ಹಾಕಿ: ಭಾರತಕ್ಕೆ ಮನ್'ಪ್ರೀತ್ ಕ್ಯಾಪ್ಟನ್

Published : May 19, 2017, 04:35 PM ISTUpdated : Apr 11, 2018, 12:47 PM IST
ಹಾಕಿ: ಭಾರತಕ್ಕೆ ಮನ್'ಪ್ರೀತ್ ಕ್ಯಾಪ್ಟನ್

ಸಾರಾಂಶ

ವಿಶ್ವ ಲೀಗ್‌ ಟೂರ್ನಿಯಲ್ಲಿ ಭಾರತ ತಂಡವು ಬಿ ಗುಂಪಿನಲ್ಲಿ ಸ್ಥಾನಪಡೆದಿದ್ದು, ಇದೇ ಗುಂಪಿನಲ್ಲಿ ಕೆನಡ, ನೆದರ್'ಲ್ಯಾಂಡ್, ಪಾಕಿಸ್ತಾನ ಹಾಗೂ ಸ್ಕಾಟ್'ಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.

ನವದೆಹಲಿ(ಮೇ.19): ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 3 ರಾಷ್ಟ್ರಗಳ ಆಹ್ವಾನಿತ ಹಾಕಿ ಸರಣಿ ಹಾಗೂ ಲಂಡನ್‌'ನಲ್ಲಿ ನಡೆಯಲಿರುವ ವಿಶ್ವ ಲೀಗ್‌ ಸೆಮಿಫೈನಲ್‌ ಪಂದ್ಯಾವಳಿಗೆ ಭಾರತ ತಂಡ ಪ್ರಕಟಗೊಂಡಿದೆ.

18 ಮಂದಿ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ವಿಶ್ವ ಲೀಗ್ ಹಾಕಿಗೂ ಮುನ್ನ ಜರ್ಮನಿ ಹಾಗೂ ಬೆಲ್ಜಿಯಂ ತಂಡಗಳ ಎದುರು ಆಡಲು ಕಣಕ್ಕಿಳಿಯಲಿದೆ.

ಇನ್ನು ವಿಶ್ವ ಲೀಗ್‌ ಟೂರ್ನಿಯಲ್ಲಿ ಭಾರತ ತಂಡವು ಬಿ ಗುಂಪಿನಲ್ಲಿ ಸ್ಥಾನಪಡೆದಿದ್ದು, ಇದೇ ಗುಂಪಿನಲ್ಲಿ ಕೆನಡ, ನೆದರ್'ಲ್ಯಾಂಡ್, ಪಾಕಿಸ್ತಾನ ಹಾಗೂ ಸ್ಕಾಟ್'ಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.

 

ತಂಡದ ವಿವರ ಇಂತಿದೆ:

ಗೋಲ್‌ ಕೀಪರ್‌ಗಳು: ಆಕಾಶ್‌, ವಿಕಾಸ್‌.

ಡಿಫೆಂಡರ್‌ಗಳು: ಪ್ರದೀಪ್‌, ಕೊಥಾಜಿತ್‌, ಸುರೇಂದ್ರ, ರೂಪಿಂದರ್‌, ಹರ್ಮನ್‌.

ಮಿಡ್‌'ಫೀಲ್ಡ​ರ್ಸ್: ಚಿಂಗ್ಲೆನ್‌'ಸಾನ, ಎಸ್‌.ಕೆ.ಉತ್ತಪ್ಪ, ಸತ್ಬೀತ್‌ ಸಿಂಗ್‌, ಸರ್ದಾರ್‌ ಸಿಂಗ್‌, ಮನ್‌'ಪ್ರೀತ್‌ ಸಿಂಗ್‌, ಹರ್ಜೀತ್‌ ಸಿಂಗ್‌.

ಫಾರ್ವರ್ಡ್ಸ್: ರಮಣ್‌'ದೀಪ್‌'ಸಿಂಗ್‌, ಎಸ್‌.ವಿ.ಸುನಿಲ್‌, ತಲ್ವಿಂದರ್‌ ಸಿಂಗ್‌, ಮನ್‌'ದೀಪ್‌ ಸಿಂಗ್‌, ಆಕಾಶ್‌'ದೀಪ್‌ ಸಿಂಗ್‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ICC T20 World Cup Final: ಯಾರಿಗೆ ಒಲಿಯಲಿದೆ ಲಕ್? ಎಬಿ ಡಿವಿಲಿಯರ್ಸ್ ಪ್ರಕಾರ ಇವರೇ ಈ ಬಾರಿಯ ಚಾಂಪಿಯನ್!
ICC T20 World Cup Final: ಬ್ಯಾಟ್ಸ್‌ಮನ್‌ಗಳೋ? ಬೌಲರ್‌ಗಳೋ? ಅಹಮದಾಬಾದ್ ಪಿಚ್ ಯಾರಿಗೆ ಸಾಥ್ ನೀಡಲಿದೆ?