ಧೋನಿ ಬಗ್ಗೆ ನಾನು 'ಹಾಗೆ' ಹೇಳಿಲ್ಲ..! ಉಲ್ಟಾ ಹೊಡೆದ ಸ್ಪಿನ್ನರ್

By Web Desk  |  First Published May 17, 2019, 11:35 AM IST

ಧೋನಿ ಸಲಹೆಗಳು ಒಮ್ಮೊಮ್ಮೆ ಕೈಕೊಡುತ್ತವೆ ಎಂದು ಟೀಂ ಇಂಡಿಯಾ ಸ್ಪಿನ್ನರ್ ಒಬ್ಬರ ಹೇಳಿಕೆ ವಿವಾದ ಪಡೆಯುವ ಮುನ್ನವೇ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ಏನಂದ್ರು ನೀವೇ ನೋಡಿ...


ಕೋಲ್ಕತಾ: ‘ಎಂ.ಎಸ್.ಧೋನಿ ನೀಡುವ ಸಲಹೆಗಳು ಸಹ ಹಲವು ಬಾರಿ ಕೈಕೊಟ್ಟಿವೆ’ ಎಂದು ಕುಲ್ದೀಪ್ ಯಾದವ‌ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಭಾರತ ತಂಡದ ಎಡಗೈ ಸ್ಪಿನ್ನರ್ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಕುಲ್ದೀಪ್‌ ತಾವು ಆ ರೀತಿ ಹೇಳೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಧೋನಿ ವಿರುದ್ಧ ತಿರುಗಿ ಬಿದ್ರಾ ಕುಲ್ದೀಪ್ ಯಾದವ್?

Tap to resize

Latest Videos

undefined

‘ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಮ್ಮವರು ಎತ್ತಿದ ಕೈ. ನಾನು ಯಾರಿಗೂ ಸಂದರ್ಶನವನ್ನೇ ನೀಡಿಲ್ಲ. ಧೋನಿ ಬಗ್ಗೆ ನಾನು ಮಾತನಾಡಿಲ್ಲ’ ಎಂದು ಕುಲ್ದೀಪ್ ಹೇಳಿದ್ದಾರೆ. ಇದೇ ವೇಳೆ ತಮ್ಮ ಯಶಸ್ಸಿಗೆ ನಾಯಕ ವಿರಾಟ್ ಕೊಹ್ಲಿ ಕಾರಣ ಎಂದಿದ್ದಾರೆ. ‘ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಲು ಕೊಹ್ಲಿ ಪೂರ್ಣ ಸ್ವತಂತ್ರ ನೀಡಿದ್ದಾರೆ. ಆದ್ದರಿಂದಲೇ ನಾನು ಯಶಸ್ಸು ಕಾಣಲು ಸಾಧ್ಯವಾಗಿದೆ’ ಎಂದು ಕುಲ್ದೀಪ್‌ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಜ್ಜಾಗಿದ್ದು, ಮಣಿಕಟ್ಟು ಸ್ಪಿನ್ನರ್'ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 12ನೇ ಆವೃತ್ತಿಯ ಐಪಿಎಲ್'ನಲ್ಲಿ ಕುಲ್ದೀಪ್ ನೀರಸ ಪ್ರದರ್ಶನ ತೋರಿದ್ದರು. ಆಡಿದ 9 ಪಂದ್ಯಗಳಲ್ಲಿ ಕೇವಲ 04 ವಿಕೆಟ್ ಮಾತ್ರ ಕಬಳಿಸಿದ್ದರು.

click me!