ನಾಯಿಗೆ ಫುಟ್ಬಾಲ್ ಹೇಳಿಕೊಟ್ಟ ಮೆಸ್ಸಿ-ಫುಲ್ ಟ್ರೋಲ್

Published : Jul 31, 2018, 05:38 PM IST
ನಾಯಿಗೆ ಫುಟ್ಬಾಲ್ ಹೇಳಿಕೊಟ್ಟ ಮೆಸ್ಸಿ-ಫುಲ್ ಟ್ರೋಲ್

ಸಾರಾಂಶ

ಫಿಫಾ ವಿಶ್ವಕಪ್ ಸೋಲಿನ ಬಳಿಕ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ಇದೀಗ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಭಾರಿ ಮೆಸ್ಸಿ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದು ನಾಯಿ ಜೊತೆಗೆ. ಮೆಸ್ಸಿ ಹಾಗೂ ನಾಯಿ ಜೊತೆಗಿನ ಫುಟ್ಬಾಲ್ ಹೇಗಿತ್ತು? ಇಲ್ಲಿದೆ ವಿವರ.

ರೊಸಾರಿಯೋ(ಜು.31): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಸೋಲಿನ ಬಳಿಕ ಮರೆಯಾಗಿದ್ದ ಸ್ಟಾರ್ ಫುಟ್ಬಾಲ್ ಪಟು ಲಿಯೋನಲ್ ಮೆಸ್ಸಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಸೋಲಿನ ನೋವಿನಿಂದ ಹೊರಬಂದಿರುವ ಮೆಸ್ಸಿ, ಇದೀಗ ನಾಯಿಗೆ ಫುಟ್ಬಾಲ್ ಹೇಳಿಕೊಡೋ ಮೂಲಕ ಸುದ್ದಿಯಾಗಿದ್ದಾರೆ.

ಲಿಯೋನಲ್ ಮೆಸ್ಸಿ ತನ್ನ ಮುದ್ದಿನ ನಾಯಿಯೊಂದಿಗೆ ಫುಟ್ಬಾಲ್ ಅಭ್ಯಾಸ ಮಾಡಿದ್ದಾರೆ. ಫಿಫಾ ವಿಶ್ವಕಪ್ ಸೋಲಿನ ಬಳಿಕ ಮೈದಾನದಿಂದ ದೂರ ಉಳಿದಿದ್ದ ಮೆಸ್ಸಿ ಇದೀಗ ನಾಯಿ ಜೊತೆ  ಫುಟ್ಬಾಲ್ ಆಡಿದ್ದಾರೆ.

 

 

ಮೆಸ್ಸಿ ಫುಟ್ಬಾಲ್ ಅಭ್ಯಾಸಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಮೆಸ್ಸೆ ವಿಶ್ವಕಪ್ ತಯಾರಿ ಆರಂಭಿಸಿದ್ದಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಸೋಲಿನ ಬಳಿಕ ಮೆಸ್ಸಿ ನಾಯಿ ಜೊತೆ ಫುಟ್ಬಾಲ್ ಆಡೋ ಹಾಗಾಯ್ತು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ಜಾಕ್‌ಪಾಟ್‌; 8 ಕೋಟಿಗಾಗಿ ಹನಿಮೂನ್ ತ್ಯಾಗಕ್ಕೆ ರೆಡಿಯಾದ ಈ ಸ್ಟಾರ್ ಕ್ರಿಕೆಟರ್!
ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!