
2ನೇ ಪಂದ್ಯ ಸೋತು ಟಿ20 ಸರಣಿಯನ್ನ ಮೊನ್ನೆಯೇ ಗೆಲ್ಲುವುದರಿಂದ ಟೀಂ ಇಂಡಿಯಾ ಮಿಸ್ ಮಾಡಿಕೊಂಡಿದೆ. ಇದಕ್ಕೆ ಕಾರಣವನ್ನ ಯಾರನ್ನಾದ್ರೂ ಕೇಳಿರೋ ಬೆಟ್ಟು ಮಾಡೋದು ಭಾರತೀಯ ಬ್ಯಾಟ್ಸ್ಮನ್ಗಳ ಕಡೆಗೆ. ದಾಂಡಿಗರು ವಿಫಲರಾಗಿದ್ದರಿಂದಲೇ ಟೀಂ ಇಂಡಿಯಾ ಸೋತಿತು ಅಂತ ಎಲ್ರೂ ಹೇಳ್ತಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಅಭಿಮಾನಿಗಳಂತೂ ಗುವಾಹಟಿಯಲ್ಲಿ ಸೋಲಲು ಧೋನಿಯೇ ಕಾರಣ ಅಂತಿದ್ದಾರೆ. ಅಯ್ಯೋ ಎಲ್ಲರೂ ವಿಫಲವಾದಂತೆ ಮಹಿಯೂ ವಿಫಲರಾದ್ರು. ಅದರಲ್ಲಿ ಧೊನಿಯದ್ದು ಏನು ತಪ್ಪಿದೆ ಅಂತಿರಾ..? ಇಲ್ಲಿದೆ ನೋಡಿ ಮಹಿ ಮಿಸ್ಟೇಕ್.
ಗುವಾಹಟಿಯಲ್ಲಿ DRSನಲ್ಲಿ ಮುಗ್ಗರಿಸಿದ ಮಹಿ
ಡಿಷಿಶನ್ ರವ್ಯೂ ಸಿಸ್ಟಮ್ ಅಂದ್ರೆ DRS ತೆಗೆದುಕೊಳ್ಳೋದ್ರಲ್ಲಿ ಧೋನಿ ಪಂಟರ್. ಧೋನಿ ತೆಗೆದುಕೊಂಡ DRS ಎಂದೂ ಫೇಲ್ ಆಗಿಲ್ಲ. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದರೂ ಧೋನಿ ಕೇಳಿಯೇ DRS ತೆಗೆದುಕೊಳ್ಳೋದು. ಧೋನಿ ಯೆಸ್ ಅಂದ್ರೆ DRS ತೆಗೆದುಕೊಳ್ತಾರೆ ನೋ ಅಂದ್ರೆ DRS ತೆಗೆದುಕೊಳ್ಳೊಲ್ಲ. ಅಷ್ಟು ನಂಬಿಕೆ ಧೋನಿ ಮೇಲೆ.
3 ರನ್ಗೆ ಔಟಾಗಿದ್ದ ಹೆನ್ರಿಕ್ಸ್ ಹೊಡೆದಿದ್ದು 62 ರನ್: ಧೋನಿ ಮಾಡಿದ ಮಿಸ್ಟೇಕ್'ಗೆ ಪಂದ್ಯ ಬಲಿ
119 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. 4ನೇ ಓವರ್ನ 4ನೇ ಎಸೆತದಲ್ಲಿ ಮೋಸಿಸ್ ಹೆನ್ರಿಕ್ಸ್ ಬ್ಯಾಟ್ನ ಅಂಚಿಗೆ ಸವರಿ ವಿಕೆಟ್ ಕೀಪರ್ ಧೋನಿ ಕೈಗೆ ಸೇರಿತು. ಆಗ ಎಲ್ಲರೂ ಔಟ್'ಗಾಗಿ ಮನವಿ ಮಾಡಿದ್ರು. ಆದ್ರೆ ಔಟ್ ಕೊಡಲು ಅಂಪೈರ್ ನಿರಾಕರಿಸಿದ್ರು. ಈ ವೇಳೆ ನಾಯಕ ಕೊಹ್ಲಿ DRS ಮೋರೆ ಹೋಗಲು ಪ್ಲಾನ್ ಮಾಡಿ ಧೋನಿ ನೋಡಿದ್ರು. ಆದ್ರೆ ಧೋನಿ ನಾಟೌಟ್ ಆಗಿರಬಹುದು ಎಂಬ ಸಲಹೆಕೊಟ್ಟರು. ಧೋನಿ ಸಲಹೆಯನ್ನು ಒಪ್ಪಿಕೊಂಡ ಕೊಹ್ಲಿ ಡಿಆರ್ಎಸ್ ಮನವಿ ಸಲ್ಲಿಸಲಿಲ್ಲ. ಆದರೆ ಸ್ನಿಕೋ ಮೀಟರ್'ನಲ್ಲಿ ಬಾಲ್ ಬ್ಯಾಟ್ ಅಂಚಿಗೆ ಸವರಿದ್ದು ಸ್ಪಷ್ಟವಾಗಿತ್ತು.
3 ರನ್'ಗೆ ಔಟಾಗಬೇಕಿದ್ದ ಹೆನ್ರಿಕ್ಸ್ ಅಜೇಯ 62 ರನ್ ಸಿಡಿಸಿ ಭಾರತವನ್ನ ಸೋಲಿಸಿದ್ರು. ಧೋನಿ ಮಾತು ಕೇಳಿ ಕೊಹ್ಲಿ ಪೆಚ್ಚಾದರು. ಧೋನಿಯ ತಪ್ಪಾದ ಜಡ್ಜ್ ಮೆಂಟ್ ಮತ್ತು ಅದನ್ನು ಒಪ್ಪಿಕೊಂಡ ನಾಯಕ ಕೊಹ್ಲಿ ಸೇರಿ ಪಂದ್ಯವನ್ನ ಸೋಲಿಸಿದ್ರು. ಹೆನ್ರಿಕ್ಸ್ ಔಟಾಗಿದ್ದರೆ ಕಾಂಗರೂಗಳು ಒತ್ತಡಕ್ಕೆ ಸಿಲುಕುತ್ತಿದ್ದರು. ಆಗ ಪಂದ್ಯವನ್ನ ಭಾರತ ಗೆಲ್ಲೋ ಚಾನ್ಸಸ್ ಜಾಸ್ತಿ ಇತ್ತು. ಆದ್ರೆ ಹಾಲಿ-ಮಾಜಿ ನಾಯಕರ ಮಿಸ್ಟೇಕ್ನಿಂದ ಪಂದ್ಯ ಸೋಲಬೇಕಾಯ್ತು. ಆದ್ರೂ ಕೊಹ್ಲಿ ಅಭಿಮಾನಿಗಳು ಮಾತ್ರ ಧೋನಿಯನ್ನ ಬೈಯ್ದುಕೊಳ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.