
ಸದ್ಯ ಟೀಂ ಇಂಡಿಯಾದಲ್ಲಿರುವ ಮೋಸ್ಟ್ ಎನರ್ಜೆಟಿಕ್ ಮತ್ತು ಫಿಟ್'ನೆಸ್ ಹೊಂದಿರುವ ಆಟಗಾರ ಅಂದ್ರೆ ಅದು ಮನೀಶ್ ಪಾಂಡೆ. ಇಂಗ್ಲೆಂಡ್ನ ಕೆವಿನ್ ಪೀಟರ್ಸ್ನ್ ಸ್ಟೈಲ್ನಲ್ಲಿ ಡಿಫರೆಂಟಾಗಿ ಬ್ಯಾಟ್ ಮಾಡುವ ಈ ಕನ್ನಡಿಗನ ಹೊಡೆತಗಳನ್ನ ನೋಡೋದೇ ಒಂದು ಖುಷಿ. ಒಮ್ಮೊಮ್ಮೆ ಬ್ಯಾಟಿಂಗ್ನಲ್ಲಿ ಎಡವಿದ್ರೂ ತಂಡಕ್ಕೆ ಅವಶ್ಯಕತೆ ಇದ್ದಾಗ ಏಕಾಂಗಿಯಾಗಿ ತಂಡಕ್ಕೆ ಆಸರೆಯಾಗ್ತಾನೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ವಿರುದ್ಧದ ಸರಣಿ.
ಹೀಗೆ ಬ್ಯಾಕ್ ಟು ಬ್ಯಾಕ್ ಅದ್ಭುತ ಪ್ರದರ್ಶನಗಳನ್ನ ತೋರುತ್ತಾ ತಂಡದಲ್ಲಿ ಖಾಯಂ ಸ್ಥಾನವನ್ನ ಹೊಂದುವ ಸಮೀಪದಲ್ಲಿರುವಾಗ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಮನೀಶ್ ಪಾಂಡೆ ಕುರಿತು ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಆತ ಕ್ರಿಕೆಟ್ ಲೋಕಕ್ಕೆ ಬರಬಾರ್ದಿತ್ತು ಅಂತ ಹೇಳಿ ಅವರ ಅಭಿಮಾನಿಗಳನ್ನ ದಂಗು ಬಡಿಸಿದ್ದಾರೆ.
ಪಾಂಡೆ ಕ್ರಿಕೆಟ್ಗೆ ಬರಬಾರ್ದಿತ್ತು ಎಂದು ಕೊಹ್ಲಿ ಹೇಳಿದ್ದೇಕೆ..?: ಹೇಳಿಕೆ ಹಿಂದಿರೋ ಆ ಮರ್ಮವಾದ್ರೂ ಏನು..?
ಅಷ್ಟಕ್ಕೂ ಕೊಹ್ಲಿ ಮತ್ತು ಕನ್ನಡಿಗ ಮನೀಶ್ ಪಾಂಡೆ ಜಗಳ ಮಾಡಿಕೊಂಡ್ರಾ..? ಅವರಿಬ್ಬರ ನಡುವೆ ನಡಿಯಬಾರದ್ದೇನಾದ್ರೂ ನಡೀತಾ ಅಂತ ನಿಮಗೆ ಅನ್ನಿಸಿರಬಹುದು. ಆದ್ರೆ ನೀವು ಅಂದುಕೊಂಡಂತೆ ಅವರಿಬ್ಬರ ನಡುವೆ ಅಂಥದ್ದೇನೂ ನಡೆದಿಲ್ಲ. ಇಬ್ಬರೂ ಕುಚುಕು ಗೆಳೆಯರೇ. ಆದ್ರೂ ಕೊಹ್ಲಿ ಕ್ರಿಕೆಟ್'ಗೆ ಬರಬಾರದಿತ್ತು ಅಂತ ಹೇಳಲು ಕಾರಣ, ಭಾನುವಾರ ನಡೆಯೋ ಸೆಲಬ್ರಿಟಿ ಫುಟ್'ಬಾಲ್ ಮ್ಯಾಚ್ಗಾಗಿ.
