಿಡಲಿಲ್ಲ #Metoo-ಸಿಇಓ ಮೇಲೆ ಲೈಂಗಿಕ ಕಿರುಕಳ ಆರೋಪ!

ಸಾರಾಂಶ

#Metoo ಆರೋಪಗಳಿಂದ ದೂರವಿದ್ದ ಭಾರತೀಯ ಕ್ರಿಕೆಟ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಬಿಸಿಸಿಐ ಸಿಇಓ ವಿರುದ್ಧ ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಮುಂಬೈ(ಅ.13): ಲೈಂಗಿಕ ಕಿರುಕುಳ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ನಡೆಯುತ್ತಿರುವ #Metoo ಅಭಿಯಾನದಿಂದ ಹಲವು ದಿಗ್ಗಜರ ಮುಖವಾಡಗಳು ಕಳಚಿ ಬೀಳುತ್ತಿದೆ. ಹಲವು ಕ್ಷೇತ್ರಗಳ ಪ್ರಮುಖರ ಮೇಲೆ #Metoo ಆರೋಪಗಳು ಕೇಳಿಬಂದಿತ್ತು. ಇದೀಗ ಬಿಸಿಸಿಐಗೂ #Metoo ಬಿಸಿ ತಟ್ಟಿದೆ.

ಬಾಲಿವುಡ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ನಡೆದೆ ಲೈಂಗಿಕ ಕಿರುಕಳ ಇದೀಗ ಹೊರಬರುತ್ತಿದೆ.  ಇಷ್ಟು ದಿನ #Metoo ಆರೋಪಗಳಿಂದ ದೂರ ಉಳಿದಿದ್ದ ಬಿಸಿಸಿಐ ಇದೀಗ ಗಂಭೀರ ಆರೋಪಕ್ಕೆ ಗುರಿಯಾಗಿದೆ.  ಇದೇ ಮೊದಲ ಬಾರಿಗೆ ಬಿಸಿಸಿಐ ಸಿಇಓ ರಾಹುಲ್ ಜೊಹ್ರಿ ವಿರುದ್ಧವೂ  ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. 

ಇದನ್ನೂ ಓದಿ: ಬಾಲಿವುಡ್ ಹಾಗೂ ಇತರ ದಿಗ್ಗರ ಮೇಲೆ #Metoo ಆರೋಪ

ಉದ್ಯೋಗದ ಕಾರಣಕ್ಕಾಗಿ, ಹೆಸರು ಹೇಳಲು ಇಚ್ಚಿಸಿದ ಪತ್ರೆಕರ್ತೆ ರಾಹುಲ್ ಜೊಹ್ರಿಯನ್ನ ಬೇಟಿಯಾಗಿದ್ದಾರೆ. ಈ ಸಂದರ್ಭವನ್ನ ಜೊಹ್ರಿ ಉಪಯೋಗಿಸಲು ನೋಡಿದ್ದಾರೆ ಎಂದು ಆರೋಪಿಸಿದ್ದಾರೆ. @ಪೆಡಸ್ಟ್ರೀಯನ್ ಪೊಯೆಟ್ ಅನ್ನೋ ಹೆಸರಿನ ಟ್ವಿಟರ್ ಖಾತೆಯಲ್ಲಿ ತಮಗಾದ ಅನ್ಯಾಯವನ್ನ ಹೇಳಿಕೊಂಡಿದ್ದಾರೆ.

 

 

ಇಷ್ಟು ದಿನ ಕ್ರಿಕೆಟ್ #Metoo ಆರೋಪದಿಂದ ದೂರವಿತ್ತು. ಆದರೆ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಲಿಂಗ ಹಾಗೂ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ ವಿರುದ್ದ ಲೈಗಿಂಕ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಸಿಇಓ ಮೇಲೂ ಆರೋಪ ಕೇಳಿಬಂದಿರೋದು ನಿಜಕ್ಕೂ ದುರಂತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭೇಟಿ ವೇಳೆ ಕೋಲ್ಕತಾದಲ್ಲಿ ರಾದ್ಧಾಂತ: ಆಟಗಾರನ ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