ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?

Published : Aug 28, 2019, 12:08 PM ISTUpdated : Aug 28, 2019, 01:01 PM IST
ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?

ಸಾರಾಂಶ

ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಸಾರಾ ಟೇಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ, ಸಿಕ್ಸರ್ ಭಾರಿಸುತ್ತಿದ್ದಾರೆ. ಪ್ರತಿ ದಿನ ಸಾರಾ ಸೋಶಿಯಲ್ ಮಿಡಿಯಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸಾರಾ ಟೇಲರ್ ಬೆತ್ತಲೆ ಫೋಟೋ. ಒಂದಲ್ಲ, ಎರಡು ಬಾರಿ ಸಾರಾ ಟೇಲರ್ ಬೆತ್ತಲಾಗಿದ್ದಾಳೆ. ಅಷ್ಟಕ್ಕು ಪದೇ ಪದೇ ಸಾರಾ ಬೆತ್ತಲಾಗುತ್ತಿರುವುದೇಕೆ? ಇಲ್ಲಿದೆ ವಿವರ.

ಬೆಂಗಳೂರು(ಆ.28):  ಇಂಗ್ಲೆಂಡ್‌ನ ಲೇಡಿ ಧೋನಿ ಮತ್ತೆ ಬಟ್ಟೆ ಕಳಚಿದ್ದಾಳೆ...ಕೈನಲ್ಲಿ ಬ್ಯಾಟ್ ಬಿಟ್ಟರೆ ಮೈಮೇಲೆ ಹುಡುಕಿದರೂ ಹತ್ತಿಯ ಒಂದೇ ಒಂದು ಎಳೆ ಕಾಣಿಸಲ್ಲ....ಮೂವತ್ತೇ ವರ್ಷದ ಸಾರಾಗೆ ಇದೆಂಥ ತಿಕ್ಕಲು ಅಂಥಾ ಹೇಳಿಕೊಂಡೇ ಅವಳ ಇನ್ ಸ್ಟಾ ಅಕೌಂಟ್‌ನ್ನು ಕಣ್ಣಲ್ಲೇ ಕೊಂದವರಿದ್ದಾರೆ....ಸಾರಾಳ ಬ್ಯಾಟಿಂಗ್ ಮತ್ತು ಕೀಪಿಂಗ್ ಕೂಡಾ ಈ ಪರಿ ಸದ್ದಾಗಿರಲಿಲ್ಲ...ಇತ್ತೀಚೆಗೆ ಇಂಗ್ಲೆಂಡನ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್ ಕೀಡಾ ಈ ಪರಿ ಸದ್ದು ಮಾಡಿರಲಿಲ್ಲ. ಬೆತ್ತಲೆಂದರೆ‌ ಹಾಗೇನಾ?

ಇದನ್ನೂ ಓದಿ: ನಗ್ನ ಪೋಟೋ ಶೇರ್ ಮಾಡಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಕೊಟ್ಟ ಸಂದೇಶ!

ಅವಳ Nude pic,  ಅದು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಇನ್ ಸ್ಟಾ ಗ್ರಾಂ ನಲ್ಲಿ...ಹಲವರಿಗೆ ಇವಳ ಇನ್ ಸ್ಟಾ ಒಂಚೂರು ಜಾಸ್ತೀನೇ ಇಷ್ಟ ಆಗಿದೆ...ನಂಬಿ ಬೆತ್ತಲೆ ಫೋಟೋನಾ ಅಂಥಾ ಹೊರಗಡೆ ಬೈದವರೂ ಸ್ವಲ್ಪ ಅತಿಯೇ ನೋಡಿದ್ದಾರೆ..ಹಾಗಿದ್ದಾಳೆ 30 ರ ಸಾರಾ....ವಿಷಯ ಅದಲ್ಲಾ...ಸಾರಾ ಹೀಗೆ ಮಾಡಿದ್ಯಾಕೆ ಅನ್ನೋದು...she is crazy..ಎಂದವರಿದ್ದಾರೆ?

