35/3 ಸ್ಥಿತಿಯಲ್ಲಿದ್ದ ತಂಡ, ಕೊನೆಗೆ ಆಲೌಟ್ ಆಗಿದ್ದು 35ಕ್ಕೆ..!

By Web DeskFirst Published Jan 10, 2019, 1:18 PM IST
Highlights

ಸದ್ಯ ಕರ್ನಾಟಕ 27 ಅಂಕಗಳೊಂದಿಗೆ ‘ಎ’ ಮತ್ತು ‘ಬಿ’ ಗುಂಪಿ ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿ 28 ಅಂಕಗಳೊಂದಿಗೆ ವಿದರ್ಭ ಮತ್ತು 3ನೇ ಸ್ಥಾನದಲ್ಲಿ 26 ಅಂಕಗಳೊಂದಿಗೆ ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ ತಂಡಗಳು ನಂತರದ ಸ್ಥಾನವನ್ನು ಹಂಚಿಕೊಂಡಿವೆ.

ಬೆಂಗಳೂರು[ಜ.10]: 2018-19ರ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ‘ಎ’ ಗುಂಪಿನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಬರೋಡಾ ವಿರುದ್ಧ ಸೋಲನುಭವಿಸಿದರೂ ಕರ್ನಾಟಕ ಕ್ವಾರ್ಟರ್ ಫೈನಲ್  ಪ್ರವೇಶಿಸಿದೆ. ಲೀಗ್ ಹಂತದ ಕೊನೆ ಪಂದ್ಯದಲ್ಲಿ ಮಧ್ಯ ಪ್ರದೇಶ ದಿಡೀರ್ ಕುಸಿತ ಕಂಡು, ಆಂಧ್ರ ಪ್ರದೇಶದ ಎದುರು 307 ರನ್‌ಗಳ ಸೋಲನುಭವಿಸಿತು. ಈ ಮೂಲಕ ಕರ್ನಾಟಕದ ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸಿತು.

ಸದ್ಯ ಕರ್ನಾಟಕ 27 ಅಂಕಗಳೊಂದಿಗೆ ‘ಎ’ ಮತ್ತು ‘ಬಿ’ ಗುಂಪಿ ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿ 28 ಅಂಕಗಳೊಂದಿಗೆ ವಿದರ್ಭ ಮತ್ತು 3ನೇ ಸ್ಥಾನದಲ್ಲಿ 26 ಅಂಕಗಳೊಂದಿಗೆ ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ ತಂಡಗಳು ನಂತರದ ಸ್ಥಾನವನ್ನು ಹಂಚಿಕೊಂಡಿವೆ. ಆದರೆ ಅಗ್ರ ಸ್ಥಾನದಲ್ಲಿರುವ ವಿದರ್ಭ ಮತ್ತು ಸೌರಾಷ್ಟ್ರ ತಂಡಗಳ ಫಲಿತಾಂಶ ಏನೇ ಆದರೂ ಕರ್ನಾಟಕ ತಂಡ ಅಗ್ರ 5ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಕರ್ನಾಟಕ, ತನ್ನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಬರೋಡ ಎದುರು ಎರಡೇ ದಿನಗಳಲ್ಲಿ ಸೋಲನುಭವಿಸಿತ್ತು. 2014-15ರ ಋತುವಿನಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು.

ರಣಜಿ ಟ್ರೋಫಿ: ಎರಡೇ ದಿನದಲ್ಲಿ ಸೋಲುಂಡ ಕರ್ನಾಟಕ!

ಬುಧವಾರ ಇಲ್ಲಿ ಮುಕ್ತಾಯಗೊಂಡ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಆಂಧ್ರ ಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್ ಆಗಿತ್ತು. ಮಧ್ಯ ಪ್ರದೇಶ ಕೇವಲ 91 ರನ್‌ಗಳಿಸಿ ಆಲೌಟ್ ಆಗಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಆಂಧ್ರ ಭರ್ಜರಿ ಬ್ಯಾಟಿಂಗ್ ಮಾಡಿ 301 ರನ್ ಕಲೆಹಾಕಿ, ಮಧ್ಯ ಪ್ರದೇಶಕ್ಕೆ 342 ರನ್‌ಗಳ ಸವಾಲು ನೀಡಿತು. ಕೇವಲ 35 ರನ್‌ಗಳಿಗೆ ಆಲೌಟ್ ಆದ ಮಧ್ಯ ಪ್ರದೇಶ 307 ರನ್‌ಗಳ ಹೀನಾಯ ಸೋಲನುಭವಿಸಿತು. ಮಧ್ಯ ಪ್ರದೇಶ ತನ್ನ ಕೊನೆ 7 ವಿಕೆಟ್‌ಗಳನ್ನು ಕೇವಲ 23 ಎಸೆತಗಳಲ್ಲಿ ಕಳೆದುಕೊಂಡಿತು. 35 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಮಧ್ಯ ಪ್ರದೇಶ ಆಬಳಿಕ ಒಂದೂ ರನ್ ಗಳಿಸದೇ ಕೊನೆಯ 7 ವಿಕೆಟ್ ಕಳೆದುಕೊಂಡು ನಾಟಕೀಯ ಸೋಲು ಕಂಡಿತು.

click me!