ಏಕದಿನ ಕ್ರಿಕೆಟ್'ನಲ್ಲಿ ಆಸ್ಟ್ರೇಲಿಯಾ ಹಿಂದಿಕ್ಕಿ ಹೊಸ ದಾಖಲೆ ಬರೆದ ಭಾರತ

By Suvarna Web DeskFirst Published Jun 26, 2017, 3:11 PM IST
Highlights

2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ರಹಾನೆ (103) ಆಕರ್ಷಕ ಶತಕ ಕೊಹ್ಲಿ ಹಾಗೂ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 43 ಓವರ್'ಗಳಲ್ಲಿ 310 ರನ್ ಗಳಿಸಿ ವಿಂಡೀಸ್ ತಂಡವನ್ನು 205 ರನ್'ಗಳಿಗೆ ಆಲ್'ಔಟ್ ಮಾಡಿ 105 ರನ್'ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಪೋರ್ಟ್ ಆಫ್ ಸ್ಪೇನ್‌(ಜೂ.26): ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೊಸ  ದಾಖಲೆ ಸೃಷ್ಟಿಸಿದೆ. ಅತೀ ಹೆಚ್ಚು ಬಾರಿ 300 ರನ್ ಗಳಿಸಿದ ಕೀರ್ತಿಗೆ ಭಾರತ ಪಾತ್ರವಾಗಿದೆ. ಈ ಮೊದಲು ಆಸ್ಟ್ರೇಲಿಯಾ ತಂಡ  ಈ ಸಾಧನೆ ಮಾಡಿತ್ತು. ಅವರ ದಾಖಲೆಯನ್ನು ಅಳಿಸಿಹಾಕಿ ಹೊಸ ಮೈಲಿಗಲ್ಲು ಸಾಧಿಸಿದೆ.

ಏಕದಿನ ಪಂದ್ಯದಲ್ಲಿ ವಿವಿಧ ದೇಶಗಳ ವಿರುದ್ಧ ಆಸ್ಟ್ರೇಲಿಯಾ ಈ ಮೊದಲು 95 ಬಾರಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ದಾಖಲಿಸಿತ್ತು. ಭಾರತ ವಿಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ 310 ರನ್ ಗಳಿಸುವ ಮೂಲಕ 96 ಬಾರಿ ಸಾಧನೆ ಮಾಡಿ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.

click me!