ಯೂತ್‌ ಒಲಿಂಪಿಕ್‌: 16 ವರ್ಷದ ಮನು ಭಾಕರ್‌ ಧ್ವಜಧಾರಿ

By Web Desk  |  First Published Oct 2, 2018, 11:35 AM IST

ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ಸೋಮವಾರ ವಿಷಯ ತಿಳಿಸಿದರು. 46 ಅಥ್ಲೀಟ್‌ಗಳು ಸೇರಿ ಒಟ್ಟು 68 ಸದಸ್ಯರ ಭಾರತ ತಂಡ ಇಂದು ಅರ್ಜೆಂಟೀನಾಗೆ ತೆರಳಲಿದೆ. 

ನವದೆಹಲಿ(ಅ.02): ಅಕ್ಟೋಬರ್ 6ರಿಂದ 18 ರವರೆಗೆ ಅರ್ಜೆಂಟೀನಾದ ಬ್ಯೂನಸ್‌ ಏರೀಸ್‌ನಲ್ಲಿ ನಡೆಯಲಿರುವ 3ನೇ ಯೂತ್‌ ಒಲಿಂಪಿಕ್‌ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ 16 ವರ್ಷದ ಯುವ ಶೂಟರ್‌ ಮನು ಭಾಕರ್‌ ಭಾರತದ ಧ್ವಜಧಾರಿಯಾಗಿ ಮುನ್ನಡೆಯಲಿದ್ದಾರೆ. 

ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ಸೋಮವಾರ ವಿಷಯ ತಿಳಿಸಿದರು. 46 ಅಥ್ಲೀಟ್‌ಗಳು ಸೇರಿ ಒಟ್ಟು 68 ಸದಸ್ಯರ ಭಾರತ ತಂಡ ಇಂದು ಅರ್ಜೆಂಟೀನಾಗೆ ತೆರಳಲಿದೆ. 

Latest Videos

undefined

ಇದನ್ನು ಓದಿ: ವಿಶ್ವಕಪ್ ಶೂಟಿಂಗ್'ನಲ್ಲಿ 2ನೇ ಚಿನ್ನಗೆದ್ದ 16 ವರ್ಷದ ಮನು

13 ಕ್ರೀಡೆಗಳಲ್ಲಿ ಭಾರತದ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮತ್ತು ಐಒಎ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಸೇರಿದಂತೆ ಇತರರ ಪಾಲ್ಗೊಳ್ಳಲಿದ್ದಾರೆ ಎಂದು ಬಾತ್ರಾ ಹೇಳಿದ್ದಾರೆ.

click me!