
ಪುಣೆ(ಏ.29): 6 ಸೋಲುಗಳಿಂದ ಪ್ಲೇ-ಆ್ ಸ್ಥಾನವನ್ನು ಬಹುತೇಕ ಕಳೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂದು ಅಸ್ಥಿರ ಪ್ರದರ್ಶನ ತೋರುತ್ತಿರುವ ಪುಣೆ ಸೂಪರ್‌ಜೈಂಟ್ ತಂಡವನ್ನು ಅದರ ತವರಿನಲ್ಲಿ ಎದುರಿಸಲಿದೆ. ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲುವು ಸಾಸಿ, ಉಳಿದ ಪಂದ್ಯಗಳ ಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಆರ್‌ಸಿಬಿಗೆ ಪ್ಲೇ-ಆ್ಗೇರಲು ಒಂದು ಅವಕಾಶವಿರಲಿದೆ. ಮತ್ತೊಂದೆಡೆ 8 ಪಂದ್ಯಗಳಿಂದ 8 ಅಂಕ ಸಂಪಾದಿಸಿರುವ ಪುಣೆ ಸ್ಥಿತಿ ಆರ್‌ಸಿಬಿಗಿಂತ ಉತ್ತಮವಾಗಿದ್ದು, ಇಲ್ಲಿಂದ ಮುಂದಿನ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದರೂ ಸ್ಟೀವ್ ಸ್ಮಿತ್ ಪಡೆಗೆ ಪ್ಲೇ-ಆ್ ಸ್ಥಾನ ಸಿಗುವ ಸಾಧ್ಯತೆ ಇದೆ.
ಒಟ್ಟು ಮುಖಾಮುಖಿ: 03
ಆರ್‌ಸಿಬಿ: 02
ಪುಣೆ: 01
ಸಂಭವನೀಯ ಆಟಗಾರರ ಪಟ್ಟಿ
ಕ್ರಿಸ್ ಗೇಲ್, ವಿರಾಟ್ ಕೊಹ್ಲಿ(ನಾಯಕ), ಮನ್‌ದೀಪ್ ಸಿಂಗ್, ಎಬಿ ಡಿವಿಲಿಯರ್ಸ್, ಟ್ರಾವಿಸ್ ಹೆಡ್, ಕೇದಾರ್ ಜಾಧವ್, ಅನಿಕೇತ್ ಚೌಧರಿ, ಪವನ್ ನೇಗಿ, ಸ್ಯಾಮುಯಲ್ ಬದ್ರಿ, ಎಸ್.ಅರವಿಂದ್, ಯುಜ್‌ವೇಂದ್ರ ಚಾಹಲ್.
ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ, ಸ್ಟೀವ್ ಸ್ಮಿತ್, ್ಾ ಡು ಪ್ಲೆಸಿ, ಎಂ.ಎಸ್.ಧೋನಿ, ಮನೋಜ್ ತಿವಾರಿ, ಡ್ಯಾನ್ ಕ್ರಿಶ್ಚಿಯನ್,ವಾಷಿಂಗ್ಟನ್ ಸುಂದರ್, ಜಯ್‌ದೇವ್ ಉನಾದ್ಕತ್, ಶಾರ್ದುಲ್ ಠಾಕೂರ್, ಇಮ್ರಾನ್ ತಾಹಿರ್.
ಸ್ಥಳ: ಪುಣೆ, ಪಂದ್ಯ ಆರಂಭ: ಸಂಜೆ 4.00, ನೇರ ಪ್ರಸಾರ: ಸೋನಿ ಸಿಕ್ಸ್
ಪ್ರಾಬಲ್ಯ
ಬೌಲಿಂಗ್‌ನಲ್ಲಿ ಚಾಹಲ್, ಬದ್ರಿ ಮಿಂಚು
ನೇಗಿ ಸಮಾಧಾನಕರ ಪ್ರದರ್ಶನ
ಪುಣೆ ವಿರುದ್ಧ ಉತ್ತಮ ದಾಖಲೆ
ಅತ್ಯುತ್ತಮ ಲಯದಲ್ಲಿ ತ್ರಿಪಾಠಿ
ಸ್ಮಿತ್,ಧೋನಿ ಬ್ಯಾಟಿಂಗ್ ಬಲ
ಬೌಲಿಂಗ್‌ನಲ್ಲಿ ಉನಾದ್ಕತ್ ಮಿಂಚು
ದೌರ್ಬಲ್ಯ
ದಿಗ್ಗಜ ಬ್ಯಾಟ್ಸ್‌ಮನ್‌ಗಳ ಕಳಪೆ ಆಟ
ಲಯ ಕಂಡುಕೊಳ್ಳದ ಮನ್‌ದೀಪ್
ದುಬಾರಿಯಾಗುತ್ತಿರುವ ವೇಗಿಗಳು
ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಲ
ಬೌಲಿಂಗ್‌ನಲ್ಲಿ ತಾಹಿರ್ ವೈಲ್ಯ
ತವರಿನಲ್ಲಿ ಗೆಲ್ಲಬೇಕಿರುವ ಒತ್ತಡ
ಕೋಟ್ಸ್
‘‘ನಾವು ಧನಾತ್ಮಕ ಆಟವಾಡಬೇಕಿದೆ. ತಂಡದ ಪ್ರದರ್ಶನ ನೋವುಂಟು ಮಾಡುತ್ತಿದ್ದು, ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ಆಡಬೇಕಿದೆ. ತಂಡದಲ್ಲಿ ಗೆಲ್ಲಬೇಕೆನ್ನುವ ಉತ್ಸಾಹವೇ ಕಾಣುತ್ತಿಲ್ಲ.
- ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ
‘‘ನಮ್ಮ ತಂಡ ಫೀಲ್ಡಿಂಗ್ ಸುಧಾರಿಸಬೇಕಿದೆ. ಕೆಲ ಪಂದ್ಯಗಳಲ್ಲಿ ನಾವು ನಿರ್ಣಾಯಕ ಹಂತದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಪ್ಲೇ-ಆ್ಗೇರಬೇಕಿದ್ದರೆ ಆ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕು’’
- ಸ್ಟೀವ್ ಸ್ಮಿತ್, ಪುಣೆ ನಾಯಕ
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೂ ಸಹಕರಿಸುತ್ತದೆ. ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ ಎಲ್ಲಾ 4 ಪಂದ್ಯಗಳಲ್ಲೂ ಬೃಹತ್ ಮೊತ್ತ ದಾಖಲಾಗಿದೆ. ಈ ಬಾರಿ ಕೇವಲ ಒಮ್ಮೆ ಮಾತ್ರ ಇಲ್ಲಿ ತಂಡ ಆಲೌಟ್ ಆಗಿದ್ದು, ಬೌಲರ್‌ಗಳು ಮತ್ತೊಮ್ಮೆ ವಿಕೆಟ್‌ಗಳಿಗೆ ಪರದಾಡಿದರೆ ಅಚ್ಚರಿಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.