ವಿಶ್ವ ಸಸ್ಯಾಹಾರಿ ದಿನ: ಇಲ್ಲಿದೆ ದಿಗ್ಗಜ 6 ಸಸ್ಯಾಹಾರಿ ಕ್ರೀಡಾಪಟುಗಳು!

By Web Desk  |  First Published Oct 1, 2018, 9:06 PM IST

ಅಕ್ಟೋಬರ್ 1 ವಿಶ್ವ ಸಸ್ಯಾಹಾರಿಗಳ ದಿನ. ಸಸ್ಯಾಹಾರವನ್ನೇ ಸೇವಿಸಿ ಕ್ರೀಡೆಯಲ್ಲಿ ಹಲವು ದಿಗ್ಗಜ ಕ್ರೀಡಾಪಟುಗಳು ಸಾಧನೆ  ಮಾಡಿದ್ದಾರೆ. ಸಂಪೂರ್ಣ ಸಸ್ಯಾಹಾರಿಯಾಗಿ ಕ್ರೀಡೆಯಲ್ಲಿ ಮಿಂಚಿದ 6 ಕ್ರೀಡಾಪಟುಗಳ ವಿವರ ಇಲ್ಲಿದೆ.


ಬೆಂಗಳೂರು(ಅ.01): ಅಕ್ಟೋಬರ್ 1 ವಿಶ್ವ ಸಸ್ಯಾಹಾರಿ ದಿನ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಿದೆ. ಇಂದಿನ ವಿಶ್ವ ಸಸ್ಯಾಹಾರಿ ದಿನದಂದು ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟಗಳ ವಿವರ ಇಲ್ಲಿದೆ.

ವೀರೇಂದ್ರೆ ಸೆಹ್ವಾಗ್ -ಕ್ರಿಕೆಟಿಗ

Tap to resize

Latest Videos


ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ವೀರೂ ಸಸ್ಯಾಹಾರಿ ಅನ್ನೋದು ಹಲವರಿಗೆ ತಿಳಿದಿಲ್ಲ. ಸೆಹ್ವಾಗ್ ಭರ್ಜರಿ ಸಿಕ್ಸರ್ ಹಿಂದೆ ಸಸ್ಯಾಹಾರದ ಶಕ್ತಿ ಇದೆ.

ಸುಶೀಲ್ ಕುಮಾರ್ -ಕುಸ್ತಿಪಟು


ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಕೂಡ ಸಸ್ಯಾಹಾರಿ. ಹೆಚ್ಚಿನ ಕುಸ್ತಿಪಟುಗಳು ಮಾಂಸಾಹಾರಿಗಳಾಗಿರುತ್ತಾರೆ. ಕಾರಣ ಅವರ ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪ್ರೊಟಿನ್ ಅಗತ್ಯವಿದೆ. ಆದರೆ ಸುಶೀಲ್ ಇದಕ್ಕೆ ವಿರುದ್ಧ.

ವಿಶ್ವನಾಥ್ ಆನಂದ್- ಚೆಸ್


ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಮೆದುಳಿ ಶಕ್ತಿ ಹಿಂದೆ ಸಸ್ಯಾಹಾರವಿದೆ. ವಿಶ್ವನಾಥ್ ಆನಂದ್ ಕೂಡ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.

ಮೈಕ್ ಟೈಸನ್- ಬಾಕ್ಸರ್


ಅಮೇರಿಕಾದ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಹೆಸರು ಕೇಳಿದರಿಲ್ಲ. ಒಂದೊಂದೇ ಪಂಚ್ ಮೂಲಕ ಎದುರಾಳಿನ್ನ ಹೊಡೆದುರುಳಿಸಿದ ಟೈಸನ್ ಕೂಡ ಸಂಪೂರ್ಣ ಸಸ್ಯಹಾರಿ.

ವೀನಸ್ ವಿಲಿಯಮ್ಸ್-  ಟೆನಿಸ್


ಅಮೇರಿಕಾ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಸಹೋದರಿ ವೀನಸ್ ವಿಲಿಯಮ್ಸ್ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. 

ಗ್ರೆಗ್ ಚಾಪೆಲ್- ಕ್ರಿಕೆಟಿಗ


ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್ ಕೂಡ ಸಸ್ಯಾಹಾರಿಯಾಗಿದ್ದಾರೆ. 

click me!