
ಮೊಹಾಲಿ(ಮಾ.30): ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಭಾರಿ ವಿವಾದ ಸೃಷ್ಟಿಸಿದ್ದರು. ಜೋಸ್ ಬಟ್ಲರ್ ರನೌಟ್ ಮಾಡಿದ ಅಶ್ವಿನ್ ಟೀಕೆಗೆ ಗುರಿಯಾಗಿದ್ದರು. ಇದೀಗ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಆಲ್ರೌಂಡರ್ ಕ್ರುನಾಲ್ ಪಾಂಡ್ಯ, ಮಂಕಡಿಂಗ್ ಕುರಿತು ಆರ್ ಅಶ್ವಿನ್‌ಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಬೌಲಿಂಗ್ ಮಾಡಲು ಬಂದ ಕ್ರುನಾಲ್ ಪಾಂಡ್ಯ, ಬೌಲಿಂಗ್ ಮಾಡದೆ ತಕ್ಷಣವೇ ಅಂಪೈರ್‌ನತ್ತ ಮುಖ ಮಾಡಿ ಮಂಕಡಿಂಗ್ ರನೌಟ್ ಮಾಡೋ ಸೂಚನೆ ನೀಡಿದರು. ಅಷ್ಟರಲ್ಲಿ ನಾನ್ ಸ್ಟ್ರೈಕ್‌ನಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕ್ರಿಸ್ ಸೇರಿಕೊಂಡರು. ಆದರೆ ಕ್ರುನಾಲ್ ತನ್ನ ಜರ್ಸಿ ಸರಿ ಮಾಡೋ ರೀತಿ ಮಾಡಿ ಮತ್ತೆ ಬೌಲಿಂಗ್ ಮಾಡಲು ತೆರಳಿದರು.
ಇದನ್ನೂ ಓದಿ: ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!
ಪಾಂಡ್ಯ ಕಿಡ್ಡಿಂಗ್ ಮುಂಬೈ ತಂಡದ ಸಹ ಆಟಗಾರರಲ್ಲಿ ನಗು ತರಿಸಿತ್ತು. ಆದರೆ ಕಿಂಗ್ಸ್ ಇಲೆವೆನ್ ತಂಡ ಮುಜುಗರಕ್ಕೆ ಒಳಗಾಯ್ತು. ಪ್ರಮುಖವಾಗಿ ಆರ್ ಅಶ್ವಿನ್ ಕಿಡ್ಡಿಂಗ್ ಮಾಡಿದ ಕ್ರುನಾಲ್ ಮಂಕಡಿಂಗ್ ವಿವಾದದ ಬಿಸಿ ಏರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.