ಟಿಸಿಎಸ್ 10ಕೆ ಮ್ಯಾರಥಾನ್'ನಲ್ಲಿ ಆಲೆಕ್ಸ್, ಚೆಫ್ಟೆ ಚಾಂಪಿಯನ್

By Suvarna Web DeskFirst Published May 21, 2017, 9:28 PM IST
Highlights

ಕಳೆದ 2 ಸಾಲಿನಲ್ಲಿ ವಿಜೇತರಾಗಿದ್ದ ಮೊಸಿನೆಟ್ ಜೆರೆಮೆವ್ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಜೆರೆಮೆವ್ (29.31ನಿ.) 10ನೇ ಅವರಾಗಿ ಗುರಿ ಮುಟ್ಟಿದರು.

ಬೆಂಗಳೂರು(ಮೇ.21): ರಾಜಧಾನಿಯ ಜನತೆ ಕಾತುರದಿಂದ ಎದುರು ನೋಡುತ್ತಿದ್ದ ವಿಶ್ವ 10ಕೆ ಮ್ಯಾರಥಾನ್‌ಗೆ ತೆರೆ ಬಿದ್ದಿದ್ದು, ಎಲೈಟ್ 10ಕೆ ಓಟದ ಪುರುಷ ವಿಭಾಗದಲ್ಲಿ ಕೀನ್ಯಾದ ಆಲೆಕ್ಸ್ ಕೊರಿಯೊ 28 ನಿಮಿಷ 12 ಸೆಕೆಂಡ್‌'ನಲ್ಲಿ ಗುರಿ ತಲುಪಿ ಮೊದಲಿಗರಾದರೆ, 31 ನಿಮಿಷ 51 ಸೆಕೆಂಡ್‌'ನಲ್ಲಿ ಗುರಿ ಮುಟ್ಟಿದ ಕೀನ್ಯಾದವರೇ ಆದ ಐರನ್ ಚೆಫ್ಟೆ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಲೊಡ್ಡಿದರು.

ಇನ್ನು ಭಾರತೀಯ ವಿಭಾಗದಲ್ಲಿ ನವೀನ್ ಕುಮಾರ್, 30 ನಿಮಿಷ 56 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಜಯಶೀಲರಾದರು. ಮಹರಾಷ್ಟ್ರದ ಸಾಯಿಗೀತಾ 36 ನಿಮಿಷ 1 ಸೆಕೆಂಡ್‌'ನಲ್ಲಿ ಮಹಿಳೆಯರ ವಿಭಾಗದಲ್ಲಿ ಮೊದಲಿಗರಾಗಿ ಗೆರೆ ಮುಟ್ಟಿದರು.

ಲೆಕ್ಕಾಚಾರ ಉಲ್ಟಾ: ಕಳೆದ 2 ಸಾಲಿನಲ್ಲಿ ವಿಜೇತರಾಗಿದ್ದ ಮೊಸಿನೆಟ್ ಜೆರೆಮೆವ್ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಜೆರೆಮೆವ್ (29.31ನಿ.) 10ನೇ ಅವರಾಗಿ ಗುರಿ ಮುಟ್ಟಿದರು.

ಇನ್ನುಳಿದಂತೆ 28.26 ನಿಮಿಷದಲ್ಲಿ ಗುರಿ ತಲುಪಿದ ಕೀನ್ಯಾದ ಎಡ್ವಿನ್ ಕಿಪ್ಟೊ 2ನೇ ಹಾಗೂ 28.28 ನಿಮಿಷ ತೆಗೆದುಕೊಂಡ ಉಗಾಂಡದ ಸ್ಟೀಫನ್ ಕಿಸ್ಸಾ 3ನೇ ಸ್ಥಾನ ಪಡೆದರು.ಮಹಿಳೆಯರ ವಿಭಾಗದಲ್ಲಿ ನಿರೀಕ್ಷೆಯಂತೆ ವಿಶ್ವ ಕ್ರಾಸ್‌'ಕಂಟ್ರಿ ವಿಜೇತೆ ಕೀನ್ಯಾದ ಐರನ್ ಚೆಫ್ಟೆ ಮೊದಲ ಸ್ಥಾನ ಪಡೆದರು. ಇಥಿಯೋಪಿಯಾದ ವರ್ಕ್‌ನೇಶ್ ಡಿಜೆಫಾ (32.00 ನಿ.) 2ನೇ ಹಾಗೂ ಕೀನ್ಯಾದ ಹೆಲಾಹ್ ಕ್ರಿಪೊಪ್ (32.02 ನಿ) 3ನೇ ಸ್ಥಾನ ಪಡೆದರು.

click me!