ಸ್ವಿಸ್‌ ಓಪನ್: ಶ್ರೀಕಾಂತ್‌, ಸಿಂಧು, ಸೇನ್‌ ಶುಭಾರಂಭ

By Kannadaprabha News  |  First Published Mar 21, 2024, 8:58 AM IST

ಪುರುಷರ ಸಿಂಗಲ್ಸ್‌ನಲ್ಲಿ ಸೇನ್‌ ಮಲೇಷ್ಯಾದ ಲಿಯಾಂಗ್‌ ಜುನ್‌ ಹೊ ವಿರುದ್ಧ 21-19, 15-21, 21-11 ಗೇಮ್‌ಗಳಲ್ಲಿ ಜಯಗಳಿಸಿದರೆ, ಶ್ರೀಕಾಂತ್‌ ಅವರು ಚೈನೀಸ್‌ ತೈಪೆಯ ವ್ಯಾಂಗ್‌ ತ್ಸು ವೀ ಎದುರು 21-17, 21-18ರಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಗೇರಿದರು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ, ಪ್ರಿಯಾ-ಶೃತಿ ಮಿಶ್ರಾ ಕೂಡಾ ಗೆಲುವು ಸಾಧಿಸಿದರು.


ಬಾಸೆಲ್‌(ಸ್ವಿಜರ್‌ಲೆಂಡ್‌): ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಲಕ್ಷ್ಯ ಸೇನ್‌ ಹಾಗೂ ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ ಮೊದಲ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್‌ನ ಚೋಕಿವೊಂಗ್‌ ವಿರುದ್ಧ 21-12, 21-13ರಲ್ಲಿ ಗೆಲುವು ಸಾಧಿಸಿದರು. 

ಪುರುಷರ ಸಿಂಗಲ್ಸ್‌ನಲ್ಲಿ ಸೇನ್‌ ಮಲೇಷ್ಯಾದ ಲಿಯಾಂಗ್‌ ಜುನ್‌ ಹೊ ವಿರುದ್ಧ 21-19, 15-21, 21-11 ಗೇಮ್‌ಗಳಲ್ಲಿ ಜಯಗಳಿಸಿದರೆ, ಶ್ರೀಕಾಂತ್‌ ಅವರು ಚೈನೀಸ್‌ ತೈಪೆಯ ವ್ಯಾಂಗ್‌ ತ್ಸು ವೀ ಎದುರು 21-17, 21-18ರಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಗೇರಿದರು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ, ಪ್ರಿಯಾ-ಶೃತಿ ಮಿಶ್ರಾ ಕೂಡಾ ಗೆಲುವು ಸಾಧಿಸಿದರು.

Tap to resize

Latest Videos

undefined

ರಾಷ್ಟ್ರೀಯ ಜಂಪ್ಸ್‌ ಕೂಟ: ಹೈಜಂಪ್‌ನಲ್ಲಿ ರಾಜ್ಯದ ಸಂದೇಶ್‌ಗೆ ಚಿನ್ನ

ಬೆಂಗಳೂರು: 3ನೇ ರಾಷ್ಟ್ರೀಯ ಜಂಪ್ಸ್‌ ಕೂಟದಲ್ಲಿ ಕರ್ನಾಟಕ ಅಥ್ಲೀಟ್‌ಗಳು 1 ಚಿನ್ನ ಸೇರಿದಂತೆ 2 ಪದಕಗಳನ್ನು ಬಾಚಿಕೊಂಡಿದ್ದಾರೆ. ಬುಧವಾರ ನಗರದ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ ನಡೆದ ಕೂಟದಲ್ಲಿ ಹೈಜಂಪ್‌ನಲ್ಲಿ ಜೆಸ್ಸಿ ಸಂದೇಶ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಂದೇಶ್‌ 2.20 ಮೀ. ಎತ್ತರಕ್ಕೆ ನೆಗೆದು ಅಗ್ರಸ್ಥಾನ ಪಡೆದರು. ಅವರಿಗೆ ತೀವ್ರ ಪೈಪೋಟಿ ನೀಡಿದ ತಮಿಳುನಾಡಿನ ಆದರ್ಶ್‌ ರಾಮ್‌ ಹಾಗೂ ಒಡಿಶಾದ ಸ್ವಾಧಿನ್‌ ಕುಮಾರ್‌ ತಲಾ 2.10 ಮೀ. ಎತ್ತರಕ್ಕೆ ನೆಗೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದರು.

