ಕುಂಬ್ಳೆಯನ್ನು ಸ್ವಾಗತಿಸಿ ತಾನು ಮಾಡಿದ್ದ ಟ್ವೀಟ್'ನ್ನೇ ಡಿಲೀಟ್ ಮಾಡಿದ ಕೊಹ್ಲಿ

By Suvarna Web DeskFirst Published Jun 22, 2017, 6:09 PM IST
Highlights

ಬಹುತೇಕ ಮಾಜಿ ಕ್ರಿಕೆಟಿಗರು ಅನಿಲ್ ಕುಂಬ್ಳೆಗೆ ಸಪೋರ್ಟ್ ಮಾಡಿದ್ದಾರೆ. ಸುನೀಲ್ ಗವಾಸ್ಕರ್, ಮದನ್ ಲಾಲ್, ಬಿಷನ್ ಸಿಂಗ್ ಬೇಡಿ ಮೊದಲಾದ ದಿಗ್ಗಜರು ಕೊಹ್ಲಿಯನ್ನ ತರಾಟೆಗೆ ತೆಗೆದುಕೊಂಡಿದ್ದು, ಕುಂಬ್ಳೆಯಂಥ ಆತ್ಮಾಭಿಮಾನಿಗಳಿಗೆ ಇಂಥ ಅವಮಾನ ಆಗಬಾರದಿತ್ತು ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಜೂನ್ 22): ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅವರು ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಬಗೆಹರಿಸಲಾಗದ ಮಟ್ಟಕ್ಕೆ ಹಳಸಿಹೋಗಿರುವುದು ಜನಸಾಮಾನ್ಯರಿಗೆ ಗೊತ್ತೇ ಆಗಿರಲಿಲ್ಲ. ಕ್ಯಾಪ್ಟನ್'ಗೆ ತಾನು ಹೊಂದಿಕೆಯಾಗದೇಹೋಗಿದ್ದು ತಮ್ಮ ರಾಜೀನಾಮೆಗೆ ಪ್ರಮುಖ ಕಾರಣವೆಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ವಿರಾಟ್ ಕೊಹ್ಲಿ ಈ ಬಗ್ಗೆ ಯಾವುದೇ ಮಾತನ್ನೂ ಆಡಿಲ್ಲ. ಹಾಗೆಂದ ಮಾತ್ರಕ್ಕೆ ಕೊಹ್ಲಿ ಜೆಂಟಲ್'ಮ್ಯಾನಾ?

ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಆಗಿ ಬಂದಾಗ ಅವರನ್ನು ಸ್ವಾಗತ ಕೋರಿ ತಾನು ಮಾಡಿದ್ದ ಟ್ವೀಟ್'ಅನ್ನೇ ಕೊಹ್ಲಿ ಡಿಲೀಟ್ ಮಾಡಿದ್ದಾರೆ.

2016ರ ಜೂನ್ 23ರಂದು ಕೊಹ್ಲಿ ಟ್ವೀಟ್ ಮಾಡಿದ್ದು....

ಕುಂಬ್ಳೆ ಮೇಲೆ ಕೊಹ್ಲಿಗೆ ಎಷ್ಟು ಅಸಮಾಧಾನ ಇದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಬೇಕಿಲ್ಲವೆನಿಸುತ್ತದೆ.

ಬಹುತೇಕ ಮಾಜಿ ಕ್ರಿಕೆಟಿಗರು ಅನಿಲ್ ಕುಂಬ್ಳೆಗೆ ಸಪೋರ್ಟ್ ಮಾಡಿದ್ದಾರೆ. ಸುನೀಲ್ ಗವಾಸ್ಕರ್, ಮದನ್ ಲಾಲ್, ಬಿಷನ್ ಸಿಂಗ್ ಬೇಡಿ ಮೊದಲಾದ ದಿಗ್ಗಜರು ಕೊಹ್ಲಿಯನ್ನ ತರಾಟೆಗೆ ತೆಗೆದುಕೊಂಡಿದ್ದು, ಕುಂಬ್ಳೆಯಂಥ ಆತ್ಮಾಭಿಮಾನಿಗಳಿಗೆ ಇಂಥ ಅವಮಾನ ಆಗಬಾರದಿತ್ತು ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

"ಇಂಥ ಪರಿಸರದಲ್ಲಿ ಯಾವುದೇ ಆತ್ಮಾಭಿಮಾನ ಇರುವ ವ್ಯಕ್ತಿ ಹೆಚ್ಚು ದಿನ ಇರುತ್ತಿರಲಿಲ್ಲ," ಎಂದು ಕುಂಬ್ಳೆ ರಾಜೀನಾಮೆಯನ್ನು ಬಿಷನ್ ಸಿಂಗ್ ಬೇಡಿ ಸ್ವಾಗತಿಸಿದ್ದಾರೆ.

"ಟೀಮ್ ಇಂಡಿಯಾ ಆಟಗಾರರಿಗೆ ತಾವು ಹೇಳಿದಂತೆ ಕೇಳುವ ಕೋಚ್ ಬೇಕಾಗಿದೆ. ಕುಂಬ್ಳೆ ರಾಜೀನಾಮೆ ಕೊಟ್ಟಿದ್ದು ಒಳ್ಳೆಯ ನಿರ್ಧಾರ" ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

click me!