Success Story; ಚಿಕಿತ್ಸೆಗೆ ಹಣವಿಲ್ಲದೆ ತತ್ತರಿಸಿದ್ದ ಬಡ ಕಾರ್ಮಿಕನ ಮಗ: ಫುಟ್‌ಬಾಲ್ ದಂತಕಥೆ ಮೆಸ್ಸಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?

Published : Aug 31, 2026, 10:49 PM IST
Messi Money

ಸಾರಾಂಶ

ಬಾಲ್ಯದಲ್ಲಿ ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ ಬಳಲಿ, ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದ ಲಿಯೋನೆಲ್ ಮೆಸ್ಸಿ, ಬಾರ್ಸಿಲೋನಾ ಕ್ಲಬ್‌ನ ಸಹಾಯದಿಂದ ಫುಟ್‌ಬಾಲ್ ಜಗತ್ತನ್ನು ಆಳಿದರು. ಇಂದು ಅವರು ತಮ್ಮ ಪರಿಶ್ರಮದಿಂದ $1.1 ಬಿಲಿಯನ್ ಮೌಲ್ಯದ ಆಸ್ತಿ ಗಳಿಸಿ, ವಿಶ್ವದ ಎರಡನೇ ಶ್ರೀಮಂತ ಫುಟ್‌ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಫುಟ್‌ಬಾಲ್ ಜಗತ್ತಿನಲ್ಲಿ ಇಂದು ಲಿಯೋನೆಲ್ ಮೆಸ್ಸಿ ಎಂದರೆ ಅದೊಂದು ಕೇವಲ ಹೆಸರಲ್ಲ, ಅದೊಂದು ಅದ್ಭುತ ಶಕ್ತಿ. ಆದರೆ ಈ ಹಂತಕ್ಕೆ ತಲುಪಲು ಅವರು ಸಾಗಿಬಂದ ಹಾದಿ ರೋಸ್‌ಗಳ ಹಾಸಿಗೆಯಾಗಿರಲಿಲ್ಲ. 10 ನೇ ವಯಸ್ಸಿನಲ್ಲಿ ತೀವ್ರ ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ (GHD) ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆ ಕೊಡಿಸುವುದು ಆ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು. ಇಂದು ಅದೇ ಲಿಯೋನೆಲ್ ಮೆಸ್ಸಿ ಸುಮಾರು $1.1 ಬಿಲಿಯನ್ (ಸುಮಾರು 9,100 ಕೋಟಿ ರೂಪಾಯಿ) ನಿವ್ವಳ ಮೌಲ್ಯ ಹೊಂದುವ ಮೂಲಕ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ಫುಟ್‌ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಕಾರ್ಮಿಕನ ಮಗನಿಗೆ ಎದುರಾಯ್ತು ಬಡತನದ ಕಂಟಕ!

ಜುಲೈ 24, 1987 ರಂದು ಅರ್ಜೆಂಟೀನಾದ ರೊಸಾರಿಯೋದಲ್ಲಿ ಜನಿಸಿದ ಮೆಸ್ಸಿಯ ಕುಟುಂಬ ಬಡತನದಿಂದ ಕೂಡಿತ್ತು. ತಂದೆ ಜಾರ್ಜ್ ಮೆಸ್ಸಿ ಉಕ್ಕಿನ ಕಾರ್ಖಾನೆಯ ಸಾಮಾನ್ಯ ಕೆಲಸಗಾರರಾಗಿದ್ದರೆ, ತಾಯಿ ಸೆಲಿಯಾ ಮನೆಗೆಳಸ ಮಾಡುತ್ತಿದ್ದರು. ಬಡತನದಲ್ಲೂ 4 ನೇ ವಯಸ್ಸಿನಲ್ಲಿಯೇ ಮೆಸ್ಸಿಗೆ ಫುಟ್‌ಬಾಲ್ ಮೇಲಿದ್ದ ಅಪಾರ ಪ್ರೇಮ ಕಂಡು ಅಜ್ಜಿ ಸ್ಥಳೀಯ ಕ್ಲಬ್‌ಗೆ ಸೇರಿಸಿದರು. ನಂತರ 6 ನೇ ವಯಸ್ಸಿನಲ್ಲಿ ನೆವೆಲ್ಸ್ ಓಲ್ಡ್ ಬಾಯ್ಸ್ ತಂಡ ಸೇರಿದ ಮೆಸ್ಸಿ ಯುವ ತಂಡಕ್ಕಾಗಿ 176 ಪಂದ್ಯಗಳಲ್ಲಿ ಬರೋಬ್ಬರಿ 234 ಗೋಲುಗಳನ್ನು ಬಾರಿಸಿ ಮಿಂಚಿದರು. ಆದರೆ 10 ನೇ ವಯಸ್ಸಿನಲ್ಲಿ ಇವರಿಗೆ ಬೆಳವಣಿಗೆಯ ಹಾರ್ಮೋನ್ ಕೊರತೆ ಇರುವುದು ಪತ್ತೆಯಾಯಿತು. ತಿಂಗಳಿಗೆ $1,000 ಚಿಕಿತ್ಸಾ ವೆಚ್ಚವನ್ನು ಭರಿಸಲು ಆ ಬಡ ಕಾರ್ಮಿಕ ತಂದೆಗೆ ಸಾಧ್ಯವಾಗಲಿಲ್ಲ.

ಖಾಲಿ ಕರವಸ್ತ್ರದ ಮೇಲೆ ಸಹಿಯಾದ ಬದುಕಿನ ಮಹಾ ಒಪ್ಪಂದ!

