ಧೋನಿ ಬಗ್ಗೆ ಪುಣೆ ಯೂ'ಟರ್ನ್ !

Published : May 21, 2017, 05:44 PM ISTUpdated : Apr 11, 2018, 12:38 PM IST
ಧೋನಿ ಬಗ್ಗೆ ಪುಣೆ ಯೂ'ಟರ್ನ್ !

ಸಾರಾಂಶ

ಆದ­ರೀಗ ಫೈನಲ್‌ಗೂ ಮುನ್ನ ದಿನವಾದ ಶನಿವಾರ, ಪುಣೆ ತಂಡದ ಅಧಿಕೃತ ಟ್ವಿಟರ್‌ ಟೈಮ್‌ಲೈನ್‌ನಲ್ಲಿ ಹಾಕಿದ ಫೋಟೋವೊಂದು ಅಚ್ಚರಿಗೆ ಕಾರಣವಾಗಿದೆ.

ನವದೆಹಲಿ(ಮೇ.21): ಪುಣೆ ಸೂಪರ್‌ಜೈಂಟ್‌ ತಂಡ ತಡವಾಗಿಯಾ­ದರೂ ಎಂ.ಎಸ್‌.ಧೋನಿಯ ಮಹತ್ವವನ್ನು ಅರಿತುಕೊಂ­ಡಿದೆ.

ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಅವಮಾನಿಸಿದ್ದ ತಂಡದ ಮಾಲೀಕರು, ಅವರ ಆಟ ಹಾಗೂ ನಾಯಕತ್ವದ ಗುಣ­ಗಳನ್ನು ಪ್ರಶ್ನಿಸಿ ಟ್ವಿಟರ್‌ನಲ್ಲಿ ಅನಗತ್ಯ ವಿವಾದ ಸೃಷ್ಟಿಸಿದ್ದರು. ಪುಣೆ ಮಾಲೀಕರ ಈ ನಡ­ವಳಿಕೆಗೆ ಭಾರತೀಯ ಕ್ರಿಕೆಟ್‌ ಅಭಿಮಾನಿ­ಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಆದ­ರೀಗ ಫೈನಲ್‌ಗೂ ಮುನ್ನ ದಿನವಾದ ಶನಿವಾರ, ಪುಣೆ ತಂಡದ ಅಧಿಕೃತ ಟ್ವಿಟರ್‌ ಟೈಮ್‌ಲೈನ್‌ನಲ್ಲಿ ಹಾಕಿದ ಫೋಟೋವೊಂದು ಅಚ್ಚರಿಗೆ ಕಾರಣವಾಗಿದೆ. ‘ಯಾವ ತಂಡಕ್ಕೆ ಬೆಂಬಲಿಸುವುದು ಎಂದು ಮರೆತಿರಾ ? ಅದರ ಹೆಸರು ಎಂ.ಎಸ್‌.ಧೋನಿ ತಂಡ' ಎಂದು ಫೋಟೋಗೆ ಶೀರ್ಷಿಕೆ ಹಾಕಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'
2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!