ಎಲ್ಲಾ ವೃತ್ತಿಗೂ ಹಿತಾಸಕ್ತಿ ಸಂಘರ್ಷವಿದೆ: ಕುಂಬ್ಳೆ

By Web Desk  |  First Published Aug 10, 2019, 7:46 PM IST

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ವಿರುದ್ಧ ಕೇಳಿಬಂದ ಹಿತಾಸಕ್ತಿ ಸಂಘರ್ಷದ ಬಗ್ಗೆ ದಿಗ್ಗಜ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಪಣಜಿ[ಜೂ.10]: ಯಾವುದೇ ವೃತ್ತಿಯಲ್ಲಿ ನೋಡಿದರೂ ಹಿತಾಸಕ್ತಿಯ ಸಂಘರ್ಷ ಎದುರಾಗುತ್ತದೆ. ಆದರೆ ಅದನ್ನು ಒಬ್ಬ ವ್ಯಕ್ತಿ ಹೇಗೆ ಎದುರಿಸುತ್ತಾನೆ ಎಂಬುದೇ ಸವಾಲು. ದೇಶಕ್ಕಾಗಿ ಕ್ರಿಕೆಟ್‌ ಆಡಿದವರು ಕ್ರಿಕೆಟ್‌ಗೆ ಕೊಡುಗೆ ನೀಡಲು ಸಾಧ್ಯವಿಲ್ಲ ಎಂಬುದು ಬಹಳ ದುರಾದೃಷ್ಟಕರವೆಂದು ಮಾಜಿ ನಾಯಕ ಅನಿಲ್‌ ಕುಂಬ್ಳೆ ತಮ್ಮ ಮಾಜಿ ಸಹ ಆಟಗಾರ ರಾಹುಲ್‌ ದ್ರಾವಿಡ್‌ ಬೆಂಬಲಕ್ಕೆ ನಿಂತಿದ್ದಾರೆ. 

ರಾಹುಲ್ ದ್ರಾವಿಡ್‌ಗೆ ನೋಟೀಸ್; BCCI ವಿರುದ್ಧ ಕ್ರಿಕೆಟಿಗರು ಗರಂ!

Tap to resize

Latest Videos

undefined

ಕಿರಿಯರ ತಂಡದ ಕೋಚ್‌ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಇಂಡಿಯಾ ಸಿಮೆಂಟ್‌ನ ಉಪಾಧ್ಯಕ್ಷರಾಗಿದ್ದು ಸ್ವಹಿತಾಸಕ್ತಿ ಎಂಬ ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜಯ್‌ ಗುಪ್ತಾ ನೀಡಿದ್ದ ದೂರನ್ನು ಆಧರಿಸಿ ಬಿಸಿಸಿಐ ನೈತಿಕ ಅಧಿಕಾರಿ ಡಾ. ಡಿ.ಕೆ.ಜೈನ್‌, ರಾಹುಲ್‌ ದ್ರಾವಿಡ್‌ಗೆ ನೋಟಿಸ್‌ ಜಾರಿ ಮಾಡಿದ್ದರು.

ಮಲ ಮಗಳ ಪಾಸ್‌ಪೋರ್ಟ್‌ಗೆ ಸಹಿ: ಕುಂಬ್ಳೆಗೆ ಸಂಕಷ್ಟ

ಈ ಮೊದಲು ಟೀಂ ಇಂಡಿಯಾ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಕೂಡಾ ಹಿತಾಸಕ್ತಿಯ ಸಂಘರ್ಷ ಎದುರಿಸಿದ್ದರು. ಇದೀಗ ಆ ಪಟ್ಟಿಗೆ ಹೊಸದಾಗಿ ರಾಹುಲ್ ದ್ರಾವಿಡ್ ಸೇರ್ಪಡೆಗೊಂಡಿದ್ದಾರೆ. ದ್ರಾವಿಡ್ ವಿರುದ್ಧ ಕೇಳಿಬಂದ ಹಿತಾಸಕ್ತಿ ಸಂಘರ್ಷದ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ, ಭಾರತ ಕ್ರಿಕೆಟ್ ತಂಡವನ್ನು ದೇವರೇ ಕಾಪಾಡಬೇಕು ಎಂದು ಹತಾಶೆ ವ್ಯಕ್ತಪಡಿಸಿದ್ದರು. 
 

click me!