ವಿರಾಟ್ ಫ್ಲಿಕ್ ಶಾಟ್ ರಹಸ್ಯ ಬಯಲು: ಕೊಹ್ಲಿಗೆ ಗುರಿ ತೋರಿದ ಗುರು ಇವರು

Published : Oct 25, 2016, 09:20 AM ISTUpdated : Apr 11, 2018, 12:48 PM IST
ವಿರಾಟ್ ಫ್ಲಿಕ್ ಶಾಟ್ ರಹಸ್ಯ ಬಯಲು: ಕೊಹ್ಲಿಗೆ ಗುರಿ ತೋರಿದ ಗುರು ಇವರು

ಸಾರಾಂಶ

ಭಾರತದ ಟೆಸ್ಟ್​​​ ನಾಯಕ ವಿರಾಟ್​​​ ಕೊಹ್ಲಿಗೆ ಜಗತ್ತಿನೆಲ್ಲಡೆ ಅಭಿಮಾನಿಗಳಿದ್ದಾರೆ. ಆತನ ಅಭಿಮಾನಿಗಳು ಕೊಹ್ಲಿಯ ಪ್ರತಿಯೊಂದು ಹೆಜ್ಜೆಯನ್ನು ಅನುಸರಿಸುತ್ತಾರೆ. ಕೊಹ್ಲಿ ಇಷ್ಟು ಏತ್ತರಕ್ಕೆ ಬೆಳೆದಿದ್ದು ಹೇಗೆ ಮತ್ತು ಕೊಹ್ಲಿಯನ್ನು ಭಾರತದ ಪ್ರಮುಖ ಆಟಗಾರನ್ನಾಗಿಸಲು ಕಾರಣರಾದವರು ಅವರ ಗುರು ರಾಜ್​​ ಕುಮಾರ್​​​​ ಶರ್ಮಾ.

ಭಾರತದ ಟೆಸ್ಟ್​​​ ನಾಯಕ ವಿರಾಟ್​​​ ಕೊಹ್ಲಿಗೆ ಜಗತ್ತಿನೆಲ್ಲಡೆ ಅಭಿಮಾನಿಗಳಿದ್ದಾರೆ. ಆತನ ಅಭಿಮಾನಿಗಳು ಕೊಹ್ಲಿಯ ಪ್ರತಿಯೊಂದು ಹೆಜ್ಜೆಯನ್ನು ಅನುಸರಿಸುತ್ತಾರೆ. ಕೊಹ್ಲಿ ಇಷ್ಟು ಏತ್ತರಕ್ಕೆ ಬೆಳೆದಿದ್ದು ಹೇಗೆ ಮತ್ತು ಕೊಹ್ಲಿಯನ್ನು ಭಾರತದ ಪ್ರಮುಖ ಆಟಗಾರನ್ನಾಗಿಸಲು ಕಾರಣರಾದವರ ಯಾರು? ಇಲ್ಲಿದೆ ವಿವರ

ವಿರಾಟ್​ ಕೊಹ್ಲಿಯ ಬಾಲ್ಯದ ಕಥೆ

ವಿರಾಟ್​​ ಕೊಹ್ಲಿ ಇತನಿಗೆ ಕ್ರಿಕೆಟ್​​'ನಲ್ಲಿ ಗೊತ್ತಿಲ್ಲದ ಹೊಡೆತಗಳಿಲ್ಲ. ಚೇಸಿಂಗ್​​ ಮಾಸ್ಟರ್​​​​​ ಎಂಬ ಬಿರುದು ಪಡೆದಿರುವ ಕೊಹ್ಲಿ ಒಬ್ಬಂಟಿಯಾಗಿ ಕ್ರೀಸ್​​​​'ನಲ್ಲಿ ನಿಂತು ಪಂದ್ಯವನ್ನು ಗೆಲ್ಲಿಸಬಲ್ಲ ಛಲವಂತ. ಕೊಹ್ಲಿಯ ಬ್ಯಾಟಿಂಗ್ ಮಾತ್ರವಲ್ಲ, ಆತನ ಫಿಟ್ನೆಸ್ಸ್​​​​​, ಅಗ್ರೆಷನ್​​​​ ಕೂಡ ಅನಸರಿಸುತ್ತಾರೆ. ಆದರೆ ಕೊಹ್ಲಿ ಇಷ್ಟೆಲ್ಲ ಸಾಧನೆ ಮಾಡೊದಕ್ಕೆ ಕಾರಣ ಅವರ ಗುರು.

9ನೇ ವರ್ಷಕ್ಕೆ ಕ್ರಿಕೆಟ್​​​ ಪ್ರೇಮ

ಕೊಹ್ಲಿಯನ್ನು ತಿದ್ದಿ ತೀಡಿದ, ಆತನಿಗೆ ಸರಿಯಾಗಿ ಬ್ಯಾಟ್​ ಹಿಡಿಯಲು ಹೇಳಿಕೊಟ್ಟ ಮೊದಲ ಕೋಚ್​​ ರಾಜ್​​​​ ಕುಮಾರ್​​​ ಶರ್ಮಾ.  ಕೊಹ್ಲಿ 9ರ ವಯಸ್ಸಿನಲ್ಲಿದ್ದಾಗ ಕ್ರಿಕೆಟ್​​​ ಕಲಿಯಲು ಅಕಾಡೆಮಿ ಸೇರಲು ತಿರ್ಮಾನಿಸಿ ಬಂದಿದ್ದು  ಇವರ ಅಕಾಡೆಮಿಗೆ. ಅಕಾಡೆಮಿ ಸೇರಿದ 2 ವಾರಕ್ಕೆ ರಾಜ್​​ ಕುಮಾರ್​​​​ ಶರ್ಮಾರವರಿಗೆ ಇತನ ಉತ್ಸಾಹ, ಪ್ರತಿಭೆ ನೋಡಿ ಈತ ಒಂದು ದಿನ ಟೀಮ್​​​ ಇಂಡಿಯವನ್ನು ಪ್ರತಿನಿಧಿಸುತ್ತಾನೆ ಎಂದು ಅಂದೇ ಅಂದುಕೊಂಡಿದ್ದರು.

