
ಮೈಸೂರು(ಆ.28): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಇದೀಗ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ(ಆ.28) ಪ್ಲೇ ಆಫ್ ಸುತ್ತಿನ ಪಂದ್ಯಗಳು ನಡೆಯಲಿವೆ. 7 ತಂಡಗಳ ಪೈಕಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಹುಬ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಈ ನಾಲ್ಕು ತಂಡಗಳು ಫೈನಲ್ ಪ್ರವೇಶಕ್ಕೆ ಹೋರಾಟ ನಡೆಸಲಿದೆ.
ಇದನ್ನೂ ಓದಿ: ಬೆಂಗಳೂರು ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಹುಬ್ಳಿ ಟೈಗರ್ಸ್!
ಅಂಕಪಟ್ಟಿಯಲ್ಲಿ ಅಗ್ರ 4 ತಂಡಗಳು ಇದೀಗ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯ ಆಡಲಿದೆ. ಕಳೆದ 7 ಆವೃತ್ತಿಗಳಲ್ಲಿ ಕೆಪಿಎಲ್ ಟೂರ್ನಿ ಸೆಮಿಫೈನಲ್ ಮಾದರಿ ಅನುಸರಿಸಿತ್ತು. ಇದೇ ಮೊದಲ ಬಾರಿಗೆ ಐಪಿಎಲ್ ರೀತಿಯಲ್ಲಿ ಪ್ಲೇ ಆಫ್ ಸುತ್ತು ಅಳಡಿಸಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ ಇಲ್ಲಿದೆ.
KPL ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ(ಸ್ಥಳ: ಮೈಸೂರು, ಸಮಯ: ಸಂಜೆ 7 ಗಂಟೆ)
ಆಗಸ್ಟ್ 28, ಮೊದಲ ಕ್ವಾಲಿಫೈಯರ್: ಬಳ್ಳಾರಿ ಟಸ್ಕರ್ಸ್ vs ಬೆಳಗಾವಿ ಪ್ಯಾಂಥರ್ಸ್
ಆಗಸ್ಟ್ 29, ಎಲಿಮಿನೇಟರ್: ಶಿವಮೊಗ್ಗ ಲಯನ್ಸ್ vs ಹುಬ್ಳಿ ಟೈಗರ್ಸ್
ಆಗಸ್ಟ್ 30, 2ನೇ ಕ್ವಾಲಿಫೈಯರ್: (1ನೇ ಕ್ವಾಲಿಫೈಯರ್ ಸೋತ ತಂಡ vs ಗೆದ್ದ ಎಲಿಮಿನೇಟರ್ ತಂಡ)
ಆಗಸ್ಟ್ 31, ಫೈನಲ್( 1ನೇ ಕ್ವಾಲಿಫೈಯರ್ ಗೆದ್ದ ತಂಡ vs 2ನೇ ಕ್ವಾಲಿಫೈಯರ್ ಗೆದ್ದ ತಂಡ)
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಅಂಕಪಟ್ಟಿ;
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.