'ದಯವಿಟ್ಟು ನನಗೆ ಹಾಗೆ ಕರೀಬೇಡಿ, ಮುಜುಗರ ಆಗುತ್ತೆ': ವಿರಾಟ್ ಕೊಹ್ಲಿ ಹೀಗಂದಿದ್ದೇಕೆ..?

ಇನ್ನು, ಮಹಿಳೆಯರ ಪೋಲ್‌ ವಾಲ್ಟ್‌ನಲ್ಲಿ ಕರ್ನಾಟಕದ ಸಿಂಧುಶ್ರೀ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು 3.80 ಮೀ. ಎತರಕ್ಕೆ ನೆಗೆದರೆ, 4.15 ಮೀ. ಎತ್ತರ ದಾಖಲಿಸಿದ ತಮಿಳುನಾಡಿನ ಪವಿತ್ರಾ ವೆಂಕಟೇಶ್‌ ಚಿನ್ನ, 3.80 ಮೀ. ಎತ್ತರಕ್ಕೆ ನೆಗೆದ ಕೇರಳದ ಮರಿಯಾ ಜೈಸನ್‌ ಬೆಳ್ಳಿ ಗೆದ್ದರು.

ಕೂಟದಲ್ಲಿ ಪುರುಷ, ಮಹಿಳಾ ವಿಭಾಗಗಳಿಗೆ ಹೈ ಜಂಪ್‌, ಲಾಂಗ್‌ಜಂಪ್‌, ಪೋಲ್‌ ವಾಲ್ಟ್‌, ಟ್ರಿಪಲ್‌ ಜಂಪ್‌ ಸ್ಪರ್ಧೆಗಳನ್ನು ನಡೆಸಲಾಯಿತು. ಕೇರಳ ಹಾಗೂ ತಮಿಳುನಾಡಿನ ಸ್ಪರ್ಧಿಗಳು ಪ್ರಾಬಲ್ಯ ಸಾಧಿಸಿದರು. ಕೇರಳ 4 ಚಿನ್ನ, 2 ಬೆಳ್ಳಿ, 1 ಕಂಚು ಗೆದ್ದರೆ, ತಮಿಳುನಾಡಿನ ಅಥ್ಲೀಟ್‌ಗಳು 2 ಚಿನ್ನ, 3 ಬೆಳ್ಳಿ ತಮ್ಮದಾಗಿಸಿಕೊಂಡರು.

ಫಿಫಾ ಅರ್ಹತಾ ಫುಟ್ಬಾಲ್: ಇಂದು ಭಾರತ vs ಆಫ್ಘನ್‌

ಅಭಾ(ಸೌದಿ ಅರೇಬಿಯಾ): ಮೊದಲ ಬಾರಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿರುವ ಭಾರತ ತಂಡ ಗುರುವಾರ ಅಫ್ಘಾನಿಸ್ತಾನ ಸವಾಲು ಎದುರಿಸಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 117ನೇ ಸ್ಥಾನದಲ್ಲಿರುವ ಭಾರತ ‘ಎ’ ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 3 ಅಂಕ ಸಂಪಾದಿಸಿದ್ದು, 3ನೇ ಸ್ಥಾನದಲ್ಲಿದೆ.

BWF Rankings ಲಕ್ಷ್ಯ ಸೇನ್‌ ವಿಶ್ವ ನಂ.13 ಆಟಗಾರ 

ಹಾಲಿ ಏಷ್ಯಾ ಚಾಂಪಿಯನ್ ಕತಾರ್‌ 6 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕುವೈತ್‌ 2ನೇ, ಇನ್ನಷ್ಟೇ ಖಾತೆ ತೆರೆಯಬೇಕಿರುವ ಅಫ್ಘಾನಿಸ್ತಾನ 4ನೇ ಸ್ಥಾನದಲ್ಲಿದೆ. ಭಾರತ ಟೂರ್ನಿಯಲ್ಲಿ ಕುವೈತ್‌ ವಿರುದ್ಧ ಗೆದ್ದಿದ್ದರೆ, ಕತಾರ್‌ ವಿರುದ್ಧ ಸೋತಿತ್ತು. 158ನೇ ಸ್ಥಾನದಲ್ಲಿರುವ ಆಫ್ಘನ್‌ ವಿರುದ್ಧ ಗೆಲ್ಲುವ ಮೂಲಕ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿದೆ.
 

click me!