
ವಿರಾಜಪೇಟೆ(ಮೇ.11): ಕಾಕೋಟುಪರಂಬುವಿನಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಪರದಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ವರ್ಷ ಪ್ರಕೃತಿ ವಿಕೂಪದಿಂದ ಅಪಾರ ಹಾನಿಯಾದ ಕಾರಣ, ಈ ಬಾರಿ ಟೂರ್ನಿಯನ್ನು ಸರಳವಾಗಿ ಆಯೋಜಿಸಲಾಗಿತ್ತು. ಹಾಕಿ ಕೂರ್ಗ್ ಸಂಸ್ಥೆಯೇ ಟೂರ್ನಿ ಆಯೋಜನೆ ಹೊಣೆ ಹೊತ್ತಿತ್ತು. ಕಳೆದ 22 ವರ್ಷಗಳಿಂದ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಆಡಿದ್ದ ತಂಡಗಳು ಮಾತ್ರ ಈ ಬಾರಿ ಪಾಲ್ಗೊಂಡಿದ್ದವು. ಒಟ್ಟು 149 ತಂಡಗಳು ಪ್ರಶಸ್ತಿಗಾಗಿ ಸೆಣಸಿದವು.
ಶುಕ್ರವಾರ ನಡೆದ ಫೈನಲ್‌ನಲ್ಲಿ ಪರದಂಡ ತಂಡ ಟೈ ಬ್ರೇಕರ್‌ನಲ್ಲಿ 5-2 ಗೋಲುಗಳ ಗೆಲುವು ಸಾಧಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ ಕಾರಣ, ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಲಾಯಿತು. ಪ್ರಶಸ್ತಿ ವಿಜೇತ ಪರದಂಡ ತಂಡ 60 ಸಾವಿರ ಬಹುಮಾನ ಮೊತ್ತ ಪಡೆಯಿತು.
ಇದೇ ವೇಳೆ ಚಾಂಪಿಯನ್‌ಶಿಪ್ ಟ್ರೋಫಿ ಫೈನಲ್‌ನಲ್ಲಿ ಪುದಿಯೊಕ್ಕಡ ತಂಡ 5-1 ಗೋಲುಗಳಿಂದ ಕಾಳೇಂಗಡ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ತಂಡಕ್ಕೆ 50 ಸಾವಿರ ಬಹುಮಾನ ಮೊತ್ತ ದೊರೆಯಿತು.
ಅಕ್ಕ-ತಂಗಿಯರ ಸಾಧನೆ: ಕಾಳೆಂಗಡ ತಂಡದ ಪರ ಕಣಕ್ಕಿಳಿದ ಸಹೋದರಿಯರಾದ ಮೋನಿಶಾ ಮತ್ತು ಯಶಸ್ವಿನಿ ಉತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಕೊಡವ ಹಾಕಿ ಉತ್ಸವದ ಫೈನಲ್‌ನಲ್ಲಿ ಆಡಿದ ಮೊದಲ ಬಾಲಕಿಯರು ಎಂಬ ಕೀರ್ತಿಗೆ ಪಾತ್ರರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.