ಇದೇ ಭಾನುವಾರ ನಿಮಗೆಲ್ಲರಿಗೂ ಗೊತ್ತಿರುವಂತೆಯೇ ಭಾರತದ ಕ್ರಿಕೆಟ್ ಸ್ಟಾರ್ಸ್ ಮತ್ತು ಬಾಲಿವುಡ್ ಸ್ಟಾರ್ಸ್ ಮಧ್ಯೆ ಫುಟ್ಬಾಲ್ ಮ್ಯಾಚ್ ನಡೆಯುತ್ತಿದೆ. ಈ ಮ್ಯಾಚ್ನಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ನೇತೃತ್ವದ ತಂಡ ಅಭಿಷೇಕ್ ಬಚನ್ ನೇತೃತ್ವದ ಬಾಲಿವುಡ್ ತಂಡವನ್ನ ಎದುರಿಸುತ್ತಿದೆ. ಈ ಬಾರಿಯ ಸೆಲಬ್ರಿಟಿ ಫುಟ್'ಬಾಲ್ ಪಂದ್ಯಕ್ಕೆ ಮೊದಲ ಬಾರಿಗೆ ಮನೀಶ್ ಪಾಂಡೆ ಕೊಹ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಅಯ್ಯೋ ಮನೀಶ್ ಪಾಂಡೆ ಕುರಿತು ಕೊಹ್ಲಿಯ ಹೇಳಿಕೆಗೂ ಸೆಲಬ್ರಿಟಿ ಫುಟ್ಬಾಲ್ ಪಂದ್ಯಕ್ಕೂ ಎತ್ತಿಂದೆತ್ತ ಸಂಬಂಧ ಅಂತ ನೀವು ಕೇಳಬಹುದು, ಆದ್ರೆ ಇಲ್ಲೇ ಇರೋದು ನೋಡಿ ಕೊಹ್ಲಿ ಹೇಳಿಕೆ ಹಿಂದಿನ ಮರ್ಮ. ಭಾನುವಾರದ ಪಂದ್ಯದಲ್ಲಿ ನಿಮ್ಮ ತಂಡದಲ್ಲಿರುವ ಬೆಸ್ಟ್ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಕೊಹ್ಲಿ ಹೇಳಿದ ಮಾತುಗಳಿವು.
‘ಟೀಂ ಇಂಡಿಯಾದಲ್ಲಿರುವ ಆಟಗಾರರ ಪೈಕಿ ಮನೀಶ್ ಪಾಂಡೆ ಬೆಸ್ಟ್ ಫುಟ್ಬಾಲ್ ಆಟಗಾರ. ಭಾನುವಾರದ ಪಂದ್ಯಕ್ಕೆ ಇವನೇ ನಮ್ಮ ಟ್ರಂಪ್'ಕಾರ್ಡ್. ಮನೀಶ್ ಪಾಂಡೆ ಮಿಡ್ ಫೀಲ್ಡ್'ನಲ್ಲಿ ಅದ್ಭುತವಾಗಿ ಆಡುತ್ತಾನೆ. ಇವನು ಕ್ರಿಕೆಟ್ ಬದಲಿಗೆ ಫುಟ್'ಬಾಲ್'ನಲ್ಲಿ ಇರಬೇಕಿತ್ತು’ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ರು.
ಇದೇ ಕಾರಣಕ್ಕೆ ಕೊಹ್ಲಿ ಮನೀಶ್ ಪಾಂಡೆಗೆ ಕ್ರಿಕೆಟ್'ನಲ್ಲಿ ಇರಬಾರದಿತ್ತು ಎಂದು ಹೇಳಿದ್ದು. ಏನೇ ಆದ್ರೂ ಇದೂವರೆಗೂ ಸೆಲಬ್ರಿಟಿ ಫುಟ್ಬಾಲ್ನಲ್ಲಿ ಕರ್ನಾಟಕದಿಂದ ಕೇವಲ ಕೆ.ಎಲ್ ರಾಹುಲ್ ಮಾತ್ರ ಆಡುತ್ತಿದ್ರು. ಈಗ ಮತ್ತೊಬ್ಬ ಕನ್ನಡಿಗ ಕೊಹ್ಲಿ ಟೀಂಗೆ ಸೇರ್ಪಡೆಯಾಗಿರೋದು ಅದರಲ್ಲೂ ಟ್ರಂಪ್ ಕಾರ್ಡ್ ಎನ್ನಿಸಿರೋದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಶಯವೇ ಸರಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.