ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಿಕ್ಕಾಪಟ್ಟೆ ಪೈಪೋಟಿ ಆರಂಭವಾಗಿದ್ದು, ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ಇಬ್ಬರು ಪ್ರಮುಖ ಮಾಜಿ ಆಟಗಾರರು ಭಾರತ ಕೋಚ್ ಹುದ್ದೆಯ ಪ್ರಬಲ ಆಕಾಂಕ್ಷಿಗಳೆನಿಸಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ನೀವೇ ನೀವೇ ನೋಡಿ...
ನವದೆಹಲಿ(ಆ.01): ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಭಾರೀ ಬೇಡಿಕೆ ಶುರುವಾಗಿದ್ದು, ಮಾಜಿ ಅಂತಾರಾಷ್ಟ್ರೀಯ ಆಟಗಾರರು ಅರ್ಜಿ ಸಲ್ಲಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬೆಂಬಲದ ಹೊರತಾಗಿಯೂ ಹಾಲಿ ಕೋಚ್ ರವಿಶಾಸ್ತ್ರಿಗೆ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಬ್ಯಾಟಿಂಗ್ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅರ್ಜಿ!
ಅರ್ಜಿ ಸಲ್ಲಿಸಲು ಬಿಸಿಸಿಐ ನೀಡಿದ್ದ ಗಡುವು ಮಂಗಳವಾರ ಮುಕ್ತಾಯಗೊಂಡಿದ್ದು, ಆಸ್ಪ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಸೇರಿದಂತೆ ಅನೇಕರು ಬಿಸಿಸಿಐಗೆ ಅರ್ಜಿ ಸಲ್ಲಿದ್ದಾರೆ. ವಿಂಡೀಸ್ ಪ್ರವಾಸ ಮುಕ್ತಾಯದ ವರೆಗೂ ಗುತ್ತಿಗೆ ವಿಸ್ತರಣೆ ಪಡೆದಿರುವ ಶಾಸ್ತ್ರಿ, ಆಯ್ಕೆ ಪ್ರಕ್ರಿಯೆಗೆ ನೇರ ಪ್ರವೇಶ ಪಡೆದಿದ್ದಾರೆ. ಆದರೂ ಅವರ ಆಯ್ಕೆ ಅಷ್ಟು ಸುಲಭವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಾಮ್ ಮೂಡಿ-ಮಹೇಲಾ ಜಯವರ್ಧನೆ
ಟೀಂ ಇಂಡಿಯಾ ನೂತನ ಕೋಚ್; ಯಾರ ಕಡೆ ಕೊಹ್ಲಿ ಒಲವು ?
ವರದಿಗಳ ಪ್ರಕಾರ, ಟಾಮ್ ಮೂಡಿ, ನ್ಯೂಜಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್, ಶ್ರೀಲಂಕಾದ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ, ಭಾರತದ ಮಾಜಿ ಆಟಗಾರ ರಾಬಿನ್ ಸಿಂಗ್ ಹಾಗೂ ಭಾರತ ತಂಡದ ಮಾಜಿ ವ್ಯವಸ್ಥಾಪಕ ಹಾಗೂ ಜಿಂಬಾಬ್ವೆ ತಂಡದ ಕೋಚ್ ಲಾಲ್‌ಚಂದ್ ರಜಪೂತ್, ಶಾಸ್ತ್ರಿ ಜತೆ ಪೈಪೋಟಿಯಲ್ಲಿದ್ದಾರೆ.
ರವಿಶಾಸ್ತ್ರಿ ಬದಲಿಸುವುದೇ ಒಳ್ಳೆಯದು ಎಂದ ರಾಬಿನ್ ಸಿಂಗ್
ಬ್ಯಾಟಿಂಗ್ ಕೋಚ್ ಹುದ್ದೆಗೆ ಪ್ರವೀಣ್ ಆಮ್ರೆ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಗೆ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ನೆಚ್ಚಿನ ಅಭ್ಯರ್ಥಿಗಳಾಗಿದ್ದಾರೆ ಎನ್ನಲಾಗಿದೆ.