ಅರ್ಜೆಂಟೀನಾದ ಸ್ಥಳೀಯ ಕ್ಲಬ್‌ಗಳು ಚಿಕಿತ್ಸೆಯ ವೆಚ್ಚ ಭರಿಸಲು ಹಿಂದೇಟು ಹಾಕಿದಾಗ, 2000 ರಲ್ಲಿ 13 ವರ್ಷದ ಮೆಸ್ಸಿಗೆ ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ನಲ್ಲಿ ಟ್ರಯಲ್ಸ್ ಅವಕಾಶ ಸಿಕ್ಕಿತು. ಮೆಸ್ಸಿಯ ಅಸಾಧಾರಣ ಆಟಕ್ಕೆ ಬೆರಗಾದ ಕ್ರೀಡಾ ನಿರ್ದೇಶಕ ಕಾರ್ಲ್ಸ್ ರೆಕ್ಸಾಚ್, ಟೆನಿಸ್ ಕ್ಲಬ್‌ನಲ್ಲಿದ್ದ ಕರವಸ್ತ್ರದ ಮೇಲೆಯೇ ಒಪ್ಪಂದದ ಪತ್ರ ಬರೆದು ಸಹಿ ಮಾಡಿಸಿಕೊಂಡರು! ಬಾರ್ಸಿಲೋನಾ ಕ್ಲಬ್ ಮೆಸ್ಸಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ವಹಿಸಿಕೊಂಡಿತು. 13 ನೇ ವಯಸ್ಸಿಗೆ ಕುಟುಂಬ, ದೇಶ ತೊರೆದು ಸ್ಪೇನ್‌ಗೆ ಬಂದ ಮೆಸ್ಸಿಗೆ ಆರಂಭದಲ್ಲಿ ಒಂಟಿತನ ಕಾಡಿದರೂ, 17 ನೇ ವಯಸ್ಸಿನಲ್ಲಿ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿ ಹಿಂತಿರುಗಿ ನೋಡಲೇ ಇಲ್ಲ.

ದೌರ್ಬಲ್ಯವೇ ಆಯ್ತು ಗೆಲುವಿನ ಅಸ್ತ್ರ!

ಒಂದು ಕಾಲದಲ್ಲಿ ಮೆಸ್ಸಿಯ ಕುಬ್ಜ ಶರೀರ ಹಾಗೂ ಸಣ್ಣ ಎತ್ತರವೇ ಅವರ ದೌರ್ಬಲ್ಯ ಎನ್ನಲಾಗಿತ್ತು. ಆದರೆ ಅದೇ ಸಣ್ಣ ನಿಲುವು ಮತ್ತು ಅತ್ಯುತ್ತಮ ಬಾಲ್ ಕಂಟ್ರೋಲ್ ಎದುರಾಳಿ ಆಟಗಾರರನ್ನು ಚಕಿತಗೊಳಿಸಿತು. ಬಾರ್ಸಿಲೋನಾ ಪರ 10 ಲಾ ಲಿಗಾ, 4 ಚಾಂಪಿಯನ್ಸ್ ಲೀಗ್ ಗೆದ್ದ ಮೆಸ್ಸಿ, ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ 2021 ಮತ್ತು 2024 ರ ಕೋಪಾ ಅಮೆರಿಕ ಹಾಗೂ 2022 ರ ಮೈಲಿಗಲ್ಲಿನ ಫಿಫಾ ವಿಶ್ವಕಪ್ ತಂದುಕೊಟ್ಟರು. ತಮ್ಮ ವೃತ್ತಿಜೀವನದಲ್ಲಿ 8 ಬಾರಿ ಪ್ರತಿಷ್ಠಿತ 'ಬ್ಯಾಲನ್ ಡಿ'ಓರ್' ಪ್ರಶಸ್ತಿ ಹಾಗೂ 46 ತಂಡ ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಶತಕೋಟ್ಯಾಧಿಪತಿಯಾದ ಕಣ್ಣೀರಿನ ಕಥೆ!

ಫೋರ್ಬ್ಸ್ ವರದಿಯ ಪ್ರಕಾರ, ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಮೈದಾನ ಹಾಗೂ ಮೈದಾನದ ಹೊರಗಿನ ಜಾಹೀರಾತುಗಳಿಂದ ಗಳಿಸಿದ ಒಟ್ಟು ಮೊತ್ತ ಸುಮಾರು $1.8 ಬಿಲಿಯನ್! ಅಡಿಡಾಸ್, ಮಾಸ್ಟರ್‌ಕಾರ್ಡ್ ಮತ್ತು ಪೆಪ್ಸಿಕೋ ನಂತಹ ಪ್ರಮುಖ ಬ್ರ್ಯಾಂಡ್‌ಗಳ ಜೊತೆಜೊತೆಗೆ ಇಂಟರ್ ಮಿಯಾಮಿ ಕ್ಲಬ್ ಪರ ಆಡುತ್ತಿರುವ ಮೆಸ್ಸಿ, ಪ್ರಸ್ತುತ ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಔಷಧಕ್ಕೂ ಪರದಾಡುತ್ತಿದ್ದ ಆ ಬಡ ಕಾರ್ಮಿಕನ ಮಗ, ತನ್ನ ಶ್ರಮ ಹಾಗೂ ಪ್ರತಿಭೆಯಿಂದ $1.1 ಬಿಲಿಯನ್ ಆಸ್ತಿ ಗಳಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Lionel Messi retirement: ಮೆಸ್ಸಿ ಫ್ಯಾನ್ಸ್‌ಗೆ ಬಿಗ್ ಶಾಕ್! ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ!
ಪಾಕ್ ಕ್ರಿಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ, ಇಂಗ್ಲೆಂಡ್‌ ಟೂರ್‌ ನಡುವೆಯೇ 6 ಪ್ಲೇಯರ್ಸ್‌ಗೆ ಗೇಟ್‌ಪಾಸ್‌