ಮಯಾಂತಿ ಲ್ಯಾಂಗರ್-ಸ್ಟುವರ್ಟ್ ಬಿನ್ನಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

Published : Sep 01, 2018, 03:22 PM ISTUpdated : Sep 09, 2018, 09:12 PM IST
ಮಯಾಂತಿ ಲ್ಯಾಂಗರ್-ಸ್ಟುವರ್ಟ್ ಬಿನ್ನಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಸಾರಾಂಶ

ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಹಾಗೂ ಪತ್ನಿ ನಿರೂಪಕಿ ಮಯಾಂಕಿ ಲ್ಯಾಂಗರ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗಿರೋ ಜೋಡಿ. ಬಿನ್ನಿ ಹಾಗೂ ಮಯಾಂಕಿ ಲ್ಯಾಂಗರ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ರೋಚಕ ಕತೆ ಇಲ್ಲಿದೆ.

ಬೆಂಗಳೂರು(ಸೆ.1): ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಸ್ಟುವರ್ಟ್ ಬಿನ್ನಿ ಹಾಗೂ ಪತ್ನಿ, ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಕ್ರಿಕೆಟ್ ಜಗತ್ತಿನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಕೂಡ ತಮ್ಮ ತಮ್ಮ ಕರಿಯರ್‌ನಲ್ಲಿ ಬ್ಯೂಸಿಯಾಗಿದ್ದರೂ, ಸಿಕ್ಕ ಸಮಯದಲ್ಲಿ ಇವರಿಬ್ಬರೂ ಜೊತೆಯಾಗಿ ಕಾಲ ಕಳೆಯುತ್ತಾರೆ.

ಮಯಾಂತಿ ಲ್ಯಾಂಗರ್ ಕ್ರೀಡಾ ನಿರೂಪಕಿಯಾಗಿ ಜನಪ್ರಿಯರಾಗಿದ್ದಾರೆ. ಆದರೆ ಮಯಾಂತಿ ಲ್ಯಾಂಗರ್ ಹಾಗೂ ಸ್ಟುವರ್ಟ್ ಬಿನ್ನಿ ಪ್ರೀತಿ ಹುಟ್ಟಿದ್ದು ಹೇಗೆ ಅನ್ನೋ ಕುತೂಹಲ ಇದ್ದೇ ಇದೆ. ಇದೀಗ ಇವರ ಪ್ರೀತಿ ರಹಸ್ಯವನ್ನ ಸ್ವತಃ ಮಯಾಂತಿ ಲ್ಯಾಂಗರ್ ಬಹಿರಂಗ ಪಡಿಸಿದ್ದಾರೆ.

ಇಂಡಿಯನ್ ಕ್ರಿಕೆಟ್ ಲೀಗ್ ಟೂರ್ನಿ ಆರಂಭದಲ್ಲಿಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ , ಕ್ರಿಕೆಟರ್ ಸ್ಟುವರ್ಟ್ ಬಿನ್ನಿಯನ್ನ ಮೊದಲು ಬೇಟಿಯಾಗಿದ್ದರು. ಬಿನ್ನಿ ಹೈದರಬಾದ್ ಹೀರೋಸ್ ಪರ ಆಡುತ್ತಿದ್ದರು. ನಿರೂಪಕಿ ಮಯಾಂತಿ ಲ್ಯಾಂಗರ್‌ಗೆ ಬಿನ್ನಿ ಯಾರು ಅನ್ನೋದೇ ಗೊತ್ತಿರಲಿಲ್ಲ.

ನಿರ್ಮಾಪಕ ಬಿನ್ನಿಯನ್ನ ಮಯಾಂತಿಗೆ ಪರಿಚಯಿಸಿದರು. ಸ್ಟುವರ್ಟ್ ಬಿನ್ನಿ, ಮಾಜಿ ಕ್ರಿಕಕೆಟಿಗ ರೋಜರ್ ಬಿನ್ನಿ ಪುತ್ರ ಎಂದು ಪರಿಚಿಸಿದ್ದರು. ಆದರೆ ರೋಜರ್ ಬಿನ್ನಿ ಯಾರೆಂದೇ ಮಯಾಂತಿಗೆ ತಿಳಿದಿರಲಿಲ್ಲ.  

ಸ್ಟುವರ್ಟ್ ಬಿನ್ನಿ ಸಂದರ್ಶನದಲ್ಲಿ ನಿರ್ಮಾಪಕ ತಮಾಷೆಗಾಗಿ ಬಿನ್ನಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್‌ಗೂ ಮುನ್ನ ಬಿನ್ನಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದರು. ಇಷ್ಟೇ ಅಲ್ಲ ಈ ಕುರಿತು ಪ್ರಶ್ನೆ ಕೇಳಲು ಹೇಳಿದ್ದರು. ಮಾಯಂತಿ ಸಂದರ್ಶನದಲ್ಲಿ ಬಿನ್ನಿಗೆ ಅಭಿನಂದಿಸಿ ಈ ನಿಶ್ಚಿತಾರ್ಥ ಹಾಗೂ ಪ್ರದರ್ಶನದ  ಪ್ರಶ್ನೆ ಕೇಳಿದ್ದರು. ಆದರೆ ಈ ರೀತಿಯ ಘಟನೆ ನಡೆದೇ ಇರಲಿಲ್ಲ. ಹೀಗಾಗಿ ಮಯಾಂತಿ ತೀವ್ರ ಮುಜುಗರಕ್ಕೀಡಾಗಿದ್ದರು ಎಂದು ಮಯಾಂತಿ  ಮಿಸ್ ಫೀಲ್ಡ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!