ಆಸ್ಪ್ರೇಲಿಯಾ ನಾಯಕ ಟಿಮ್ ಪೈನ್ ಭಾರತದ ರೋಹಿತ್ ಶರ್ಮಾರ ಏಕಾಗ್ರತೆಗೆ ಭಂಗ ತರಲು ಪ್ರಯತ್ನಿಸಿದರು. ಈ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ.
ಮೆಲ್ಬರ್ನ್(ಡಿ.28): ಭಾರತ-ಆಸ್ಪ್ರೇಲಿಯಾ ನಡುವಿನ ಟೆಸ್ಟ್‌ನಲ್ಲಿ ಒಬ್ಬರನ್ನೊಬ್ಬರು ಕಿಚ್ಚಾಯಿಸುವುದು ಸಾಮಾನ್ಯ. ಎಂಸಿಜಿ ಟೆಸ್ಟ್‌ನ 2ನೇ ದಿನವಾದ ಗುರುವಾರ, ಆಸ್ಪ್ರೇಲಿಯಾ ನಾಯಕ ಟಿಮ್ ಪೈನ್ ಭಾರತದ ರೋಹಿತ್ ಶರ್ಮಾರ ಏಕಾಗ್ರತೆಗೆ ಭಂಗ ತರಲು ಪ್ರಯತ್ನಿಸಿದರು. ಈ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ.
ರೋಹಿತ್ ಜತೆ ಅಜಿಂಕ್ಯ ರಹಾನೆ ಬ್ಯಾಟ್ ಮಾಡುತ್ತಿದ್ದ ಕಾರಣ, ‘ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಯಾವುದನ್ನು ಬೆಂಬಲಿಸಬೇಕು ಎನ್ನುವ ಗೊಂದಲವಿದೆ. ರೋಹಿತ್ ಈಗ ಸಿಕ್ಸರ್ ಹೊಡೆದರೆ ಐಪಿಎಲ್‌ನಲ್ಲಿ ನಾನು ಮುಂಬೈ ತಂಡವನ್ನು ಬೆಂಬಲಿಸುತ್ತೇನೆ’ ಎಂದರು.
"If Rohit hits a six here I'm changing to Mumbai" 😂 pic.twitter.com/JFdHsAl84b
— cricket.com.au (@cricketcomau)ರೋಹಿತ್ ನಕ್ಕು ಸುಮ್ಮನಾದರು. ಬಳಿಕ ತಮ್ಮ ಸಹ ಆಟಗಾರ ಆ್ಯರೋನ್ ಫಿಂಚ್ ಕಾಲೆಳೆದ ಪೈನ್, ‘ನೀನು ಬಹುತೇಕ ಎಲ್ಲಾ ಐಪಿಎಲ್ ತಂಡಗಳಲ್ಲೂ ಆಡಿದ್ದೀಯ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಫಿಂಚ್, ‘ಬೆಂಗಳೂರು ಒಂದನ್ನು ಬಿಟ್ಟು’ ಎಂದರು.