ಕೆಪಿಎಲ್: ಇಂದು ಬೆಂಗಳೂರು-ಮೈಸೂರಿನ ನಡುವೆ ಮೊದಲ ಸೆಮೀಸ್ ಕಾದಾಟ

By Web DeskFirst Published Sep 4, 2018, 12:44 PM IST
Highlights

ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ (11) ಅಗ್ರಸ್ಥಾನ ಪಡೆದಿದ್ದರೆ, 9 ಅಂಕ ಕೂಡಿ ಹಾಕಿರುವ ಹುಬ್ಬಳ್ಳಿ ಟೈಗರ್ಸ್ 2ನೇ ಸ್ಥಾನದಲ್ಲಿದೆ. ಬಿಜಾಪುರ ಬುಲ್ಸ್ (8 ಅಂಕ) ಮತ್ತು ಮೈಸೂರು ವಾರಿಯರ್ಸ್‌ (6 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದು ಉಪಾಂತ್ಯ ಪ್ರವೇಶಿಸಿವೆ. 

ಮೈಸೂರು[ಸೆ.04]: 7ನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳಿಗೆ ಸೋಮವಾರ ತೆರೆಬಿದ್ದಿದ್ದು, ಇಂದು ಹಾಗೂ ನಾಳೆ ಸೆಮಿಫೈನಲ್ ನಡೆಯಲಿದೆ. ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿ ಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ. 

ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ (11) ಅಗ್ರಸ್ಥಾನ ಪಡೆದಿದ್ದರೆ, 9 ಅಂಕ ಕೂಡಿ ಹಾಕಿರುವ ಹುಬ್ಬಳ್ಳಿ ಟೈಗರ್ಸ್ 2ನೇ ಸ್ಥಾನದಲ್ಲಿದೆ. ಬಿಜಾಪುರ ಬುಲ್ಸ್ (8 ಅಂಕ) ಮತ್ತು ಮೈಸೂರು ವಾರಿಯರ್ಸ್‌ (6 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದು ಉಪಾಂತ್ಯ ಪ್ರವೇಶಿಸಿವೆ.  ಬಳ್ಳಾರಿ ಮತ್ತು ಶಿವಮೊಗ್ಗ ಆಡಿರುವ 5 ಪಂದ್ಯಗಳಲ್ಲೂ ಸೋತು ಟೂರ್ನಿಯಿಂದ ಹೊರ ನಡೆದಿವೆ. 

ಇಂದು ನಡೆಯುವ ಮೊದಲ ಸೆಮೀಸ್‌ನಲ್ಲಿ ಬೆಂಗಳೂರು, ಮೈಸೂರು ಸವಾಲನ್ನು ಎದುರಿಸಲಿದೆ. ಬುಧವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್‌, ಹಾಲಿ ರನ್ನರ್ ಅಪ್ ಬಿಜಾಪುರ ಬುಲ್ಸ್ ಎದುರು ಸೆಣಸಲಿದೆ.  ಸೆ.6ರ ಗುರುವಾರ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳು ಮೈಸೂರಿನ ಒಡೆಯರ್ ಮೈದಾನದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿದೆ. 

click me!