
ಬ್ರನೋ(ಚೆಕ್ ಗಣರಾಜ್ಯ): 2 ಬಾರಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ವಿರುದ್ಧ 2016ರ ಡಿಸೆಂಬರ್‌ನಲ್ಲಿ ಹಲ್ಲೆ ನಡೆಸಿದ್ದ ರದಿಮ್ ಜೊಂಡ್ರಾ ಎಂಬ ಕಳ್ಳನಿಗೆ ಇಲ್ಲಿನ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಾಸ್ಟೆಜೊವ್‌ನಲ್ಲಿರುವ ಕ್ವಿಟೋವಾ ನಿವಾಸಕ್ಕೆ ಬಾಯ್ಲರ್ ದುರಸ್ತಿ ಮಾಡುವವನ ವೇಷದಲ್ಲಿ ಆಗಮಿಸಿದ್ದ ಜೊಂಡ್ರಾ, ಟೆನಿಸ್ ತಾರೆ ಮೇಲೆ ಹಲ್ಲೆ ನಡೆಸಿದ ಹಲ್ಲೆಯಿಂದ ಅವರ ಎಡಗೈನಲ್ಲಿ ಗಂಭೀರ ಗಾಯಗಳಾಗಿದ್ದವು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕ್ವಿಟೋವಾ 5 ತಿಂಗಳ ವಿಶ್ರಾಂತಿ ಪಡೆದಿದ್ದರು. ಈ ಘಟನೆಯಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ವಿಟೋವಾ ಟೆನಿಸ್‌ನಿಂದ ದೂರ ಉಳಿದಿದ್ದರು.
29 ವರ್ಷದ ಕ್ವಿಟೋವಾ 2011 ಹಾಗೂ 2014ರಲ್ಲಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಗಾಯದ ಬಳಿಕ ಮತ್ತೆ ಟೆನಿಸ್’ಗೆ ಕಮ್’ಬ್ಯಾಕ್ ಮಾಡಿದ್ದ ಕ್ವಿಟೋವಾ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.