ಗೇಲ್’ಗೆ ವಿಶ್ರಾಂತಿ ನೀಡಿದ ವಿಂಡಿಸ್; ಗೇಲ್ ವಿಶ್ವದಾಖಲೆ ಸದ್ಯಕ್ಕಿಲ್ಲ..!

By Web DeskFirst Published Jul 31, 2018, 3:26 PM IST
Highlights

ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಮರ್ಲಾನ್ ಸ್ಯಾಮುಯಲ್ಸ್ ತಂಡ ಕೂಡಿಕೊಂಡಿದ್ದು, ಗೇಲ್’ಗೆ ವಿಶ್ರಾಂತಿ ನೀಡಲಾಗಿದೆ. 

ಸೇಂಟ್ ಕಿಟ್ಸ್[ಜು.31]: ಬಾಂಗ್ಲಾದೇಶ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಗೆ 13 ಆಟಗಾರರನ್ನೊಳಗೊಂಡ ವೆಸ್ಟ್’ಇಂಡಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್’ಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನು ಓದಿ: ಅಫ್ರಿದಿ ದಾಖಲೆ ಸರಿಗಟ್ಟಿದ ಕ್ರಿಸ್ ಗೇಲ್..!

ಇನ್ನೊಂದು ಸಿಕ್ಸರ್ ಸಿಡಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಗೆ ಗೇಲ್ ಪಾತ್ರರಾಗಲಿದ್ದಾರೆ. ನವೆಂಬರ್’ನಲ್ಲಿ ವೆಸ್ಟ್’ಇಂಡಿಸ್ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿಯವರೆಗೆ ಗೇಲ್ ದಾಖಲೆ ಮುಂದೂಡಲ್ಪಟ್ಟಂತಾಗಿದೆ. ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಮರ್ಲಾನ್ ಸ್ಯಾಮುಯಲ್ಸ್ ತಂಡ ಕೂಡಿಕೊಂಡಿದ್ದು, ಗೇಲ್’ಗೆ ವಿಶ್ರಾಂತಿ ನೀಡಲಾಗಿದೆ. 

ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಗೆ ಚಾಡ್ವಿಕ್ ವಾಲ್ಟನ್ ಹಾಗೂ ಶೆಲ್ಡಾನ್ ಕಾಟ್ರೆಲ್ ಅವರಿಗೆ ವೆಸ್ಟ್’ಇಂಡಿಸ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಕಾಟ್ರೆಲ್ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದರೆ, ಚಾಡ್ವಿಕ್ ಕೆಲವು ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.

ವೆಸ್ಟ್’ಇಂಡಿಸ್ ತಂಡ ಹೀಗಿದೆ:
ಕಾರ್ಲೋಸ್ ಬ್ರಾಥ್’ವೈಟ್[ನಾಯಕ], ಸ್ಯಾಮುಯಲ್ ಬದ್ರಿ, ಶೆಲ್ಡಾನ್ ಕಾಟ್ರೆಲ್, ಆ್ಯಂಡ್ರೆ ಫ್ಲೇಚರ್, ಎವಿನ್ ಲೆವಿಸ್, ಆ್ಯಶ್ಲೆ ನರ್ಸ್, ಕೀಮೋ ಪೌಲ್, ರೋಮನ್ ಪೋವೆಲ್, ದಿನೇಶ್ ರಾಮ್ದಿನ್[ವಿಕೆಟ್ ಕೀಪರ್], ಆ್ಯಂಡ್ರೆ ರಸೆಲ್, ಮರ್ಲಾನ್ ಸ್ಯಾಮುಯಲ್ಸ್, ಚಾಡ್ವಿಕ್ ವಾಲ್ಟನ್, ಕೆಸ್ರಿಕ್ ವಿಲಿಯಮ್ಸನ್. 

click me!