ಕೊಹ್ಲಿ ಟೀಂ ಇಂಡಿಯಾ ಬಾಸ್ ಆಗಿರಬೇಕು

By Suvarna Web DeskFirst Published Jun 26, 2017, 3:47 PM IST
Highlights

ಕೋಚ್'ಗೆ ತನ್ನದೇ ಆದ ಮಹತ್ವವಿದೆ. ಆದರೆ ಮೈದಾನದಲ್ಲಿ 11 ಆಟಗಾರರನ್ನು ಮುನ್ನೆಡೆಸುವುದು ನಾಯಕ, ಹಾಗಾಗಿ ನಾಯಕನಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆ ಹೊರತು ಕೋಚ್'ಗಲ್

ಹಮೀರ್‌'ಪುರ್‌(ಜೂ.26): ಕೋಚ್‌'ಗಿಂತ ನಾಯಕನ ಪಾತ್ರ ಪ್ರಮುಖ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್‌ ಠಾಕೂರ್‌ ಪ್ರತಿಪಾದಿಸಿದ್ದು, ವಿರಾಟ್‌ ಕೊಹ್ಲಿಗೆ ಭಾರತ ಕ್ರಿಕೆಟ್‌ ತಂಡದ ನಿಯಂತ್ರಣದ ಸಂಪೂರ್ಣ ಅಧಿಕಾರ ನೀಡಬೇಕು ಎಂದಿದ್ದಾರೆ.

ಭಾರತದ ತಂಡದ ಕ್ರಿಕೆಟ್‌ ಕೋಚ್‌ ಸ್ಥಾನಕ್ಕೆ ಅನಿಲ್‌ ಕುಂಬ್ಳೆ ರಾಜಿನಾಮೆ ನೀಡಿದ ವಿಚಾರದಲ್ಲಿ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಸುಖಾಸುಮ್ಮನೆ ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ. ಬಿಸಿಸಿಐ ತಕ್ಷಣವೇ ಈ ಅಹಿತಕರ ಘಟನೆಗೆ ಇತಿಶ್ರೀ ಹಾಡಬೇಕೆಂದು ಆಗ್ರಹಿಸಿರುವ ಅವರು, ಈ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು ನಿಲ್ಲಬೇಕೆಂದಿದ್ದಾರೆ.

Latest Videos

ಸದ್ಯ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮ ಬ್ಯಾಟ್ಸ್'ಮನ್'ಗಳಿಲ್ಲ. ವಿರಾಟ್ ಇದೇ ಪ್ರದರ್ಶನ ಮುಂದುವರೆಸಿದರೆ ಇನ್ನೂ 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.

ಕೋಚ್'ಗೆ ತನ್ನದೇ ಆದ ಮಹತ್ವವಿದೆ. ಆದರೆ ಮೈದಾನದಲ್ಲಿ 11 ಆಟಗಾರರನ್ನು ಮುನ್ನೆಡೆಸುವುದು ನಾಯಕ, ಹಾಗಾಗಿ ನಾಯಕನಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆ ಹೊರತು ಕೋಚ್'ಗಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಠಾಕೂರ್, ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.

click me!