ನಿವೃತ್ತಿ ವದಂತಿ ತಳ್ಳಿಹಾಕಿದ ಎಬಿಡಿ

By Suvarna Web DeskFirst Published May 19, 2017, 3:58 PM IST
Highlights

'ಐಸಿಸಿ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳು ಪ್ರಶಸ್ತಿ ಗೆಲ್ಲಬೇಕೆಂದೇ ಕಣಕ್ಕಿಳಿಯುತ್ತವೆ. ಈ ಬಾರಿ ನಮ್ಮ ತಂಡ ಸಮತೋಲನದಿಂದ ಕೂಡಿದೆ, ಪ್ರಶಸ್ತಿ ಜಯಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಲಂಡನ್(ಮೇ.19): ದೇಶಕ್ಕೆ ವಿಶ್ವಕಪ್ ಗೆದ್ದುಕೊಡುವ ಉದ್ದೇಶದಿಂದ ಎಬಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್'ಗೆ ನಿವೃತ್ತಿ ಹೇಳಲಿದ್ದಾರೆ ಎಂಬ ವದಂತಿಯನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ತಳ್ಳಿಹಾಕಿದ್ದಾರೆ.

2016ರ ಜನವರಿಯ ಬಳಿಕ ಎಬಿಡಿ ಇಲ್ಲಿಯವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಹಾಗಾಗಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್'ಗೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ವದಂತಿ ಕುರಿತು ಸ್ಪಷ್ಟನೆ ನೀಡಿರುವ ಅವರು, ಕಳೆದ ವರ್ಷ ನಾನು ವೈಯಕ್ತಿಕ ಹಾಗೂ ವೃತ್ತಿಪರ ಉದ್ದೇಶದಿಂದ ಕೆಲವೊಂದು ನಿರ್ಧಾರ ತಗೆದುಕೊಂಡಿದ್ದರಿಂದ ಕೆಲ ಟೂರ್ನಿಗಳಿಂದ ದೂರ ಉಳಿಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ನಾನು ಟೆಸ್ಟ್'ನಿಂದ ನಿವೃತ್ತಿ ತೆಗೆದುಕೊಂಡಿಲ್ಲ. ನಾನು ದೈಹಿಕವಾಗಿ ಎಲ್ಲಿಯವರೆಗೆ ಸದೃಢವಾಗಿರುತ್ತೇನೋ ಅಲ್ಲಿಯವರೆಗೆ ಕ್ರಿಕೆಟ್'ನಲ್ಲಿ ಮುಂದುವರೆಯುತ್ತೇನೆಂದು ಎಬಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.

1998ರ ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ಯಾವುದೇ ಐಸಿಸಿಯ ಮಹತ್ವದ ಟ್ರೋಫಿಯನ್ನು ಗೆದ್ದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಐಸಿಸಿ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳು ಪ್ರಶಸ್ತಿ ಗೆಲ್ಲಬೇಕೆಂದೇ ಕಣಕ್ಕಿಳಿಯುತ್ತವೆ. ಈ ಬಾರಿ ನಮ್ಮ ತಂಡ ಸಮತೋಲನದಿಂದ ಕೂಡಿದೆ, ಪ್ರಶಸ್ತಿ ಜಯಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

click me!