 

ಕ್ರೇಜಿಗೆ ಬಿದ್ದು ಬೆತ್ತಲಾಗುವಂತಾ ಹುಡುಗಿಯಾ ಸಾರಾ...ಅಲ್ಲ....ಓದಿ...
ಅವಳು ನೀಳ ಕಾಯದ ಬಿಳುಪೇ ಅಪ್ಸರೆಯಂಥ ಹುಡುಗಿ .ಅವಳೇನು ಮೆಂಟಲ್ಲಾ ಅಂಥ ಕೇಳಿದವರ ಪ್ರಶ್ನೆಯನ್ನ ಗೌರವಿಸುತ್ತಾ ಹುಡುಕಿದೆ...ಹೌದು ಅವಳಿಗೆ ಕೆಲ‌‌ ಮಾನಸಿಕ‌ ಸಮಸ್ಯೆಗಳಿವೆ...ನಮ್ಮ ನಿಮ್ಮಂತೆಯೇ...ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಕಾಡುವಂತಹವೇ...

ಇದನ್ನೂ ಓದಿ: ಧೋನಿ ಅಲ್ಲ, ಸಾರಾ ಟೇಲರ್ ಬೆಸ್ಟ್ ವಿಕೆಟ್ ಕೀಪರ್ .!

ಇಂಗ್ಲೆಂಡ್ ನ ಸ್ಟಾರ್  ಬ್ಯಾಟ್ಸ್‌ವಿಮೆನ್ ಗೆ ಉದ್ವೇಗ ಮತ್ತು ಒತ್ತಡದ ಮಾನಸಿಕ ಸಮಸ್ಯೆ ಇದೆ..ಅವಳು ಹೇಳಿಕೊಂಡಿದ್ದಾಳೆ ಕೂಡಾ...ನಮ್ಮ ದೀಪಿಕಾ ಪಡುಕೋಣೆ ಕೂಡಾ mental depressionಗೆ ಒಳಗಾಗಿದ್ದ ಹುಡುಗಿ....ಮುದ್ದು ಹುಡುಗಿ ಪಿಗ್ಗಿ ಕೂಡಾ....ಇಂತ ಪ್ರಾಬ್ಲಂ ಗೆ ಸಾರಾ ಟೇಲರ್ ಕಂಡು ಕೊಂಡ ದಾರಿ ಸ್ವಲ್ಪ different ಅದಷ್ಟೇ difference..

 

ಇವಳು ಮತ್ತು ಇವಳಂತೆ ಸಮಸ್ಯೆ ಇರುವ ಇತರರು ಧೈರ್ಯದಿಂದ ಇರುವಂತೆ ಒಂದು ಕ್ಯಾಂಪೇನ್ ಶುರುವಾಗಿದೆ. ಮೆಡಿಕಲ್‌ ಮ್ಯಾಗಝೀನ್‌ಗಾಗಿ ಈ ಫೋಟ್ ಶೂಟ್..ದೊಡ್ಡವರಿಗೂ ಈ ಖಾಯಿಲೆ ಇದೆ ಅಂದರೆ, ನಮ್ಮದೇನ್ ಮಹಾ ಅಂತ ಎಷ್ಟೋ ಜನಕ್ಕೆ‌ರೋಗವೇ ವಾಸಿಯಾಗುವ ಕಾಲ ಇದು...

Women's health UK ಗೆ ಒಂದು ಥ್ಯಾಂಕ್ಸ್ ಹೇಳುತ್ತಾ ಈ ಅಭಿಯಾನದಲ್ಲಿ ಬೆತ್ತಲಾದಳು..ತುಂಬ ಜನರನ್ನ ಅಭಿಯಾನ ತಲುಪಲು ಬೆತ್ತಲಿಗಿಂತ ಬೆಂಕಿ ಬೇಕೆ...ದಾರಿ ಕಸಿವಿಸಿ...ಉದ್ದೇಶಕ್ಕೆ ಒಳಿತಾಗಲಿ... ಗುಡ್ ಬ್ಯಾಟಿಂಗ್ ಸಾರಾ....

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್ ಆ್ಯಂಕರ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?