
ಕೊಲಂಬೊ(ಫೆ.09): ಕಳೆದ ಒಂದು ವರ್ಷದಿಂದ ಮೊಣಕಾಲು ನೋವಿನಿಂದಾಗಿ ಕ್ರಿಕೆಟ್'ನಿಂದ ಆಚೆ ಉಳಿದಿದ್ದ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಇದೇ 17ರಿಂದ ಆರಂಭವಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ20 ಪಂದ್ಯ ಸರಣಿಗೆ ಆಯ್ಕೆಯಾಗಿರುವ 15 ಮಂದಿ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2016ರ ಫೆಬ್ರವರಿಯಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಕೊನೆಯ ಪಂದ್ಯವನ್ನಾಡಿದ್ದ ಮಾಲಿಂಗ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ಅಲಭ್ಯವಾಗಿದ್ದರು. ಒಂದು ವೇಳೆ ಮಾಲಿಂಗ ಮೆಲ್ಬೋರ್ನ್ ನಡೆಯಲಿರುವ ಮೊದಲ ಟಿ20 ಪಂದ್ಯವನ್ನು ಆಡಿದರೆ ಸ್ಪರ್ಧಾತ್ಮಕ ಕ್ರಿಕೆಟ್'ಗೆ ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದಂತಾಗುತ್ತದೆ.
ತಂಡ ಇಂತಿದೆ: ಉಪುಲ್ ತರಂಗಾ (ನಾಯಕ), ನಿರೋಶನ್ ಡಿಕ್ವೆಲ್ಲಾ, ಅಸೇಲಾ ಗುಣರತ್ನೆ, ದಿಲ್ಶನ್ ಮುನವೀರಾ, ಕುಸಾಲ್ ಮೆಂಡಿಸ್, ಮಿಲಿಂಡಾ ಸಿರಿವರ್ದನ, ಸಚಿತ್ರ ಪತಿರಾಣ, ಚಾಮರ ಕಪುಗಡೇರಾ, ಸೀಕ್ಕುಗೆ ಪ್ರಸನ್ನ, ನುವಾನ್ ಕುಲಸೇಖರ, ಇಸುರು ಉದಾನ, ಡುಸಾನ್ ಶನಾಕ, ಲಕ್ಷಣ್ ಸಂದಾಕನ್, ಲಸಿತ್ ಮಾಲಿಂಗಾ ಮತ್ತು ವಿಕುಮ್ ಸಂಜಯಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.