ಕೆಪಿಎಲ್ 2019: ಹುಬ್ಳಿಗೆ ಶಾಕ್ ಕೊಟ್ಟ ಶಿವಮೊಗ್ಗ ಲಯನ್ಸ್

Published : Aug 17, 2019, 06:56 PM ISTUpdated : Aug 18, 2019, 02:48 PM IST
ಕೆಪಿಎಲ್ 2019: ಹುಬ್ಳಿಗೆ ಶಾಕ್ ಕೊಟ್ಟ ಶಿವಮೊಗ್ಗ ಲಯನ್ಸ್

ಸಾರಾಂಶ

8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡ ಗೆಲುವಿನೊಂದಿಗೆ ಶುಭರಂಭ ಮಾಡಿದೆ. ನಿಹಾಲ್ ಅಜೇಯ ಅರ್ಧಶತಕ ಹುಬ್ಳಿ ಟೈಗರ್ಸ್ ಗೆಲುವನ್ನು ಕಸಿದುಕೊಂಡಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಆ.17]: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಹಾಲ್ ಉಲ್ಲಾಳ್[88*] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಭಿಮನ್ಯು ಮಿಥುನ್ ಬಳಗ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

KPL ವೇಳಾಪಟ್ಟಿ:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಳಿ ಟೈಗರ್ಸ್ ಕೆ.ಬಿ ಪವನ್[53], ಕೆ.ಎಲ್ ಶಿರ್ಜಿತ್[33] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಶಿವಮೊಗ್ಗ ಪರ ಪ್ರದೀಪ್ ಟಿ, ರಿಷಭ್ ಸಿಂಗ್ ತಲಾ 3 ವಿಕೆಟ್, ಎಚ್.ಎಸ್ ಶರತ್ 2 ಹಾಗೂ ನಾಯಕ ಅಭಿಮನ್ಯು ಮಿಥುನ್, ಪೃಥ್ವಿರಾಜ್ ಶೇಖಾವತ್ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಹುಬ್ಳಿಯನ್ನು ಕೇವಲ 154 ರನ್’ಗಳಿಗೆ ಆಲೌಟ್ ಮಾಡುವಲ್ಲಿ ಶಿವಮೊಗ್ಗ ಯಶಸ್ವಿಯಾಯಿತು.

ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

ಸವಾಲಿನ ಗುರಿ ಬೆನ್ನತ್ತಿದ ಶಿವಮೊಗ್ಗ ಸ್ಫೋಟಕ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಅರ್ಜುನ್ ಹೊಯ್ಸಳ-ನಿಹಾಲ್ ಉಲ್ಲಾಳ್ 4.5 ಓವರ್;ಗಳಲ್ಲಿ 43 ರನ್ ಸಿಡಿಸಿಸುವ ಮೂಲಕ ಸ್ಫೋಟಕ ಆರಂಭ ಪಡೆಯಿತು.  ಅರ್ಜುನ್ 13 ರನ್ ಬಾರಿಸಿ ಮಿತ್ರಕಾರ್’ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಸುಜಿತ್ 1 ರನ್ ಗಳಿಸಿ ರನೌಟ್ ಆದರು. ಆದರೆ ಮೂರನೇ ವಿಕೆಟ್’ಗೆ ಜತೆಯಾದ ಉಲ್ಲಾಳ್-ಪವನ್ ದೇಶ್’ಪಾಂಡೆ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು. ಎಚ್ಚರಿಕೆಯ ಆಟವಾಡಿದ ನಿಹಾಲ್ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್ ನೆರವಿನಿಂದ ಅಜೇಯ 88 ರನ್ ಬಾರಿಸಿದರು. ಇವರಿಗೆ ದೇಶ್’ಪಾಂಡೆ, ಅಕ್ಷಯ್ ಬಲ್ಲಾಳ್ ತಲಾ 20 ರನ್ ಸಿಡಿಸುವ ಮೂಲಕ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ನಿದೀಶ್ ಭರ್ಜರಿ 2 ಬೌಂಡರಿ ಬಾರಿಸುವುದರೊಂದಿಗೆ ಇನ್ನೂ 2 ಓವರ್ ಬಾಕಿ ಇರುವಂತೆಯೇ ಶಿವಮೊಗ್ಗ ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್:

ಹುಬ್ಳಿ ಟೈಗರ್ಸ್: 154/10
ಕೆ.ಬಿ ಪವನ್: 53

ಶಿವಮೊಗ್ಗ ಲಯನ್ಸ್: 155/4
ನಿಹಾಲ್ ಉಲ್ಲಾಳ್: 88*

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?