ಐಸಿಸಿ ಟಿ20 ರ‍್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ ಕುಲ್ದೀಪ್

Published : Feb 12, 2019, 12:56 PM IST
ಐಸಿಸಿ ಟಿ20 ರ‍್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ ಕುಲ್ದೀಪ್

ಸಾರಾಂಶ

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 3 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಪಡೆದರೆ, ಕೆ.ಎಲ್‌.ರಾಹುಲ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್‌ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

ದುಬೈ[ಫೆ.12]: ಭಾರತ ತಂಡದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಐಸಿಸಿ ಟಿ20 ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರ ವೃತ್ತಿ ಜೀವನದ ಶ್ರೇಷ್ಠ ರ‍್ಯಾಂಕಿಂಗ್ ಇದಾಗಿದೆ. 

ಕುಲ್ದೀಪ್‌ ಹೊರತುಪಡಿಸಿ ಭಾರತದ ಇನ್ಯಾವ ಬೌಲರ್‌ ಸಹ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಇದೇ ವೇಳೆ ನ್ಯೂಜಿಲೆಂಡ್‌ ವಿರುದ್ಧ 1-2ರಿಂದ ಟಿ20 ಸರಣಿ ಸೋತ ಭಾರತ 2 ರೇಟಿಂಗ್‌ ಅಂಕ ಕಳೆದುಕೊಂಡರೂ, 2ನೇ ಸ್ಥಾನದಲ್ಲಿ ಮುಂದುವರಿದಿದೆ. ಪಾಕಿಸ್ತಾನ ನಂ.1 ಸ್ಥಾನ ಕಾಯ್ದುಕೊಂಡಿದೆ. 

ICC ನೂತನ T20 ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನ ಉಳಿಸಿಕೊಂಡ ಏಷ್ಯಾದ 2 ತಂಡಗಳು

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 3 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಪಡೆದರೆ, ಕೆ.ಎಲ್‌.ರಾಹುಲ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್‌ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ ಇಲ್ಲಿದೆ ನೋಡಿ

ಸ್ಥಾನ            ಆಟಗಾರರೇಟಿಂಗ್ ಅಂಕ
1      ಬಾಬರ್ ಅಜಂ[Pak] 885(-)
ಕಾಲಿನ್ ಮನ್ರೋ[NZ]    825(-)
3        ಆ್ಯರೋನ್ ಫಿಂಚ್[Aus]806(-)
4ಎವಿನ್ ಲೆವಿಸ್[WI]        751(-)
5ಗ್ಲೇನ್ ಮ್ಯಾಕ್ಸ್’ವೆಲ್[Aus]  745(+1)
6ಫಖರ್ ಜಮಾನ್[Pak]    700(-1)
7ರೋಹಿತ್ ಶರ್ಮಾ[Ind]    698(+3)
8ಅಲೆಕ್ಸ್ ಹೇಲ್ಸ್[Eng]    697(-)
9ಜೇಸನ್ ರಾಯ್[Eng]    688(+2)
10ಕೆ.ಎಲ್ ರಾಹುಲ್[Ind]    677(-3)

ಬೌಲರ್’ಗಳ ಟಾಪ್ 10 ಪಟ್ಟಿ

ಸ್ಥಾನ          ಆಟಗಾರ  ರೇಟಿಂಗ್ ಅಂಕ
1ರಶೀದ್ ಖಾನ್[afg]        793(-)
2ಕುಲ್ದೀಪ್ ಯಾದವ್[Ind]    728(+1)
3ಶಾಬಾದ್ ಖಾನ್[Pak]    720(-1)
4ಇಮಾದ್ ವಾಸೀಂ[Pak]    705(+5)
5ಆದಿಲ್ ರಶೀದ್[Eng]    676(-1)
6ಆ್ಯಡಂ ಜಂಪಾ[Aus]        670(-)
7ಶಕೀಬ್ ಅಲ್ ಹಸನ್[Ban]    658(-)
8ಇಶ್ ಸೋಧಿ[NZ]        657(-4)
9ಫಾಹೀಮ್ ಅಶ್ರಫ್[Pak]    655(-1)
10ಮಿಚೆಲ್ ಸ್ಯಾಂಟ್ನರ್[NZ]    638(+4)

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000
Royal Challengers Bengaluru: 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ಸೇರಲಿವೆಯಾ ಏಳು ಮಹಾ ದಾಖಲೆಗಳು