ಕೊಹ್ಲಿಯ ಫ್ಲಿಕ್​​​​​ ಶಾಟ್​​​ ಎಷ್ಟು ಸೋಗಸಾಗಿರುತ್ತೆ ಅಂತ ಎಲ್ಲರಿಗೂ ತಿಳಿದಿದೆ. ಆದರೆ ಕೊಹ್ಲಿ ಬಾಲ್ಯದಲ್ಲಿ ಫ್ಲಿಕ್​​ ಶಾಟ್​​​ ಹೊಡೆದರೆ ಕೊಚ್​​​ ರಾಜ್​​ ಕುಮಾರ್​​​ ಶರ್ಮಾರಿಂದ ಕೊಹ್ಲಿ ಬೈಗುಳಕ್ಕೆ ಒಳಗಾತಿದ್ದರಂತೆ.

ಬಳಿಕ ತನ್ನ ಸಿಗ್ನೇಚರ್​​​ ಶಾಟ್​​ಗಳನ್ನು ಕರಗತ ಮಾಡಿಕೊಂಡ ಕೊಹ್ಲಿ ನಂತರ ದೀರ್ಘ ಅವಧಿ ಇನ್ನಿಂಗ್ಸ್​​​​ ಆಡಲು ಶರ್ಮಾ ಶ್ರಮ ಪಟ್ಟರು. ಅದರಿಂದಲೇ ಇಂದು ಚೇಸ್​​ ಮಾಸ್ಟರ್​​​ ಎಂಬ ಹೆಸರು ಬಂದಿದ್ದು.

ಕೊಹ್ಲಿ  ನಾಯಕತ್ವ ಗುಣ ಗುರುತಿಸಿದ ಶರ್ಮಾ

ದೀರ್ಘ ಇನ್ನಿಂಗ್ಸ್​​​ ಆಡಬಲ್ಲ ಶಕ್ತಿಯಿಂದಲೇ ಕೊಹ್ಲಿಗೆ ಟೆಸ್ಟ್​​​'ನಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಕೊಹ್ಲಿಯ ಅಗ್ರೆಷನ್​​​  ಕ್ರಿಕೆಟ್​​ ಪ್ರಿಯರಿಗೆ ಇಷ್ಟವಾಯಿತು. ಟೆಸ್ಟ್​​​ ಕ್ರಿಕೆಟ್'​​​​ನಲ್ಲಿ ಸದ್ಯ ಧೋನಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಶರ್ಮಾ  ಕೊಹ್ಲಿಯ ಬಾಲ್ಯದಲ್ಲೇ ನಾಯಕನ್ನಾಗುವ ಗುಣಗಳಿದಿದ್ದನ್ನು  ಗುರುತಿಸಿದರು. ಭಾರತದ ತಂಡಕ್ಕೆ ಅವನ್ನೊಬ್ಬ  ಯಶಸ್ವಿ ನಾಯಕನ್ನಾಗುತ್ತಾನೆಂಬ ಭರವಸೆ ಅವರಿಗಿತ್ತು.

ಅಗ್ರೆಷನ್​​​ ಜೊತೆಗೆ  ಅಭಿಮಾನಿಗಳು ಕೊಹ್ಲಿಗೆ ಫಿದಾ ಅಗಿರುವುದು ಅತನ ಫಿಟ್​​ನೆಸ್​​​​ಗೆ. ಆತನ ದೇಹ ಸೌಂದರ್ಯ ಎಂಥವರನ್ನೂ ಆಕರ್ಶಿಸುತ್ತದೆ ಅದಕ್ಕಾಗಿ ಕೊಹ್ಲಿ ಗಂಟೆಗಟ್ಟಲೆ ಜಿಮ್​​​'ನಲ್ಲಿ ಬೆವರು ಹರಿಸುತ್ತಾರೆ. ಆದರೆ ಕೊಹ್ಲಿ ತನ್ನ ಬಾಲ್ಯದಲ್ಲಿ ತಿಂಡಿಪೋತನಾಗಿದ್ದರಂತೆ.

ಸದ್ಯ ರಾಜ್​​ ಕುಮಾರ್​​​ ಶರ್ಮಾರವರಿಗೆ ಧ್ರೋಣಚಾರ್ಯ ಪ್ರಶಸ್ತಿ ದೊರೆತಿದ್ದು. ಅದಕ್ಕೆ ಕೊಹ್ಲಿಯೆ ಕಾರಣವೆಂದು ಹೇಳಿದ್ದಾರೆ. ಕೊಹ್ಲಿ ಇನ್ನೂ ಏತ್ತರಕ್ಕೆ ಬೆಳೆಯಲ್ಲಿ ಜಗತ್ತಿನ ಶ್ರೇಷ್ಠ  ಆಟಗಾರ ಮತ್ತು ನಾಯಕನಾಗಲಿ ಎಂಬುದು ಶರ್ಮಾರ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಮೆಸ್ಸಿ ಜತೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮೃತಾ ಫಡ್ನವೀಸ್! ಮಹಾರಾಷ್ಟ್ರ ಸಿಎಂ ಪತ್ನಿ ಫುಲ್ ಟ್ರೋಲ್