ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

By Web DeskFirst Published Nov 14, 2018, 10:51 AM IST
Highlights

ಯುಎಇ ಕ್ರಿಕೆಟ್‌ ಮಂಡಳಿ ಪರವಾಗಿ ಅಮಾನತುಗೊಳಿಸಿರುವ ಐಸಿಸಿ, 38 ವರ್ಷದ ಆಟಗಾರನ ವಿರುದ್ಧ 3 ನಿಯಮ ಉಲ್ಲಂಘನೆ ಆಧಾರದಡಿ ಪ್ರಕರಣ ದಾಖಲಿಸಿದೆ. ಆಟಗಾರರಿಗೆ ನಿಯಮ ಉಲ್ಲಂಘಿಸುವಂತೆ, ಫಿಕ್ಸಿಂಗ್‌ ನಡೆಸುವಂತೆ ಉತ್ತೇಜನ ನೀಡಿದ್ದರು ಎಂದು ಐಸಿಸಿ ತಿಳಿಸಿದೆ.

ದುಬೈ(ನ.14): ಯುಎಇನಲ್ಲಿ ಕಳೆದ ವರ್ಷ ನಡೆದ ಟಿ10 ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾದ ಮಾಜಿ ಆಲ್ರೌಂಡರ್‌ ದಿಲ್ಹಾರಾ ಲೋಕುಹೆಟ್ಟಿಗೆಯನ್ನು ಐಸಿಸಿ, ಅಮಾನತುಗೊಳಿಸಿದೆ. 

ಫಿಕ್ಸಿಂಗ್‌: 9 ಭಾರತೀಯ ಆಟಗಾರರ ಹೆಸರು ಬಹಿರಂಗ?

ಯುಎಇ ಕ್ರಿಕೆಟ್‌ ಮಂಡಳಿ ಪರವಾಗಿ ಅಮಾನತುಗೊಳಿಸಿರುವ ಐಸಿಸಿ, 38 ವರ್ಷದ ಆಟಗಾರನ ವಿರುದ್ಧ 3 ನಿಯಮ ಉಲ್ಲಂಘನೆ ಆಧಾರದಡಿ ಪ್ರಕರಣ ದಾಖಲಿಸಿದೆ. ಆಟಗಾರರಿಗೆ ನಿಯಮ ಉಲ್ಲಂಘಿಸುವಂತೆ, ಫಿಕ್ಸಿಂಗ್‌ ನಡೆಸುವಂತೆ ಉತ್ತೇಜನ ನೀಡಿದ್ದರು ಎಂದು ಐಸಿಸಿ ತಿಳಿಸಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಅವರಿಗೆ 14 ದಿನಗಳ ಕಾಲಾವಕಾಶ ನೀಡಲಾಗಿದೆ.

ಫಿಕ್ಸಿಂಗ್‌: ಲಂಕಾ ಬೌಲಿಂಗ್‌ ಕೋಚ್‌ ಸಸ್ಪೆಂಡ್

2005ರಿಂದ 2013ರ ಅವಧಿಯಲ್ಲಿ ಲೋಕುಹೆಟ್ಟಿಗೆ ಶ್ರೀಲಂಕಾ ಪರ 9 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನು ಆಡಿದ್ದಾರೆ. 

click me!